ಚಿಕ್ಕೋಡಿ: ಹೆತ್ತ ಮಗಳನ್ನು ಸಾಕಲು ಆಗುದಿಲ್ಲ ಮತ್ತು ಅವರ ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಾಗುದಿಲ್ಲ ಎಂದು ಬರ್ಬರವಾಗಿ ಹತ್ಯೆ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಕಾಗವಾಡ ಪೊಲೀಸ್ ಠಾಣೆ ಹದ್ದಿಯ ಮಂಗಸೂಳಿ ಮಲ್ಲಾರವಾಡಿ ಬಸವರಾಜ ಈರಪ್ಪ ಮಗದುಮ್ಮ(35) ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ.
ಕಾಗವಾಡ ಪೊಲೀಸ್ ಠಾಣೆಯ ಹದ್ದಿಯ ಅಥಣಿ ತಾಲೂಕಿನ ಮಂಗಸೂಳಿ ಮಲ್ಲಾರವಾಡಿ ಬಸವರಾಜ ಮಗದುಮ್ಮ ತನ್ನ ಹೆತ್ತ ಮಗಳಾದ ಸಂಗೀತಾ ಬಸವರಾಜ ಮಗದುಮ್ಮ(7) ಈತಳನ್ನು ದಿನಾಂಕ 9-6-2016 ರಂದು ಅಪ್ಪಾಸಾಹೇಬ ಶಿಂಧೆ ಇವರ ಪತ್ರಾಸ ಶೆಡ್ ದಲ್ಲಿ ಯಾರು ಇಲ್ಲದ ಸಮಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಕುರಿತು ಅಥಣಿ ಸಿಪಿಐ ಎಸ್.ಎಚ್.ಶೇಖರೇಪ್ಪ ದೋಷಾರೋಪನ ಪತ್ರ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಆರೋಪಿ ಬಸವರಾಜ ಮಗದುಮ್ಮಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವೈ.ಜಿ.ತುಂಗಳ ವಾದ ಮಂಡಿಸಿದರು.