Advertisement

ವಚನಗಳಿಂದ ಜೀವನ ಸುಂದರ

08:20 AM Feb 24, 2019 | Team Udayavani |

ಕಲಬುರಗಿ: ಬಸವಾದಿ ಶರಣರು ನೀಡಿರುವ ಅನುಭವದ ಅಮೃತ ಹೊಂದಿರುವ ವಚನಗಳನ್ನು ಕೇವಲ ಪಠಣ ಮಾಡಿದರಷ್ಟೇ ಸಾಲದು. ಬದಲಿಗೆ ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನ ಸುಂದರವಾಗಿ ನಿರ್ಮಾಣ ಆಗುವುದೆಂದು ಧುತ್ತರಗಾಂವ-ಉಸ್ತಾರಿ ಕೋರಣೇಶ್ವರ ಮಠದ ಪೂಜ್ಯ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಹೇಳಿದರು. ನಗರದ ಆಳಂದ ರಸ್ತೆಯ ವಿವೇಕಾನಂದ ನಗರದಲ್ಲಿ ಹಮ್ಮಿಕೊಂಡಿದ್ದ ಶರಣ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
 
“ವಚನ ಸಾಹಿತ್ಯದ ಪ್ರಸ್ತುತತೆ’ ಎನ್ನುವ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಶಿವರಂಜನ ಸತ್ಯಂಪೇಟೆ, ವಚನಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಮೌಡ್ಯತೆ, ಕಂದಾಚಾರ, ಭ್ರಷ್ಟಾಚಾರ, ಜಾತೀಯತೆ, ಅಂಧ ಶ್ರದ್ಧೆಯಂತ ಅನಿಷ್ಠಗಳ ನಿರ್ಮೂಲನೆಗೆ ಸಹಾಯಕವಾಗಿವೆ ಎಂದರು.

Advertisement

ನಿಂಗಪ್ಪ ಸಿ.ಮಂಗೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಎಚ್‌.ಬಿ. ಪಾಟೀಲ ಮಾತನಾಡಿ, ನಾವು ಮಾಡುವ ಯಾವುದೆ ಆಚರಣೆ ಮೌಲ್ಯಯುತ, ವೈಚಾರಿಕತೆಯಿಂದ ಕೂಡಿರಬೇಕು ಎಂದರು. ಇದೆ ವೇಳೆ “ವಚನ ಬೆಳಕು’ ಕೃತಿ ಲೋಕಾರ್ಪಣೆ ಮಾಡಲಾಯಿತು. ಗುಂಜ ಬಬಲಾದ ಗ್ರಾಮದ ಸಾಧಕರನ್ನು ಸತ್ಕರಿಸಲಾಯಿತು.

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಡಿ. ಪಾಟೀಲ, ಪ್ರಾಧ್ಯಾಪಕಿ ಡಾ| ಮೀನಾಕ್ಷಿ ಬಾಳಿ, ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಜಿ.ಮಹಾಗಾಂವಕರ, ಪದಾಧಿಕಾರಿಗಳಾದ ಮಲ್ಲಣ್ಣ ನಾಗರಾಳ, ವಿಶ್ವನಾಥ ಡೋಣೂರ, ಗುಂಜ ಬಬಲಾದ
ಗ್ರಾಮದ ಚಂದ್ರಶೇಖರ ಬಂಗರಗಿ, ಕ್ಷೇಮಲಿಂಗ ಮರಡಿ, ಗುಂಡಮ್ಮ ಮಂಗೊಂಡಿ, ನಂದಾದೇವಿ ಮಂಗೊಂಡಿ, ಕ್ಷೇಮಲಿಂಗ ಮಂಗೊಂಡಿ, ಚಿಂತಕ ಪ್ರಭು ಖಾನಾಪುರೆ ಹಾಗೂ ಪರಿಶುದ್ಧ ಸಮಿತಿ, ಲಿಂಗಾಯತ ಮಹಾಸಭಾ ಸದಸ್ಯರು, ಗುಂಜ ಬಬಲಾದ ಗ್ರಾಮಸ್ಥರು ಭಾಗವಹಿಸಿದ್ದರು.

ಗಾಯಕರಾದ ಕ್ಷೇಮಲಿಂಗ ಸಲಗರ, ಸಿದ್ಧಪ್ಪ ಜಮಾದಾರ ಪ್ರಾರ್ಥಿಸಿದರು. ವೀರಣ್ಣ ಬೋಳಶೆಟ್ಟಿ ಸ್ವಾಗತಿಸಿದರು, ರಾಜಶೇಖರ ಬಿ.ಮರಡಿ ನಿರೂಪಿಸಿದರು, ನಿಂಗಣ್ಣ ಕಿರಣಗಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next