Advertisement

ಬದುಕು ಅರಳಿಸುವ ಪೇಪರ್‌ ಕ್ರಾಫ್ಟ್

11:12 PM May 28, 2019 | mahesh |

ಬಳಸಿ ಬಿಸಾಡುವ ಪ್ರತಿಯೊಂದು ವಸ್ತುವಿನಲ್ಲೂ ಏನಾದರೊಂದು ಕ್ರಿಯಾತ್ಮಕತೆಯನ್ನು ಸೃಷ್ಟಿಸಿ ಅದರಿಂದ ಮನೆ ಅಥವಾ ಇತರ ಸ್ಥಳಗಳನ್ನು ಅಲಂಕರಿಸುವುದು ಉತ್ತಮ ವಿಷಯ. ಪೇಪರ್‌, ಪ್ಲಾಸ್ಟಿಕ್‌, ಬಾಟಲಿ, ಹಳೆಯ ಬಟ್ಟೆಗಳು… ಹೀಗೆ ಬೇರೆ ಬೇರೆ ರೀತಿಯ ಉಪಯೋಗ ಶೂನ್ಯ ವಸ್ತುಗಳಿಂದ ಆಲಂಕಾರಿಕ ವಸ್ತುಗಳನ್ನು ತಯಾರಿಸಬಹುದು.

Advertisement

ಪೇಪರ್‌ಗಳ ವ್ಯಾಲಿಡಿಟಿ ಒಂದು ದಿನ. ಅಂತೆಯೇ ಮ್ಯಾಗಝಿನ್‌ಗಳು ಸ್ವಲ್ಪ ದಿನ ಬಾಳಿಕೆ ಬರುತ್ತವೆ. ಓದಿ ಮುಗಿದ ಮೇಲೆ ಪತ್ರಿಕೆ, ಮ್ಯಾಗಝಿನ್‌ಗಳು ಮೂಲೆ ಸೇರಿರುತ್ತವೆ ಅಥವಾ ರದ್ದಿಗೆ ಹೋಗಿರುತ್ತವೆ. ಇಂತಹ ದಿನ ಪತ್ರಿಕೆಗಳು, ಮ್ಯಾಗಝಿನ್‌ಗಳ ಬಂಡವಾಳವನ್ನಾಗಿ ಮಾಡಿಕೊಂಡು ಸ್ವ ಉದ್ಯೋಗ ಮಾಡಿಕೊಳ್ಳಬಹುದು. ಅದುವೇ ಪೇಪರ್‌ ಕ್ರಾಫ್ಟ್.

ಕ್ರಿಯಾತ್ಮಕತೆಯಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಈ ಉದ್ಯೋಗ ಸೂಕ್ತವಾದದ್ದು. ಪೇಪರ್‌ ಹೂ, ಬ್ಯಾಗ್‌, ಗಿಫ್ಟ್ ಪ್ಯಾಕ್‌ ಮೊದಲಾದವುಗಳಿಂದ ಹಿಡಿದು ಬಲ್ಬ್ ಡೆಕೋರೇಷನ್‌, ಟೀಪಾಯ್‌, ವಾಲ್ ಡೆಕೋರೇಷನ್‌ಗಳವರೆಗೆ ಪೇಪರ್‌ ಕ್ರಾಫ್ಟ್ ಕ್ರಿಯಾತ್ಮಕತೆ ಮುಂದುವರಿದಿದೆ. ಯೂಸ್‌ ಆ್ಯಂಡ್‌ ತ್ರೋ ಎಂಬ ಕಲ್ಪನೆಯಲ್ಲಿ ಬದುಕುತ್ತಿರುವ ಇಂದಿನ ಸಮಾಜದಲ್ಲಿ ಈ ಉದ್ಯೋಗಕ್ಕೆ ಅಪಾರ ಅವಕಾಶಗಳಿವೆ.

