Advertisement
ರಸ್ತೆಯಲ್ಲಿ ನಡೆದು ಹೋಗುವಾಗ ಸುತ್ತಮುತ್ತಲಿನ ಘಟನೆಗಳು, ಚಿತ್ರಣಗಳು ಮನಸ್ಸಿನಲ್ಲಿ ಅನೇಕ ಭಾವನೆಗಳನ್ನು ಮೂಡಿಸುತ್ತವೆ. ಕೆಲವು ಸಂಗತಿಗಳು ಕಣ್ಣಿಗೆ ಆನಂದ ನೀಡಿದರೆ, ಇನ್ನು ಹಲವು ಮನಸ್ಸಿಗೆ ನಾಟುತ್ತವೆ. ದಾರಿಯಲ್ಲಿ ಸಿಗುವ ಅನೇಕರು ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ, ಹಾಗೇ ಅವರು ಕಲಿಸುವ ಜೀವನಪಾಠವೂ.
Related Articles
Advertisement
ಒಂದಿನಕ್ಕೆ ಹೆಚ್ಚಂದ್ರೆ ಮೂರ್‍ನಾಲ್ಕು ಬುಟ್ಟಿ ಹೆಣೀಬೋದು. ಹೂವಿನಬುಟ್ಟಿ, ತರಕಾರಿ ಬುಟ್ಟಿ… ಹಿಂಗೆ ಬೇರೆ ಬೇರೆ ಬುಟ್ಟಿಗೆ ಬೇರೆ ಬೇರೆ ರೇಟು. ಒಂದಕ್ಕೆ 50-100 ರೂಪಾಯ್ ಸಿಗುತ್ತೆ. ಯಾರಾದ್ರೂ ಆರ್ಡರ್ ಕೊಟ್ರೆ, ಹೆಣೆದು ಕೊಡ್ತೀನಿ. ಈಗ ಮೊದಲಿನಷ್ಟು ಕಡಿಮೆ ದರದಲ್ಲಿ ಬಿದಿರು ಸಿಗೋದಿಲ್ಲ. ಏನೂ ಗಿಟ್ಟಲ್ಲ ಅಂದ್ರೂ, ದುಡಿಲೇಬೇಕಾದ ಅನಿವಾರ್ಯತೆ. ಒಂದು ಬಿದಿರಿಗೆ 300 ರೂ. ಕೊಡ್ಬೇಕು ನನ್ನವ್ವಾ. ಅದು ಬೆಳಗಾವಿಯಿಂದ ಬಂಬೂ ಬಜಾರಕ್ಕೆ ಬರುತ್ತೆ, ಅಲ್ಲಿಂದ ತಗೊಂಡು ಬಂದು ನಾವಿಲ್ಲಿ ಬುಟ್ಟಿ ಹೆಣೆಯೋದು.
ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ. ಅದ್ಕೆ ದೇಹ ದಣಿದ್ರೂ ಇಲ್ಲಿ ಬಂದು ಬುಟ್ಟಿ ಹೆಣೆಯೋದು. ಸ್ವಲ್ಪ ಸಾಲ ಬೇರೆ ಕುತೆ ಮೇಲಿದೆ. ಇದರಿಂದ ಬರೋ ದುಡ್ಡಲ್ಲಿ ಅದನ್ನಾ ತೀರಿಸಬೇಕು. ಜೀವ° ನಡೆಸೋಕೆ ಗೊತ್ತಿರೋದು ಇದೊಂದೇ ದಾರಿ. ಕಷ್ಟಾನೋ, ಸುಖಾನೋ, ಜೀವನ ನಡೀಬೇಕಲ. ಲಾಭ ಬಂದ್ರೆ ಖುಷಿ, ಇಲ್ಲ ಅಂದ್ರೆ ಬ್ಯಾಸ್ರ. ಇದ್ರಲ್ಲಿ ಇಷ್ಟೇ ಹಣ ಬರುತ್ತೆ ಅಂತ ಹೇಳಕಾಗಲ್ಲ. ಹೊಟ್ಟೆಪಾಡಿಗೆ ಏನಾದೊದು ಮಾಡ್ಲೆಬೇಕಲ್ಲ ತಾಯಿ. ಕಲಿತ ವಿದ್ಯೆನೆ ಕೈ ಹಿಡೀತಿರೋದು. ಮಳೆ ಬಂದ್ರೆ ವ್ಯಾಪಾರ ಮಾಡೋಕಾಗಲ್ಲ. ಹಂಗಂತ ಮನೇಲಿ ಬೆಚ್ಚಗೆ ಇರೋಕಾಗತ್ತಾ? ಜೀವನ ಬಂದಂಗೆ ಬಾಳ್ವೆ ನಡೆಸಬೇಕು ಕಣವ್ವಾ.
ಚೈತ್ರ ಹೆಚ್.ಜಿ.