Advertisement

ವರ್ತಮಾನದ ಸಂತೋಷದಲ್ಲೇ ಬದುಕು: ಅಮ್ಮನ ಅನುಗ್ರಹ ನುಡಿ

09:56 AM Feb 22, 2018 | |

ಮಂಗಳೂರು: ಕಳೆದುಹೋದ ದಿನಗಳನ್ನು ನೆನೆಯುತ್ತ ದುಃಖಪಡುವ ಬದಲು ಇಂದಿನ ದಿನವನ್ನು ಸಂತೋಷದಲ್ಲಿ ಕಳೆಯುವ ಬಗ್ಗೆ ನಿರ್ಧರಿಸಬೇಕು. ಈ ಮೂಲಕ ಜೀವನದಲ್ಲಿ ಸಂತೋಷವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ನುಡಿದರು.

Advertisement

ಮಂಗಳೂರಿನ ಬೋಳೂರಿನ ಅಮೃತಾ ನಂದ ಮಯಿ ಮಠದಲ್ಲಿ ಎರಡು ದಿನ ಆಯೋಜಿಸ ಲಾಗಿದ್ದ “ಅಮೃತ ಸಂಗಮ’ ಕಾರ್ಯಕ್ರಮದ ಕೊನೆಯ ದಿನ ವಾದ ಬುಧವಾರ ಅವರು ಆಶೀರ್ವಚನವಿತ್ತರು.

ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲದಿರುವುದರಿಂದ ಎಲ್ಲರಲ್ಲಿಯೂ ಇರುವ ಈಶ್ವರತ್ವ ನಮ್ಮ ಗಮನಕ್ಕೆ ಹಾಗೂ ಅನುಭವಕ್ಕೆ ಬರುತ್ತಿಲ್ಲ. ನಮ್ಮ ಮನಸ್ಸು ನೀರಿನ ಹಾಗೆ ಯಾವತ್ತೂ ಕೆಳಮುಖವಾಗಿರುತ್ತದೆ. ಆದರೆ ಬೋಧ ಬೆಂಕಿಯ ಹಾಗೆ ಮೇಲ್ಮುಖವಾಗಿ ಇರುತ್ತದೆ. ಆದ್ದರಿಂದ ಮನಸ್ಸಿನಲ್ಲಿರುವ ಬೋಧ ವನ್ನು ಜಾಗೃತಿ ಮಾಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಮಾನವೀಯತೆ ಸೇವೆ, ಮಮತೆಯ ದಿವ್ಯ ಪ್ರೇಮವು ಸಾಕ್ಷಾತ್ಕಾರಕ್ಕೆ ಮಹಾದ್ವಾರ ಇದ್ದಂತೆ. ಜ್ಞಾನದ ನೆಲೆಯಲ್ಲಿ ಮಮತೆಯೊಂದಿಗೆ ಆಧ್ಯಾತ್ಮಿಕ ಉತ್ಸಾಹ ವರ್ಧಿಸುತ್ತದೆ. ಭಕ್ತಿಯಿಂದ ಮಾತ್ರ ಜ್ಞಾನ ಸ್ಥಿರಗೊಳ್ಳುತ್ತದೆ ಎಂದವರು ವಿವರಿಸಿದರು. 

ಕೆಲವರು ಅತಿಯಾಗಿ ಮಾತನಾಡುವವರು ಇರುತ್ತಾರೆ. ಅತಿಯಾಗಿ ಮಾತನಾಡುವವನ ಮನಸ್ಸಿ ನಲ್ಲಿ ಅತಿಯಾದ ಆಲೋಚನೆ ಇರುತ್ತದೆ. ಆದರೆ ಕಡಿಮೆ ಮಾತನಾಡುವವನ ಮನಸ್ಸು ಭಾರ ವಾಗಿರುತ್ತದೆ. ಇದರಿಂದ ಆತ ಖನ್ನತೆಗೆ ಹೋಗ ಬಹುದು. ನಮ್ಮ ಭಾವನೆ ಗಳನ್ನು ಅದುಮಿಟ್ಟು ಕೊಳ್ಳುವುದರಿಂದ ಶಾರೀರಿಕ ಹಾಗೂ ಮಾನಸಿಕ ರೋಗಗಳಿಗೆ ಕಾರಣ ವಾಗಬಹುದು. ಧ್ಯಾನ, ಜಪ, ಪ್ರಾರ್ಥನೆ, ಸತ್ಸಂಗದ ಮೂಲಕ ಕಡಿಮೆ ಮಾಡ ಬಹುದಾಗಿದೆ ಎಂದರು.

Advertisement

ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ ರಾಜ್‌ ಕಾಂಚನ್‌, ಸಮಿತಿ ಗೌರವಾಧ್ಯಕ್ಷ ಡಾ| ಜೀವರಾಜ್‌ ಸೊರಕೆ, ಕರ್ನಾಟಕ ಸೆಕ್ಯುರಿಟಿ ಸರ್ವೀಸಸ್‌ ಎಂಡಿ ಟಿ.ಎ. ಅಶೋಕನ್‌, ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ| ಇಂದುಮತಿ, ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್‌, ಮಲ್ಪೆ ಉದ್ಯಮಿ ರಮೇಶ್‌ ಕೋಟ್ಯಾನ್‌, ಪಂಕಜ್‌ ವಸಾನಿ, ಸಮಿತಿ ಗೌರವಾಧ್ಯಕ್ಷರಾದ ಡಾ| ವೈ.ಸನತ್‌ ಹೆಗ್ಡೆ, ಡಾ| ಶ್ರುತಿ ಎನ್‌. ಹೆಗ್ಡೆ, ವಾಮನ್‌ ಕಾಮತ್‌ ಮುಂತಾದವರು ಉಪಸ್ಥಿತರಿದ್ದರು.

ಸತ್ಸಂಗ-ಭಜನೆ-ಧ್ಯಾನ
ಬೋಳೂರಿನ ಅಮೃತಾನಂದಮಯಿ ಮಠ ದಲ್ಲಿ ಬುಧವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷ ಪೂಜೆ, ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಮಾನಸ ಪೂಜೆಗಳು ನೆರವೇರಿದವು. ಯಜ್ಞಶಾಲೆಯಲ್ಲಿ ಅಮ್ಮನವರ ಪ್ರವಚನ ನಡೆಯಿತು. ಜತೆಗೆ ಸಾವಿರಾರು ಭಕ್ತರು ಅಮ್ಮನವರ ಅನುಗ್ರಹ ದರ್ಶನ ಪಡೆದರು. ಮಾತೆಯರು ಅಮ್ಮ ಅವರಿಗೆ ವಿಶೇಷ ಆರತಿ ಬೆಳಗಿದರು.

Advertisement

Udayavani is now on Telegram. Click here to join our channel and stay updated with the latest news.

Next