ಕೋರ್ಸ್‌ಗಳೂ ಲಭ್ಯ
ಬೆಂಗಳೂರು, ದಿಲ್ಲಿ, ಮುಂಬಯಿಯಂತಹ ಮಹಾನಗರಗಳಲ್ಲಿ ಪೇಪರ್‌ ಕ್ರಾಫ್ಟ್ ಕಲಿಸುವ ಕೋರ್ಸ್‌ಗಳಿವೆ. ಇವುಗಳಲ್ಲಿ 2 ತಿಂಗಳಿನಿಂದ ಹಿಡಿದು 1 ವರ್ಷದವರೆಗಿನ ಹಲವಾರು ಬಗೆಯ ಕೋರ್ಸ್‌ಗಳಿವೆ. ಆಸಕ್ತಿಗನುಸಾರವಾಗಿ ಆಯ್ದುಕೊಳ್ಳಬಹುದು. ಯಾವುದೇ ವಿಷಯದಲ್ಲಿ ಡಿಗ್ರಿ ಪಡೆದುಕೊಂಡವರು ಈ ಕೋರ್ಸ್‌ ಮಾಡಬಹುದು. ಕೋರ್ಸ್‌ ಮುಗಿಯುವಾಗ ನೀವು ಪೇಪರ್‌ ಕ್ರಾಫ್ಟ್ನಲ್ಲಿ ಪಳಗಿದ್ದೀರಿ ಎಂಬ ಸರ್ಟಿಫಿಕೇಟ್ ನೀಡಲಾಗುತ್ತದೆ. ಕೋರ್ಸ್‌ ಅನಂತರ ಯಾವುದಾದರೂ ಫ್ಯಾಶನ್‌ ಡಿಸೈನಿಂಗ್‌ ಕಂಪೆನಿಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದು ಅಥವಾ ನಿಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸಬಹುದು.

ಹೊಸ ಟ್ರೆಂಡ್‌ಗಳು

Advertisement

ಪೇಪರ್‌ ಕ್ರಾಫ್ಟ್ನ ಮೂಲಕ ಹೊಸ ಹೊಸ ಟ್ರೆಂಡ್‌ಗಳು ಸೃಷ್ಟಿಯಾಗುತ್ತಿರುವುದೇ ಇದರ ಹೊಸತನ. ಕೇವಲ ಮನೆಯ ಆಲಂಕಾರಿಕ ವಸ್ತುಗಳನ್ನು ಮಾತ್ರ ತಯಾರಿಸಬಹುದೆಂಬ ಕಲ್ಪನೆಗೂ ಆಚೆ ಮನೆಯನ್ನೇ ಪೇಪರ್‌ನಲ್ಲಿ ಅಲಂಕರಿಸಬಹುದೆಂಬ ಕ್ರಿಯಾತ್ಮಕತೆ ಸೃಷ್ಟಿಯಾಗಿದೆ. ಬಣ್ಣಗಳ ಅಲರ್ಜಿ ಇರುವವರು ಅಥವಾ ಬಣ್ಣಗಳಿಂದ ಸಮಸ್ಯೆ ಇರುವವರಿಗೆ ಇದು ಹೆಚ್ಚು ಸೂಕ್ತವಾಗಿರುತ್ತದೆ. ಮನೆಯ ಗೋಡೆಗಳನ್ನು ವಿವಿಧ ದಿನಪತ್ರಿಕೆಗಳನ್ನು ಬಳಸಿ ಅಲಂಕರಿಸುವುದೇ ಇದರ ಮ್ಯಾಜಿಕ್‌. ಅದೇ ರೀತಿ ಬಲ್ಬ್, ಟೀಪಾಯ್‌ಗಳನ್ನು ಹೀಗೆ ಅಲಂಕರಿಸಬಹುದು.

ಪೇಪರ್‌ ಕ್ರಾಫ್ಟ್ ಉದ್ಯೋಗವನ್ನು ಪಾರ್ಟ್‌ ಟೈಮ್‌ ಅಥವಾ ಫ‌ುಲ್ ಟೈಮ್‌ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಬೇರೆ ಯಾವುದಾದರೂ ಉತ್ತಮ ಉದ್ಯೋಗದಲ್ಲಿದ್ದು, ಕ್ರಿಯೆಟಿವಿಟಿಯಲ್ಲಿ ಆಸಕ್ತ್ತಿ ಇದ್ದರೆ ಇದನ್ನು ಪಾರ್ಟ್‌ ಟೈಮ್‌ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಮನೆ ಅಲಂಕಾರ, ಸ್ನೇಹಿತರಿಗೆ ಉಡುಗೊರೆ ಕೊಡುವ ಸಂದರ್ಭದಲ್ಲಿ ಇದು ಸಹಕಾರಿ. ವೃತ್ತಿಯನ್ನಾಗಿ ಕೂಡ ಇದನ್ನು ಸ್ವೀಕರಿಸಬಹುದು. ಹೊಸತನಕ್ಕೆ ಹೆಚ್ಚು ಅವಕಾಶ ನೀಡಿದಲ್ಲಿ ಈ ಉದ್ಯೋಗ ಲಾಭದಾಯಕ.

•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next