Advertisement
ಹೌದು, ಎಲ್ ಐ ಸಿ ಈಗ ಪಿಂಚಣಿ ಪಾಲಿಸಿಯ ಮೂಲಕ ಮತ್ತೊಂದಿಷ್ಟು ಸೌಲಭ್ಯವನ್ನು ನೀಡುತ್ತಿದೆ. ನೀವು ಈ ಯೋಜನೆಯನ್ನು ಸಿಂಗಲ್ ಲೈಫ್ ಮತ್ತು ಜಾಯಿಂಟ್ ಲೈಫ್ ಎರಡು ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
Related Articles
Advertisement
ಎಲ್ ಐ ಸಿ ನೀಡುತ್ತಿರುವ ಈ ಯೋಜನೆಯ ಲಾಭ ಪಡೆಯುವುದಕ್ಕೆ ನೀವು ಇಚ್ಛಿಸುವವರಾದರೇ, ನಿಮ್ಮ ವಯಸ್ಸು 40-80 ವರ್ಷಗಳ ನಡುವೆ ಇರಬೇಕು. ಹಾಗಿದ್ದಲ್ಲಿ ಈ ಯೋಜನೆಯಡಿ, ಜೀವನ ಪೂರ್ತಿ ಪಿಂಚಣಿ ಪಡೆಯಬಹುದು. ಈ ಯೋಜನೆಯನ್ನು ತೆಗೆದುಕೊಂಡ ನಂತರ ನಿಮಗೆ ಇಷ್ಟವಾಗದಿದ್ದರೆ, ಅದನ್ನು ತೆಗೆದುಕೊಂಡ ದಿನಾಂಕದಿಂದ 6 ತಿಂಗಳವರೆಗೆ ನೀವು ಯಾವಾಗ ಬೇಕಾದರೂ ಸರೆಂಡರ್ ಮಾಡುವುದಕ್ಕೂ ಕೂಡ ಅವಕಾಶವಿದೆ.
ಈ ಪಿಂಚಣಿ ತ್ರೈಮಾಸಿಕ, ಅರ್ಧವಾರ್ಷಿಕ, ಮಾಸಿಕ ಅಥವಾ ವಾರ್ಷಿಕವಾಗಿಯೂ ನೀವು ಪಾಲಿಸಿಯನ್ನು ಪಡೆದುಕೊಳ್ಳಬಹುದು. ನೀವು ಪ್ರತಿ ತಿಂಗಳು, 3 ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ಪಿಂಚಣಿಯನ್ನು ತೆಗೆದುಕೊಳ್ಳಬಹುದು. ನೀವು ಆಯ್ದುಕೊಂಡ ಾಯ್ಕೆಯ ಹಾಗೆಯೇ ಪಿಂಚಣಿ ಸೌಲಭ್ಯ ನಿಮಗೆ ಲಭ್ಯವಾಗುತ್ತದೆ.
ನೀವು 10 ಲಕ್ಷ ರೂಪಾಯಿಗಳ ಪ್ರೀಮಿಯಂ ಅನ್ನು ಠೇವಣಿ ಇಟ್ಟಿದ್ದೀರಿ ಎಂದಿಟ್ಟುಕೊಳ್ಳಿ, ಆಗ ನೀವು ವಾರ್ಷಿಕವಾಗಿ 50,250 ರೂಗಳನ್ನು ಪಡೆಯಬಹುದಾಗಿದೆ.
ಗಂಭೀರ ಅನಾರೋಗ್ಯ ಎದುರಾಗಿ, ನಿಮಗೆ ಹಣದ ಅಗತ್ಯವಿದ್ದಲ್ಲಿ, ಸರಳ ಪಿಂಚಣಿ ಯೋಜನೆಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ಹಿಂಪಡೆಯಬಹುದು.
ಇನ್ನು, ಪಾಲಿಸಿಯನ್ನು ಸರೆಂಡರ್ ಮಾಡಿದ ನಂತರ, 95% ಮರುಪಾವತಿಯನ್ನು ಪಡೆಯಬಹುದು. ಇದರ ಹೊರತಾಗಿ, ಈ ಯೋಜನೆಯ ಮೇಲೆ ಸಾಲ ಕೂಡ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ರೈತರ ಸಮಸ್ಯೆಗಳನ್ನು ನೂತನ ಮುಖ್ಯಮಂತ್ರಿಗಳು ಹೇಗೆ ನಿಭಾಯಿಸುತ್ತಾರೆ ಎಂದು ಕಾದುನೋಡಬೇಕು