Advertisement

Life Insurance Corporation; ಜೀವನ್‌ ಉತ್ಸವ್‌ ವಿಮೆ ಜಾರಿ

12:43 AM Nov 30, 2023 | Team Udayavani |

ಉಡುಪಿ: ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ವು ಜೀವನ್‌ ಉತ್ಸವ ಎನ್ನುವ ಹೊಸ ವಿಮಾ ಯೋಜನೆಯನ್ನು ಆರಂಭಿಸಿದ್ದು, ಬುಧವಾರದಿಂದಲೇ ಯೋಜನೆ ನೋಂದಣಿ ಆರಂಭವಾಗಿದೆ ಎಂದು ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್‌ ವಿ. ಮುಧೋಳ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮೊದಲ ದಿನವೇ ವಿಭಾಗದ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಹಾಗೂ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಸೇರಿದಂತೆ ದಕ್ಷಿಣ ಮಧ್ಯವಲಯದಲ್ಲಿ 1 ಸಾವಿರಕ್ಕೂ ಅಧಿಕ ಪಾಲಿಸಿ ಮಾರಾಟ ವಾಗಿದೆ. 90 ದಿನದ ಮಗುವಿನಿಂದ 65 ವರ್ಷದವರು ಈ ಪಾಲಿಸಿ ಪಡೆಯಬಹುದಾಗಿದೆ ಎಂದರು.

ಅಜೀವ ವಿಮೆ ಅಥವಾ ಉಳಿತಾಯ ಯೋಜನೆಯ ಪಾಲಿಸಿ ಇದಾಗಿದೆ. ಕನಿಷ್ಠ 5 ಲಕ್ಷ ವಿಮಾ ಮೊತ್ತವಾಗಿರುತ್ತದೆ. ಪಾಲಿಯ ಪ್ರೀಮಿಯಂ ಅವಧಿ 5 ವರ್ಷದಿಂದ 16 ವರ್ಷದ್ದಾಗಿರುತ್ತದೆ. ನಿರ್ದಿಷ್ಟ ಅವಧಿ ಮುಕ್ತಾಯವಾದ ಅನಂತರದಲ್ಲಿ ವಿಮಾ ಮೊತ್ತದ ಶೇ. 10ರಷ್ಟನ್ನು ಪಾಲಿಸಿದಾರಿಗೆ ಪ್ರತೀ ವರ್ಷ ಜೀವಿತಾವಧಿ ಪೂರ್ತಿ ನೀಡಲಾಗುತ್ತದೆ.ಇದರಲ್ಲಿ ರೆಗ್ಯೂಲರ್‌ ಇನ್‌ಕಮ್‌ ಬೆನಿಫಿಟ್‌ ಹಾಗೂ ಫ್ಲೆಕ್ಸಿ ಇನ್‌ಕಮ್‌ ಬೆನಿಫಿಟ್‌ ಆಯ್ಕೆಯಿದೆ. ಪ್ರೀಮಿಯಂ ಪಾವತಿಯ ಅವಧಿಯಲ್ಲಿ ಪ್ರತಿ ಸಾವಿರ ವಿಮಾ ಮೊತ್ತಕ್ಕೆ 40 ರೂ.ಗಳ ಖಾತ್ರಿ ಸೇರ್ಪಡೆ ಇರುತ್ತದೆ ಎಂದು ಹೇಳಿದರು.

ಮಾರುಕಟ್ಟೆ ಪ್ರಬಂಧಕ ಬಿಜುಜೋಸೆಫ್, ವಿಕ್ರಯ ಪ್ರಬಂಧಕ ಪುರಂದರ ಪತ್ರಿಕಾ ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next