Advertisement

ಗಣರಾಜ್ಯೋತ್ಸವ ಪರೇಡ್‌: ಪುರುಷ ತಂಡಕ್ಕೆ ಪ್ರಥಮ ಬಾರಿ ಮಹಿಳೆಯ ನೇತೃತ್ವ

12:30 AM Jan 23, 2019 | Team Udayavani |

ಹೊಸದಿಲ್ಲಿ: ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಇದೇ ಪ್ರಥಮ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪುರುಷರೇ ಇರುವ ದಳವೊಂದನ್ನು ಮುನ್ನಡೆಸಲಿದ್ದಾರೆ. ಈ ಮಹಿಳಾ ಅಧಿಕಾರಿಯೇ ಲೆಫ್ಟಿನೆಂಟ್‌ ಭಾವನಾ ಕಸ್ತೂರಿ. ಅವರ ನೇತೃತ್ವದಡಿ 144 ಸೈನಿಕರು ಹೆಜ್ಜೆ ಹಾಕಲಿದ್ದಾರೆ.

Advertisement

ಎರಡೂವರೆ ವರ್ಷಗಳ ಹಿಂದೆ ಭಾರತೀಯ ಸೇನೆ ಸೇರಿದ್ದ ಹೈದರಾಬಾದ್‌ನ ಯುವ ಅಧಿಕಾರಿ ಗಣ ರಾಜ್ಯೋತ್ಸವ ಪರೇಡ್‌ನ‌ಲ್ಲಿ ತಾನು ಸೇನಾ ತಂಡವೊಂದನ್ನು ಮುನ್ನಡೆಸಲಿರುವ ಕುರಿತು ಪುಳಕಗೊಂಡಿದ್ದಾರೆ. “ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್‌ ಆಗಿರುವ ರಾಷ್ಟ್ರಪತಿಯವರ ಮುಂದೆ ನಾನು ತಂಡವನ್ನು ಮುನ್ನಡೆಸಿ ಅವರಿಗೆ ಸೆಲ್ಯೂಟ್‌ ನೀಡುವುದು ನನ್ನ ಕನಸಿನ ಘಳಿಗೆಯಾಗಿದೆ. ಪರೇಡನ್ನು ವೀಕ್ಷಿಸಲು ಬರುವ ಜನಸ್ತೋಮದ ಕುರಿತು ನಾನು ಪುಳಕಗೊಂಡಿದ್ದೇನೆ. ನನ್ನನ್ನು ನೋಡಿ ಬಹಳಷ್ಟು ಹೆಣ್ಣು ಮಕ್ಕಳು ಖುಷಿ ಪಡಬಹುದು’ ಎಂದವರು ಹೇಳುತ್ತಾರೆ. “ಯಾವುದೇ ಪ್ರಶಸ್ತಿ ಈ ಗೌರವಕ್ಕೆ ಮತ್ತು ನನ್ನ ಮೇಲೆ ಹೊರಿಸಲಾಗಿರುವ ಹೊಣೆಗಾರಿಕೆಗೆ ಸಾಟಿಯಲ್ಲ. ಇದು ನನ್ನ ಜೀವಮಾನದ ಶ್ರೇಷ್ಠ ಪ್ರಶಸ್ತಿಯಾಗಿದೆ’ ಎಂದವರು ಬಣ್ಣಿಸಿದ್ದಾರೆ.

ಲೆ| ಭಾವನಾ ಕಸ್ತೂರಿ ಅವರು ಪರೇಡ್‌ಗಾಗಿ ಈಗ ತನ್ನ ದಳದೊಂದಿಗೆ ಮೈಕೊರೆಯುವ ಚಳಿಯಲ್ಲಿ ಮುಂಜಾನೆ 5.30ಕ್ಕೆ ತಾಲೀಮು ಆರಂಭಿಸುತ್ತಿದ್ದಾರೆ. ಅವರು 9 ವರ್ಷ ಹಿಂದೆ ಎನ್‌ಸಿಸಿ ತಂಡದ ಸದಸ್ಯೆಯಾಗಿ ಪರೇಡ್‌ನ‌ಲ್ಲಿ ಹೆಜ್ಜೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next