Advertisement

2007ರ ಫೈಜಾಬಾದ್ ನ್ಯಾಯಾಲಯ ಸ್ಫೋಟ: ಇಬ್ಬರು ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ

10:16 AM Dec 22, 2019 | Mithun PG |

ಅಯೋಧ್ಯೆ: 2007ರ ಫೈಜಾಬಾದ್, ಲಕ್ನೋ ಮತ್ತು ವಾರಣಾಸಿಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಭಾಗಿಯಾದ ಕಾರಣ ಇಬ್ಬರು ಭಯೋತ್ಪಾದಕರಾದ ಮೊಹಮ್ಮದ್ ತಾರಿಕ್ ಮತ್ತು ಮೊಹಮ್ಮದ್ ಅಖ್ತರ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 50,000 ರೂ. ದಂಡ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಹೊರಡಿಸಿದೆ. ಮತ್ತೊಬ್ಬ ಆರೋಪಿ ಸಜ್ಜಾದೂರ್ ರೆಹಮಾನ್ ಸಾಕ್ಷ್ಯಾಧಾರದ ಕೊರತೆಯಿಂದ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾನೆ.

Advertisement

12 ವರ್ಷಗಳ ತನಿಖೆ ಮತ್ತು ವಿಚಾರಣೆಯ ನಂತರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಶೋಕ್ ಕುಮಾರ್ ಅವರು ತೀರ್ಪು ನೀಡಿದ್ದಾರೆ.  2007 ನವೆಂಬರ್ 23 ರಂದು ಫೈಜಾಬಾದ್ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ಮೂವರನ್ನು ಬಂಧಿಸಲಾಗಿತ್ತು.

ಇಬ್ಬರು ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಸಾಕ್ಷ್ಯಾಧಾರದ ಕೊರತೆಯಿಂದಾಗಿ ಮೂರನೇ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಫೈಜಾಬಾದ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ಬಹದ್ದೂರ್ ಸಿಂಗ್ ಹೇಳಿದ್ದಾರೆ. “ಇದೊಂದು ಉತ್ತಮ ತೀರ್ಪು. ಇಬ್ಬರು  ಫೈಜಾಬಾದ್ ಸ್ಫೋಟದಲ್ಲಿ ಭಾಗಿಯಾಗಿದ್ದರು. ವಾರಣಾಸಿ ಮತ್ತು ಲಕ್ನೋದಲ್ಲಿ ಸ್ಫೋಟಗಳು ನಡೆದಿದದ್ದವು. ಅವರೆಲ್ಲ ಭಯೋತ್ಪಾದಕ ತಂಡದ ಭಾಗವಾಗಿದ್ದರು ಎಂದು ಅವರು ಹೇಳಿದರು.

2007 ರಲ್ಲಿ ಫೈಜಾಬಾದ್, ವಾರಣಾಸಿ ಮತ್ತು ಲಕ್ನೋದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ನಾಲ್ಕು ಜನರು ಸಾವನ್ನಪ್ಪಿ, 26 ಮಂದಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next