Advertisement

ಐಪಿಎಲ್‌ ಬಳಿಕ ಬದುಕು ಬದಲಾಯಿತು: ಪಾಂಡ್ಯ

07:50 AM Dec 03, 2017 | Team Udayavani |

ಮುಂಬಯಿ: ಐಪಿಎಲ್‌ ಟಿ20 ಪ್ರವೇಶಕ್ಕೂ ಮುನ್ನ ಊಟ ತಿಂಡಿಗೆ ಪರದಾಡಿದ್ದೆವು. 5, 10 ರೂ. ಉಳಿಸಲಿಕ್ಕೂ ಒದ್ದಾಡಿದ್ದೆವು. ಐಪಿಎಲ್‌ ಬಳಿಕ ಬದುಕು ಬದಲಾಯಿತು ಎಂದು ಎಂದು ಭಾರತ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.  ಅಷ್ಟೇ ಅಲ್ಲ, ವಿಂಡೀಸ್‌ ಪ್ರವಾಸದಲ್ಲಿದ್ದಾಗ ಅವರು “ಬಂಧನ ಭೀತಿ’ಯನ್ನೂ ಎದುರಿಸಿದ್ದರಂತೆ. ಸ್ವತಃ ಇದನ್ನು ಸಂದರ್ಶನವೊಂದರಲ್ಲಿ ಪಾಂಡ್ಯ ವಿವರಿಸಿದ್ದಾರೆ.

Advertisement

ವೆಸ್ಟ್‌ ಇಂಡೀಸಿಗೆ ಹೋಗಿದ್ದಾಗ ಹಾರ್ದಿಕ್‌ ಪಾಂಡ್ಯ, ವಿಂಡೀಸ್‌ ಕ್ರಿಕೆಟಿಗ ಪೊಲಾರ್ಡ್‌ ಜತೆಗೆ ಇದ್ದರು. ಆಗ ಪೊಲೀಸ್‌ ಒಬ್ಬ ಬಂಧಿಸಲು ಬಂದಿದ್ದರು. ಯಾವುದೇ ತಪ್ಪು ಮಾಡದ ಕಾರಣ ನಾನು ಹೆದರಲಿಲ್ಲ. ಜತೆಗೆ ಬಿಸಿಸಿಐ ಬೆಂಬಲಕ್ಕೆ ನಿಲ್ಲುತ್ತದೆ ಎನ್ನುವ ಧೈರ್ಯದಿಂದ ಶಾಂತವಾಗಿದ್ದೆ. ಆದರೆ ಪೊಲೀಸ್‌ ವಾಕಿಟಾಕಿ ಉಲ್ಟಾ ಹಿಡಿದಿರುವುದು ಗೊತ್ತಾಯಿತು. ಬಳಿಕ ಆ ಪೊಲೀಸ್‌ ಪೋಲಾರ್ಡ್‌ ಸ್ನೇಹಿತ ಎನ್ನುವುದು ತಿಳಿಯಿತು. ಅವರಿಬ್ಬರು ಸೇರಿಕೊಂಡು ನಾಟಕವಾಡಿದ್ದರು. ಅದೊಂದು ತಮಾಷೆಯ ಸನ್ನಿವೇಶವಾಗಿತ್ತು ಎಂದು ಹಾರ್ದಿಕ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next