Advertisement

ಶಿವಜ್ಞಾನದಿಂದ ಬದುಕು ಬೆಳಗಬಲ್ಲದು: ಮಲ್ಲಿಕಾರ್ಜುನ ಶ್ರೀ

05:20 PM Mar 20, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಪ್ರವಚನಗಳ ಮೂಲಕ ಜೀವನದ ಸರಿಯಾದ ಸಾರವನ್ನು ತಿಳಿದುಕೊಂಡು ಅಧ್ಯಾತ್ಮಿಕ ಜ್ಞಾನ, ಶಿವಜ್ಞಾನ ಪಡೆದುಕೊಂಡರೆ ನಮ್ಮ ಬದುಕು ಉಜ್ವಲವಾಗಿ ಬೆಳಗಬಲ್ಲದು ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

Advertisement

ನಗರದ ಮುಳಗುಂದ ನಾಕಾ ಬಳಿ ಇರುವ ಶ್ರೀ ರೇಣುಕ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ ಹಾಗೂ ರಥೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಶ್ರೀ ರೇಣುಕ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೀರಶೈವ ಧರ್ಮದ ಸಂಸ್ಥಾಪಕ ಶ್ರೀ ಜ| ರೇಣುಕರ ಉಪದೇಶಗಳು ಸರ್ವರಿಗೂ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಯಮಿ ಕಿರಣ ಭೂಮಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ಪ್ರವಚನ ಏರ್ಪಡಿಸುತ್ತಿರುವುದು ಸಂತಸ ಸಂಗತಿ. ರಂಭಾಪುರಿ ಪೀಠದ ಧ್ಯೇಯ ವಾಕ್ಯ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವುದು ಎಲ್ಲರನ್ನೂ ಎಚ್ಚರಿಸುತ್ತದೆ ಎಂದರು.

ಜ| ಪಂಚಾಚಾರ್ಯ ಸೇವಾ ಸಂಘದ ಉಪಾಧ್ಯಕ್ಷರಾದ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕ ಮಾತನಾಡಿ, 83 ವರ್ಷದ ಹಿಂದೆ ರಂಭಾಪುರಿ ವೀರ ಗಂಗಾಧರ ಶ್ರೀಗಳ ಅಮೃತ ಹಸ್ತದಿಂದ ಪ್ರಾರಂಭವಾದ ಸಂಘವು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಪ್ರತಿವರ್ಷ ಸಂಘದಿಂದ ರೇಣುಕಾಚಾರ್ಯ ಜಯಂತಿ,
ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು.

ನವನಗರದ ಕಾಶೀ ಖಾಸಾ ಮಠದ ರಾಜಶೇಖರ ಶಿವಾಚಾರ್ಯರು ರೇಣುಕ ದರ್ಶನದ ಕುರಿತು ಪ್ರವಚನ ನೀಡಿದರು. ಪ್ರಾರಂಭದಲ್ಲಿ ಜ| ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ ಪಾಠಶಾಲೆ ವಟುಗಳು ವೇದಘೋಷ ಮಾಡಿದರು. ಮಹೇಶ ಕುಂದ್ರಾಳ ಹಿರೇಮಠ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಮಹೇಶ್ವರಸ್ವಾಮಿ ಹೊಸಳ್ಳಿಮಠ ವೇದಿಕೆ
ಮೇಲೆ ಇದ್ದರು. ಭಕ್ತಿ ಸೇವೆ ವಹಿಸಿಕೊಂಡಿದ್ದ ಮಹೇಶ ಅಬ್ಬಿಗೇರಿ, ಯು.ಆರ್‌. ಭೂಸನೂರಮಠ, ಶ್ರೀಕಾಂತ ಲಕ್ಕುಂಡಿ, ಸಿ.ಬಿ. ಹಿರೇಗೌಡ್ರ ರಾಜಣ್ಣ ಮಲ್ಲಾಡದ, ಸಿ.ಜಿ. ಅಬ್ಬಿಗೇರಿಮಠ, ಎಸ್‌.ಎಸ್‌. ಮೇಟಿ, ಕಿರಣ ಭೂಮಾ, ಸಂತೋಷ ಚನ್ನಪ್ಪನವರ,
ನಾರಾಯಣ ಕುಡತರಕರ, ಡಾ| ಗಚ್ಚಿನಮಠರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಪಾಠಶಾಲೆ ಪ್ರಾಧ್ಯಾಪಕ ಗುರುಸಿದ್ಧಯ್ಯ ಹಿರೇಮಠ, ಸುರೇಶ ಅಬ್ಬಿಗೇರಿ, ಪ್ರಭು ದಂಡಾವತಿಮಠ, ವೀರೇಶ ಕೂಗು, ಬಸಯ್ಯ ಸಾಸ್ವಿಹಳ್ಳಿಮಠ, ಸಿದ್ಧಲಿಂಗಪ್ಪ ಚಳಗೇರಿ, ವಿಜಯಕುಮಾರ ಹಿರೇಮಠ, ರಾಜು ಮುಧೋಳ, ವೀರಣ್ಣ ಧನ್ನೂರಹಿರೇಮಠ, ಮಹಿಳಾ ಘಟಕ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next