Advertisement

ಬದುಕು ರೂಪಿಸುವ ಶಿಕ್ಷಕ: ಪುನರೂರು 

09:11 AM Sep 07, 2017 | |

ಮೂಲ್ಕಿ: ಶಿಕ್ಷಣದಲ್ಲಿ ಭಯ ಮತ್ತು ಭಕ್ತಿ ಅಗತ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಶಿಕ್ಷೆ ಕೊಡುವುದು ಸಹಜ. ಇದು ವಿದ್ಯಾರ್ಥಿಯ ಬದುಕನ್ನು ರೂಪಿಸುವ ಮೂಲಕ ಆತನನ್ನು ಸತ್ಪ್ರಜೆಯಾಗಿ ರೂಪಿಸಲು ಸಹಕಾರಿ ಎಂಬ ಸತ್ಯ ಹೆತ್ತವರಿಗೆ ಮತ್ತು ಸರಕಾರಕ್ಕೆ ಗೊತ್ತಿರಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕಷ್ಣ ಪುನರೂರು ಹೇಳಿದರು.

Advertisement

ಅವರು ಮಂಗಳವಾರ ಪುನರೂರು ಪ್ರತಿಷ್ಠಾನ ಮತ್ತು ಮೂಲ್ಕಿಯ ಜನವಿಕಾಸ ಸಮಿತಿ ಆಶ್ರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮೂಲ್ಕಿ ಹೋಬಳಿಯ 32 ಗ್ರಾಮಗಳ 25 ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವರ ಸಮಾನ: ಕಾರ್ಯಕ್ರಮ ಉದ್ಘಾಟಿ ಸಿದ ಅಗರಿ ಎಂಟರ್‌ಪ್ರçಸಸ್‌ ಮಾಲಕ ಅಗರಿ ರಾಘವೇಂದ್ರ ರಾವ್‌ ಮಾತನಾಡಿ, ಬಾಲ್ಯದಿಂದ ಹೆತ್ತವರಿಗಿಂತ ಹೆಚ್ಚಿನ ಜವಾಬ್ದಾರಿ ಹೊತ್ತು ವಿದ್ಯಾರ್ಥಿಗಳ ಒಳಿತನ್ನೇ ಬಯಸಿ ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸುವ ಶಿಕ್ಷಕರು ದೇವರಿಗೆ ಸಮಾನರು ಎಂದು ಹೇಳಿದರು.

ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಶಿಕ್ಷಕನಾಗಿ ಒಮ್ಮೆ ಸೇವೆ ಆರಂಭಿಸಿದರೆ ಆತ ತನ್ನ ಕೊನೆಯ ದಿನಗಳ ವರೆಗೂ ಶಿಕ್ಷಕನಾಗಿಯೇ ಇರುತ್ತಾನೆ. ಸಮಾಜದಲ್ಲಿ ಅತ್ಯಂತ ಗೌರವ ಇರುವ ಓರ್ವ ಶಕ್ತಿ ಶಿಕ್ಷಕ ಎಂದು ಹೇಳಿದರು.

ಮೂಲ್ಕಿ ಲಯನ್ಸ್‌ ಅಧ್ಯಕ್ಷೆ ಶಿಲ್ಪಾ ಕುಡ್ವಾ ಶುಭ ಹಾರೈಸಿದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ಗೌರವಾಧ್ಯಕ್ಷೆ ಉಷಾರಾಣಿ ಪುನರೂರು ಹಾಗೂ ಜನವಿಕಾಸ ಸಮಿತಿ ಅಧ್ಯಕ್ಷ ಪಿ.ಎಸ್‌. ಸುರೇಶ್‌ ರಾವ್‌ ವೇದಿಕೆ ಯಲ್ಲಿದ್ದರು. ಸಿ| ಲೀರಾ ಮರಿಯ, ನಾಗಭೂಷಣ ರಾವ್‌ ಅವರು ಸಮ್ಮಾನಕ್ಕೆ ಉತ್ತರಿಸಿದರು. ಜೀತೆಂದ್ರ ವಿ. ರಾವ್‌ ಕಾರ್ಯಕ್ರಮ ನಿರೂಪಿಸಿದರು. ಜನವಿಕಾಸ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಗ್ಯ ರಾಜೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next