ನಿರ್ದೇಶನ: ಕರ್ಟಿಸ್ ಹ್ಯಾನ್ಸನ್
ಅವಧಿ: 108 ನಿಮಿಷ
Advertisement
ಕೆಲವು ಅನಿರೀಕ್ಷಿತ ಅವಘಡಗಳು ನಮ್ಮನ್ನೇ ಕಾಯುತ್ತಿರುತ್ತವೆ. ಅದೇನು ದುರಾದೃಷ್ಟವೋ ಏನೋ, ಒಂದೊಂದ್ಸಲ ಅವುಗಳ ಬುಡಕ್ಕೆ ನಾವೇ ಹೋಗಿಬಿಡುತ್ತೇವೆ. “ದ ರಿವರ್ ವೈಲ್ಡ್’ನ ನಾಯಕ- ನಾಯಕಿ ಕೂಡ ಈ ಮಾತಿಗೆ ಹೊರತಲ್ಲ. ಗೇಲ್ ಹಾರ್ಟ್‌ಮನ್, ಒಬ್ಬಳು ಸ್ಟ್ರಾಂಗ್ ಮದರ್. ಮಗನ 10ನೇ ವರುಷದ ಹುಟ್ಟುಹಬ್ಬವನ್ನು ವಿಭಿನ್ನ ಸಾಹಸದೊಂದಿಗೆ ಆಚರಿಸಲು ಮುಂದಾಗುತ್ತಾಳೆ. ಆಕೆಗೆ ಮೊದಲೇ ರಿವರ್ ರ್ಯಾಪ್ಟಿಂಗ್‌ನ ಹುಚ್ಚು. ಅತ್ಯಂತ ದುರ್ಗಮ ಜಲಹಾದಿಯ, ಅಮೆರಿಕದ ಸಾಲ್ಮೋನ್ ನದಿಯಲ್ಲಿ ರ್ಯಾಪ್ಟಿಂಗ್ ಮಾಡುವ ಕನಸಿಗೆ ಕೈಹಾಕುತ್ತಾಳೆ. ಕೊನೆಯ ಕ್ಷಣದಲ್ಲಿ ಗಂಡನೂ, ಅಮ್ಮ- ಮಗನ ಜತೆಗೂಡಿ ಹೊರಡುತ್ತಾನೆ. ಮುದ್ದು ನಾಯಿಯೂ ಜತೆಯಾಗುತ್ತದೆ. ಇಡೀ ಕುಟುಂಬ ಒಟ್ಟಾಗಿ ನದಿಯಲ್ಲಿತೇಲುತ್ತಾ, ಮೇಲೇಳುತ್ತಾ, ಮುಂದೆ ಹೋಗುವಾಗ, ಇಬ್ಬರು ದರೋಡೆ ಕೋರರ ಮುಖಾ ಮುಖಿ ಆಗುತ್ತದೆ. ಇಡೀ ಕುಟುಂಬವನ್ನು ಹೈಜಾಕ್ ಮಾಡುವ ಅವರ ಪ್ರಯತ್ನವನ್ನು ಗೇಲ್ ತನ್ನ ಗಂಡುಧೈರ್ಯದಿಂದ ಹೇಗೆಲ್ಲ ಹಿಮ್ಮೆಟ್ಟಿಸುತ್ತಾಳೆ ಅನ್ನೋ ಕತೆಯಲ್ಲಿ ಮೈನವಿರೇಳಿಸುವ ದೃಶ್ಯಗಳಿವೆ. ಸಾಹಸ ಪ್ರಿಯರಿಗೆ “ದ ರಿವರ್ ವೈಲ್ಡ್’ ರುಚಿಸಬಹುದು. ಅಂದಹಾಗೆ, ಈ ಚಿತ್ರದ ಶೇ.70ರಷ್ಟು ಸಾಹಸದ ದೃಶ್ಯಗಳನ್ನು ನೀರಿನ ಮೇಲೆಯೇ, ನೈಜವಾಗಿ ಚಿತ್ರೀಕರಿಸಿರುವುದು ವಿಶೇಷ.