Advertisement
ಇದನ್ನು ಕೇಳಿದ ಎದುರಿನವ ವಿಚಿತ್ರ ವೆಂಬಂತೆ ಯೋಗಿಯತ್ತ ನೋಡಿದ. ದುಃಖದ ಮೂಟೆಯನ್ನು ಹೊತ್ತು ಸುಖವನ್ನು ಹುಡುಕಿಕೊಂಡು ಅಲ್ಲವೇ? ಎಂಬುದು ಅವನ ಆಲೋಚನೆಯಾಗಿತ್ತು.
Related Articles
Advertisement
ಒಮ್ಮೆ ಅವನ ಗೆಳೆಯ ಸಿಕ್ಕವನೇ, ಒಂದು ಕೆಲಸ ಮಾಡು, ಹಿಮಾಲಯಕ್ಕೆ ಹೋಗು ನೆಮ್ಮದಿ ಸಿಗುತ್ತದೆ ಎಂದ. ಇದು ಸರಿ ಎನಿ ಸಿತು. ಹಾಗೆಯೇ ಹೇಳದೇ ಕೇಳದೇ ಹೊರಟ ವನು ಮುಟ್ಟಿದ್ದು ಹಿಮಾಲಯಕ್ಕೆ. ಇಲ್ಲಿ ಎಲ್ಲೆಲ್ಲೋ ಸುತ್ತಿ ನನ್ನ ಬಳಿ ಬಂದಿದ್ದ. ಎಲ್ಲವನ್ನೂ ವಿವರಿಸಿದ.
ನನಗೆ ನಗು ಬಂದಿತು. ಅಲ್ಲಯ್ನಾ, ಇಲ್ಲಿ ನೆಮ್ಮದಿ ಸಿಗುತ್ತದೆಂದು ಯಾರು ಹೇಳಿದರು ಎಂದು ಕೇಳಿದೆ. ಅದಕ್ಕೆ ತನ್ನ ಗೆಳೆಯ ಎಂದು ಉತ್ತರಿಸಿದ. ಆಗ ನನ್ನ ನಗು ಹೆಚ್ಚಾಯಿತು. ಸರಿ, ಸ್ವಂತ ಅನುಭವದಿಂದ ನಿನ್ನ ಗೆಳೆಯ ಹೇಳಿದ್ದಾನೆಯೇ ಎಂದು ಪರಿಶೀಲಿಸಿ ದ್ದೀಯಾ ಎಂದು ಕೇಳಿದೆ. ಇಲ್ಲ, ಅವನ ಮಾತು ನಿಜವೆನಿಸಿತು ಬಂದು ಬಿಟ್ಟೆ. ಈಗ ಲಂತೂ ನನಗೆ ನಗು ತಡೆಯಲಾಗಲಿಲ್ಲ ಎಂದು ಹೇಳಿದರು ಯೋಗಿಗಳು.
ಯಾಕೆಂದರೆ ನಾವು ಎಷ್ಟೋ ಬಾರಿ ಬೇರೆಯವರ ಸಲಹೆಗಳನ್ನೇ ತೀರ್ಮಾನ ಗಳನ್ನಾಗಿಸಿ . ಕೊಳ್ಳುತ್ತೇವೆ. ನಮ್ಮ ಸಂದರ್ಭ ಹಾಗೂ ಸಮಸ್ಯೆಗೆ ಅದು ಹೇಗೆ ಪರಿಹಾರ ಮತ್ತು ಅದುವೇ ಪರಿಹಾ ರವೇ ಎಂದು ಯೋಚಿಸುವುದಿಲ್ಲ . ಎಂದರು.
ಕೊನೆಗೆ ಅವನಿಗೆ ಏನು ಹೇಳಿ ಕಳುಹಿಸಿದಿರಿ? ಎಂದು ಕೇಳಿದ ಎದುರಿಗೆ ಕುಳಿತವ. ಆಗ ಯೋಗಿಗಳು, “ನೋಡು, ನೆಮ್ಮದಿ, ಸುಖ ಎನ್ನುವುದು ಎಲ್ಲೋ ಸಿಗು ವಂಥದ್ದಲ್ಲ, ಕೊಳ್ಳುವಂಥ ದ್ದಲ್ಲ. ಅದು ನಮ್ಮೊಳಗೆ ಇರುವಂಥದ್ದು, ಹುಡುಕಿಕೊಂಡು ಅನುಭವಿಸಬೇಕಷ್ಟೇ. ವಾಪಸು ಹೋಗಿ ಮನೆಯವರನ್ನು ನಗು ನಗುತ್ತಾ ಮಾತನಾಡಿಸು. ಆಗ ಸುಖದ ಅರ್ಥ ತಿಳಿಯುತ್ತದೆ’ ಎಂದು ಹೇಳಿ ಕಳುಹಿಸಿದೆ ಎಂದರು.
ನಾವು ನಿತ್ಯವೂ ನಮ್ಮಲ್ಲಿರುವ ಸುಖದ ಸಾಧನವಾದ ನಗುವನ್ನೇ ಕಳೆದುಕೊಂಡು ಬದುಕುತ್ತಿರುತ್ತೇವೆ. ಇದು ಸಹಜವಾಗಿ ನಮ್ಮನ್ನು ದುಃಖೀಗಳನ್ನಾಗಿಸುತ್ತದೆ. ಅದಕ್ಕೇ ನಮಗೆ ಇಡೀ ಜಗತ್ತು ದುಃಖದ ಮೂಟೆ ಹೊತ್ತಂತೆ ತೋರುತ್ತಿರುತ್ತದೆ. ಅದರ ಬದಲು ನಮ್ಮ ಬೆನ್ನಿನ ಮೇಲಿನ ಮೂಟೆಯನ್ನು ಕೆಳಗಿಳಿಸಿ, ಅದರೊಳಗೆ ಇರುವುದನ್ನು ಅರಿತು ಅನುಭವಿಸುವುದನ್ನು ಕಲಿಯಬೇಕು. ಹಾಗಾದಾಗ ನಮ್ಮ ಮುಖದಲ್ಲಿ ನಗು ಮೂಡಲಾರಂಭಿಸುತ್ತದೆ. ಇದು ಪರರ ಮುಖದಲ್ಲೂ ಪ್ರತಿಫಲಿಸಲಾರಂಭಿಸುತ್ತದೆ. ಅದೇ ನೈಜ ಸುಖ ಮತ್ತು ಬದುಕು.
(ಸಾರ ಸಂಗ್ರಹ)