Advertisement
ಅತಿರೇಕಕ್ಕೆ ಹೋಗದಿರಲಿ “ಜೀವನ’ ಎಂಬುದು ಮೂರಕ್ಷರದ ಪದವಾದರೂ ಅದುವೇ ನಮ್ಮನ್ನು ಪುಳಕಗೊಳ್ಳುವಂತೆ ಮಾಡುತ್ತದೆ. ನಮ್ಮ ಬದುಕಿನುದ್ದಕ್ಕೂ ಅಸಾಧ್ಯ ವಾದುದನ್ನು ತಲುಪಬೇಕು ಎಂಬ ಹಂಬಲವಿರಬೇಕು ನಿಜ, ಆದರೆ ಅದು ಅತಿರೇಕಕ್ಕೆ ಹೋಗಿ ಜೀವನ ಹಾಳು ಮಾಡಿಕೊಂಡಿರುವಂತಾಗಬಾರದು.
ಬದುಕು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು, ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಹೋರಾಟ ಪ್ರಕ್ರಿಯೆ ಸಾಗುತ್ತದೆ. ಕೆಲವೊಂದು ಬಾರಿ ತೀರಾ ಕಲ್ಪನೆಗೆ ಒಳಪಟ್ಟು ಪ್ರಪಂಚ ಸುಂದರವಾಗಿ ಕಾಣುವುದು ಸಹಜ. ಆದರೆ ಅದೇ ಪ್ರಪಂಚ ಜೀವನದುದ್ದಕ್ಕೂ ನಾವು ಯಾವ ರೀತಿ ಸಮಾಜದಲ್ಲಿ ಬದುಕು ಸಾಗಿಸಬೇಕು ಎಂಬು ದನ್ನೂ ತಿಳಿಸುತ್ತದೆ. ಇವೆಲ್ಲ ನಮಗೆ ಗೋಚರವಾ ಗುವುದು ಪ್ರಪಂಚದ ಒಳಿತು, ಕೆಡುಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ. ಸಾಧನೆಗೆ ಪ್ರತಿಫಲದ ಸಮ್ಮಾನ
ಜನನ- ಮರಣಗಳ ನಡುವಿನ ಜೀವನದಲ್ಲಿ ನೋವು, ನಲಿವೆಂಬ ಮುಳ್ಳುಗಳ ದಾರಿಯಿದೆ. ಅದರಿಂದ ಸಾಗಲು ಸಾಧ್ಯವಿಲ್ಲ ಎಂದು ನಾವು ಕೈಕಟ್ಟಿ ಕುಳಿತರೆ ನಮ್ಮಿಂದ ಯಾವ ಕೆಲಸವೂ ನಡೆಯಲು ಸಾಧ್ಯವಿಲ್ಲ. ಹೂವಿನ ಹಾಸಿಗೆ ನಮ್ಮದಾಗುವ ತನಕ ಪ್ರಯತ್ನಪಟ್ಟು, ಶ್ರಮ ವಹಿಸಿ, ಅದೇ ದಾರಿಯಲ್ಲಿ ನಡೆದರೆ ಅದರಿಂದಾಗುವ ಖುಷಿ ಲೆಕ್ಕಾಚಾರಕ್ಕೆ ಸಿಗದು, ಜತೆಗೆ ಈ ಸಾಧನೆಗೆ ಪ್ರತಿಫಲದ ಸಮ್ಮಾನವೂ ಸಿಗುತ್ತದೆ.
Related Articles
ಕತ್ತಲು- ಬೆಳಕು ಎಂಬ ಜೋಡೆತ್ತುಗಳು ಜಗತ್ತಿನ ಬಂಡಿಯನ್ನು ಜೀಕಿದಂತೆ ಕಷ್ಟ ಮತ್ತು ಸುಖ ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಬಡವರಿರಲಿ, ಶ್ರೀಮಂತರಿರಲಿ ಸುಖ, ದುಃಖ ಎರಡನ್ನೂ ಅನುಭವಿಸಲೇಬೇಕು. ಕೆಲವು ಬಾರಿ ಶ್ರೀಮಂತರು ದುಃಖೀಗಳಾಗಬಹುದು, ಬಡವರು ಸುಖೀಗಳಾಗಬಹುದು. ಒಟ್ಟಿನಲ್ಲಿ ಸುಖ, ದುಃಖಗಳ ಅನುಭವ ಬಂಧ ಯಾರನ್ನೂ ಬಿಟ್ಟಿಲ್ಲ. ಇಲ್ಲಿ ನಾವು ಮಾಡಬೇಕಾದುದೇನೆಂದರೆ ದುಃಖದ ಅಂಶವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಸುಖದ ಅಂಶವನ್ನು ಹೆಚ್ಚಿಸಬೇಕು.
Advertisement
ಬದುಕೆಂಬುದು ಉದ್ಯಾನವನ ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು. ಪ್ರಯೋಗ ನಿರಂತರವಾಗಿರಲಿ
ನಮ್ಮಲ್ಲಿ ಆರಂಭವಾಗುವ ಭ್ರಮೆಗಳು ಅನುಭವ ಆದಂತೆಲ್ಲ ಕಡಿಮೆ ಆಗುತ್ತವೆ. ಬದುಕಿಗೆ ಪ್ರೇರಣೆ ಬಹಳ ಮುಖ್ಯ. ಪರಿವರ್ತನೆಯ ಪರ ಧ್ವನಿ ಎತ್ತಿದವರಿಗೆ ನಿಂದನೆ ಸಾಮಾನ್ಯ.
ಆದರೆ ಪ್ರಯೋಗಗಳು ಮಾತ್ರ ನಿರಂತರವಾಗಿರಬೇಕು. ಮಾನವ ಏಕಾಂಗಿಯಲ್ಲ
ಅರಿಸ್ಟಾಟಲ್ ಹೇಳಿದಂತೆ ಮಾನವ ಸಂಘಜೀವಿ. ಅವನು ಏಕಾಂಗಿಯಾಗಿ ಸಮಾಜದಲ್ಲಿ ಬದುಕಲಾರ. ಇತರರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಅವನ ಜೀವನ ಸಾಗುತ್ತದೆ. “ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ’ ಎಂಬಂತೆ ಜೀವನ ನಮ್ಮನ್ನು ರೂಪಿಸಬಾರದು, ನಾವು ಜೀವನವನ್ನು ರೂಪಿಸಬೇಕು. ಇದನ್ನು ತಿಳಿದುಕೊಂಡಾಗ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ. ಪ್ರಯತ್ನದ ಫಲ
ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನುವ ಗಟ್ಟಿ ನಿಶ್ಚಯ ಮನಸ್ಸಿನಲ್ಲಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರಿ ಇಟ್ಟುಕೊಳ್ಳುವುದರ ಜತೆಗೆ ಪ್ರಯತ್ನವೂ ಇರಬೇಕು. ಪ್ರಯತ್ನವಿದ್ದರೆ ಫಲ ದೊರಕುತ್ತದೆ. ಹೀಗೆ ಪ್ರಯತ್ನಪಟ್ಟು ಸಾಧಿಸಿದವರಲ್ಲಿ ಕುರುಡ ಡೇವಿಡ್‌ಮನ್‌ನೂ ಒಬ್ಬ. – ಜಯಾನಂದ ಅಮೀನ್