Advertisement

ಜೀವನಕ್ಕೊಂದು ಆದರ್ಶವಿರಲಿ

03:14 PM Jul 17, 2021 | Team Udayavani |

ಈ ಸಮಾಜವು ಒಂದು ಸಮುದ್ರವಿದ್ದಂತೆ. ಅದರಲ್ಲಿರುವ ದೋಣಿಯು ಒಬ್ಬ ವ್ಯಕ್ತಿಯ ಜೀವನ ಕಷ್ಟ ನಷ್ಟಗಳೆಂಬ ಅಲೆಗಳ ದಾಟಿ ಮುನ್ನುಗ್ಗಿದರೆ ಸಾಧನೆಯ ದಡವು ಸೇರುತ್ತದೆ.

Advertisement

ನಮ್ಮ ಚಟುವಟಿಕೆಗಳೆಲ್ಲ ಊಟ, ನಿದ್ರೆ, ಕುಡಿಯುವುದು ಕೇವಲ ನಮ್ಮ ದೇಹ ಬಲಿಷ್ಠಗೊಳಿಸಲು ಈ ದೇಹ ಇತರರಿಗೆ ನೆರವಾಗದಿದ್ದರೆ ಬೆಳೆಸಿದ್ದೂ ಪ್ರಯೋಜನವಿಲ್ಲ. ನಾವು ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುತ್ತೇವೆ. ಆ ಜ್ಞಾನ ಪ್ರಪಂಚಕ್ಕೆ ವಿನಿಯೋಗವಾಗದಿದ್ದರೆ ಪಡೆದ ಜ್ಞಾನವೂ ವ್ಯರ್ಥ.

ಮಾನವನು ಒಂದು ಮಹಾ ಆದರ್ಶವನ್ನು ಸ್ವೀಕರಿಸಿ ಅದಕ್ಕೆ ತನ್ನ ಬದುಕನ್ನು ಅರ್ಪಿಸುವುದು ಸೌಭಾಗ್ಯವೇ ಸರಿ. ಇಲ್ಲವಾದರೆ ಹಬ್ಬುತ್ತಿರುವ ಮನುಕುಲದ ಪರಿಕಲ್ಪನೆ ನಿಷ್ಪ್ರಯೋಜಕ. ನಮ್ಮ ಜೀವನವಿಡೀ ಒಂದು ಮಹಾಧ್ಯೇಯಕ್ಕೆ, ಸಾಧನೆಗೆ ಮೀಸಲಿಡುವುದು ಮಾನವನ ಬಾಧ್ಯತೆ. ದುರದೃಷ್ಟವಶಾತ್‌ ಜೀವನದಲ್ಲಿ ಆದರ್ಶವಿರುವ ವ್ಯಕ್ತಿಗಳು ಸಾವಿರ ತಪ್ಪು ಮಾಡಿದರೇ ಅಂಧಾಕಾರದಲ್ಲಿ ತೊಳಲುತ್ತಿರುವ ವ್ಯಕ್ತಿಗಳು ಐವತ್ತು ಸಾವಿರ ತಪ್ಪು ಮಾಡುತ್ತಾರೆ.

ನನ್ನ ಪ್ರಕಾರ, ಯಾವುದೋ ತಪ್ಪನ್ನು ಮಾಡಿರುವೆನೆಂದು ಹಿಂದೆ ನೋಡಬಾರದು. ನಾನು ಆ ತಪ್ಪುಗಳನ್ನು ಮಾಡದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ನೊಂದವರನ್ನೂ ಕಂಡಿದ್ದೇನೆ. ನಾವುಗಳು ನಮ್ಮ ತಪ್ಪುಗಳಿಗೆ ಕೃತಜ್ಞರಾಗಬೇಕು. ಏಕೆಂದರೆ ಅದು ತಿಳಿಯದೆಯೇ ಮಾಡಿದ ತಪ್ಪು. ಆದ್ದರಿಂದ ತಿಳಿಯದೆಯೇ ಮಾಡಿದ ತಪ್ಪು ವಾಸ್ತವಿಕವಾಗಿ ತಪ್ಪೇ ಅಲ್ಲ. ಇದೇ ಆದರ್ಶ ವ್ಯಕ್ತಿಗಳಾದರೆ ತಪ್ಪು ಮಾಡಲು ಯೋಚಿಸುವರು. ಆದರ್ಶಗಳು ನಮಗೆ ತೋಚದಿದ್ದರೆ ನಮ್ಮ ದೇಶದ ಮಹನೀಯರ ಅಭಿಮಾನಿಗಳಾಗಿ. ಅವರ ತತ್ತ್ವಾದರ್ಶಗಳ ಪಾಲನೆ ಮಾಡಬಹುದು. ಆದ ಕಾರಣ ಪ್ರತಿಯೋರ್ವರು ಆದರ್ಶವಂತರಾಗುವುದು ಸಮಂಜಸ ವಿಚಾರ.

ಒಂದು ರಾಷ್ಟ್ರ ಎಂದರೆ ವ್ಯಕ್ತಿಗಳ ಮಹತ್ವದ ಸಂಘಟನೆ. ನಮ್ಮ ಜೀವನವು ಶುಭ್ರವೂ ಸ್ವತ್ಛವೂ ಆಗಿದ್ದರೆ, ನಮ್ಮ ದೇಶ ಕೂಡ ಸ್ವತ್ಛ ಶುಭ್ರವಾಗುವುದು. ಈಗಿನ ಚಲನಚಿತ್ರ ಯುಗದಲ್ಲಿ ಆದರ್ಶಗಳ ಪಾಲನೆ, ವ್ಯಕ್ತಿಗಳ ಬದಲಾವಣೆ ನನಗಂತೂ ಸವಾಲೇ ಸರಿ.

Advertisement

 

ಲಕ್ಷ್ಮಣ ಎನ್‌.ಎಲ್‌.

ಸರಕಾರಿ ಪ. ಪೂ., ತೆಕ್ಕಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next