ಅವಧಿ: 94 ನಿಮಿಷ
ನಿರ್ದೇಶಕ: ಜೇಮ್ಸ್ ಮಾರ್ಷ್
Advertisement
ಆತ ಫಿಲಿಪ್ ಪೆಟೆಟ್. ಅವನ ಹೆಸರು ಕೇಳಿದರೆ, ಅಮೆರಿಕನ್ನರ ಹೃದಯದಲ್ಲಿ ಈಗಲೂ ಆತಂಕದ ಬಡಿತಗಳು ಎದ್ದೇಳುತ್ತವೆ. ಸೇತುವೆಯ ಮೇಲಿಂದಲೋ, ಎತ್ತರದ ಕಟ್ಟಡದಿಂದಲೋ ಕೆಳಕ್ಕೆ ನೋಡಿದಾಗ ನಮಗೆ ಎದೆ ಧಸಕ್ ಅನ್ನುತ್ತದಲ್ಲವೇ? ಆದರೆ, ಈತನಿಗೆ ಅದ್ಯಾವುದೂ ಅನ್ನಿಸುವುದೇ ಇಲ್ಲ. ಫಿಲಿಪ್, ಎತ್ತರದ ಕಟ್ಟಡಗಳಿಗೆ- ಸೇತುವೆಗಳಿಗೆ ಹಗ್ಗ ಕಟ್ಟಿಕೊಂಡು, ಅದರ ಮೇಲೆ ಎಳ್ಳಷ್ಟೂ ಅಂಜದೇ, ನಡೆಯುವ ಸಾಹಸಿ. ಉಗ್ರರ ದಾಳಿಗೆ ಗುರಿಯಾಗುವ ಮುನ್ನ ಅಮೆರಿಕದ ವರ್ಲ್x ಟ್ರೇಡ್ ಸೆಂಟರ್‌ನ ಅವಳಿ ಕಟ್ಟಡಗಳಿಗೆ ಮಧ್ಯರಾತ್ರಿ ಹಗ್ಗ ಕಟ್ಟಿ, ನಡೆಸಿದ ಈತನ ಸಾಹಸದ ಚಿತ್ರಣವೇ, “ಮ್ಯಾನ್ ಆನ್ ವೈರ್’ ಸಿನಿಮಾ. ವರ್ಲ್ಡ್ ಟ್ರೇಡ್ ಸೆಂಟರ್‌ನ ಸಿಬ್ಬಂದಿಗಳ ಕಣ್ತಪ್ಪಿಸಿ, ಅದರ ಮಹಡಿಗಳನ್ನೇರಿ, ಈತ ಈ ರೋಚಕ ಸಾಹಸಕ್ಕೆ ಮುಂದಾಗುತ್ತಾನೆ. ಅದರಲ್ಲಿ ಸಫಲನೂ ಆಗುತ್ತಾನೆ. ಆದರೆ, ಈತನ ಪ್ರತಿ ಹೆಜ್ಜೆಗಳನ್ನೂ ಝೋಮ್‌ನಲ್ಲಿ ತೋರಿಸುವಾಗ, ನಾವೇ ಕೆಳಕ್ಕೆ ಬೀಳುತ್ತೇವೇನೋ ಎಂಬ ದಿಗಿಲು ಪ್ರೇಕ್ಷಕನಿಗೆ ಆವರಿಸಿಕೊಳ್ಳುತ್ತೆ. 1974ರ ನೈಜ ದೃಶ್ಯಾವಳಿಗಳನ್ನು ನಿರ್ದೇಶಕ ಜೇಮ್ಸ್ ಮಾರ್ಷ್, ಮರುಕಟ್ಟುವಲ್ಲೂ ಸಾಕಷ್ಟು ಸವಾಲುಗಳನ್ನು ಅನುಭವಿಸಿದ್ದಾರೆ.