ನವ ದೆಹಲಿ : ಎಲ್ಐಸಿ ಆಧಾರ್ ಸ್ಥಂಭ್ ಪಾಲಿಸಿ ಒಂದು ಜೀವವಿಮಾ ಪಾಲಸಿಯಾಗಿದ್ದು. ಸುರಕ್ಷತೆ ಹಾಗೂ ಉಳಿತಾಯ ಎರಡರ ಲಾಭ ಕೂಡ ಇದರಲ್ಲಿ ಸಿಗಲಿದೆ. ಆದರೆ, ಈ ಪಾಲಸಿ ಕೇವಲ ಪುರುಷರಿಗಾಗಿ ಮಾತ್ರ ಸೀಮಿತವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್ ಅಗತ್ಯ. ಎಲ್ಐಸಿಯ ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲ ರೈಡರ್ ಗಳ ಜೊತೆಗೆ ಡೆತ್ ಹಾಗೂ ಮ್ಯೆಚುರಿಟಿ ಬೆನಿಫಿಟ್ ಕೂಡ ಸಿಗಲಿದೆ ಎಂದು ಇತ್ತೀಚೆಗೆ ಭಾರತೀಯ ಜೀವವಿಮಾ ನಿಗಮದ(LIC) ಅಧಿಕೃತ ವೆಬ್ ಸೈಟ್ licindia.in ನಲ್ಲಿ ಮಾಹಿತಿ ನಿಡಿದೆ.
ಓದಿ : ನನಗಾಗ 35, ನಾನು ಮಕ್ಕಳನ್ನು ಬಯಸುತ್ತಿದ್ದೆ, ಆತ ಇನ್ನೂ 20ರ ಹರೆಯದಲ್ಲಿದ್ದ : ಪ್ರಿಯಾಂಕ
ಈ ಪಾಲಸಿಯ ವಿಶೇಷತೆಗಳೇನು..?
ಇದೊಂದು ನಾನ್ ಲಿಂಕ್ಡ್ ಹಾಗೂ ಪ್ರಾಫಿಟ್ ಎಂಡೋಮೆಂಟ್ ಅಶುರೆನ್ಸ್ ಪ್ಲಾನ್ ಆಗಿದ್ದು, ಪಾಲಸಿಯ ಮುಕ್ತಾಯಕ್ಕು ಮೊದಲಾಗಿ ಪಾಲಸಿದಾರರ ಅಕಾಲಿಕವಾಗಿ ಮರಣ ಹೊಂದಿದರೆ, ನಾಮಿನಿಗೆ ಡೆತ್ ಬೆನಿಫಿಟ್ ಸಿಗಲಿದೆ. ಇದರಿಂದ ಕುಟುಂಬ ಸದಸ್ಯರ ಭವಿಷ್ಯದ ಅಗತ್ಯತೆಗಳು ಪೂರ್ಣಗೊಳ್ಳುತ್ತವೆ. ಇನ್ನೊಂದೆಡೆ ಪಾಲಸಿದಾರರು ಪಾಲಿಸಿ ಕೊನೆಗೊಳ್ಳುವ ತನಕ ಜೀವಂತವಾಗಿದ್ದರೇ, ಮ್ಯೆಚುರಿಟಿ ಬೆನಿಫಿಟ್ ಕೂಡ ಲಭ್ಯವಾಗಲಿದೆ. ಇದನ್ನು ಪಾಲಿಸಿದಾರರಿಗೆ ಏಕಕಾಲಕ್ಕೆ ಒದಗಿಸಲಾಗುತ್ತದೆ ಎಂದು ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದೆ.
10 ರಿಂದ 20 ವರ್ಷಗಳ ಕಾಲ ಇರಲಿದೆ ಈ ಪಾಲಿಸಿ ಅವಧಿ :
8 ರಿಂದ 55 ವರ್ಷ ವಯಸ್ಸಿನವರು ಯಾರು ಬೇಕಾದವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಈ ಪ್ಲ್ಯಾನ್ ನ ಮ್ಯೆಚುರಿಟಿ ಸಮಯದಲ್ಲಿ ಅರ್ಜಿದಾರರ ಗರಿಷ್ಟ ವಯಸ್ಸು 70 ವರ್ಷಗಳಾಗಿರಬೇಕು. ಆಧಾರ್ ಸ್ಥಂಭ್ ಪಾಲಸಿ ಅಡಿ ನೀಡಲಾಗುವ ಕನಿಷ್ಠ 75, 000 ರೂ.ಗಳಾಗಿದ್ದರೆ ಅತ್ಯಧಿಕ 3,00,000ರೂ. ಗಳಾಗಿದೆ. ಈ ಪಾಲಸಿಯನ್ನು ನೀವು 10 ರಿಂದ 20 ವರ್ಷಗಳ ಅವಧಿಗೆ ಪಡೆಯಬಹುದು. ಈ ಪಾಲಸಿಯ ಇನ್ನೊಂದು ವಿಶೇಷತೆ ಎಂದರೆ. ಇದರಲ್ಲಿ ರಿಸ್ಕ್ ಕವರೇಜ್ ಪಾಲಸಿ ಜಾರಿಯಾದ ದಿನದಿಂದಲೇ ಆರಂಭವಾಗಲಿದೆ.
ಓದಿ : ಬೇಕಿದ್ದರೆ ನಳಿನ್ ಕಟೀಲ್ ಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ: ಸಿದ್ದರಾಮಯ್ಯ