ಬೆಂಗಳೂರು: ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ತಮ್ಮ ಬಳಿ ಇರುವ ಪರವಾನಗಿ ಶಸ್ತ್ರಾಸ್ತ್ರಗಳನ್ನು ಸಮೀಪದ ಠಾಣೆಗೆ ಒಪ್ಪಿಸುವಂತೆ ಆದೇಶಿಸ ಲಾಗಿತ್ತು. ಈ ವೇಳೆ ರೌಡಿಗಳು ಪರವಾನಗಿ ಶಸ್ತ್ರಾಸ್ತ್ರ ಪಡೆದುಕೊಂಡಿ ರುವುದು ಬೆಳಕಿಗೆ ಬಂದಿದೆ.
ರೌಡಿಶೀಟರ್ ಅಶೋಕ್ ಅಡಿಗ ಸೇರಿ ಒಟ್ಟು ಆರು ರೌಡಿಶೀಟರ್‌ಗಳ ಬಳಿ ಪಿಸ್ತೂಲ್‌ಗಳು ಪತ್ತೆಯಾಗಿದ್ದು, ಈ ರೌಡಿಗಳಿಗೆ ಪೊಲೀಸರೇ ಶಸ್ತ್ರಾಸ್ತ್ರ ಪರವಾನಗಿ ನೀಡಿದ್ದಾರೆ. ಈ ವಿಚಾರ ತಿಳಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಂಬಂಧ ಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಗಣ್ಯರು, ಉದ್ಯಮಿಗಳು, ಭದ್ರತಾ ಸಿಬ್ಬಂದಿ ಸೇರಿ ಅನೇಕರು ಆಸ್ತಿ ಮತ್ತು ಸಂಪತ್ತಿನ ರಕ್ಷಣೆಗಾಗಿ, ಜೀವ ಭಯದಿಂದ ಶಸ್ತ್ರಾಸ್ತ್ರ ಪರವಾನಗಿ ಪಡೆದು ಬಂದೂಕು, ಡಬಲ್ ಬ್ಯಾರಲ್, ಸಿಂಗಲ್ ಬ್ಯಾರಲ್, ಶಾರ್ಟ್ ರೇಂಜ್ ಗನ್, ಪಿಸ್ತೂಲ್, ರಿವಾಲ್ವರ್ ಇಟ್ಟುಕೊಂಡಿರುತ್ತಾರೆ. ಆದರೆ, ನಗರದಲ್ಲಿ ರೌಡಿಗಳು ಪಿಸ್ತೂಲ್ ಹೊಂದಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ದಯಾನಂದ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ಠಾಣೆಗಳಿಗೆ ಒಪ್ಪಿಸು ವಂತೆ ಆದೇಶಿಸಲಾಗಿತ್ತು. ಅದರಂತೆ ಸಾರ್ವಜನಿಕರು ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವ ವೇಳೆ 6-8 ಮಂದಿ ರೌಡಿಶೀಟರ್‌ಗಳ ಬಳಿ ಪರವಾನಗಿ ಪಿಸ್ತೂಲ್ ಇರುವುದು ಗೊತ್ತಾಗಿದೆ. ರೌಡಿಶೀಟರ್‌ಗಳಿಗೆ ಈ ಹಿಂದೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿದ್ದು, ಈ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ಮಾಡಬೇಕು. ಯಾವ ಹಿನ್ನೆಲೆಯಲ್ಲಿ ಮತ್ತು ಯಾವ ಸನ್ನಿವೇಶದಲ್ಲಿ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿದೆ ಎಂಬುದನ್ನು ಗಮನಿಸಬೇಕು. ಪರವಾನಗಿ ವಾಪಸ್ ಪಡೆಯಲು ಅವಕಾಶವಿದೆ. ರೌಡಿಶೀಟ ರ್‌ಗಳಿಂದ ಕಾನೂನಾತ್ಮಕವಾಗಿ ಶಸ್ತ್ರಾಸ್ತ್ರ ಪರವಾನಗಿ ಮತ್ತು ಪಿಸ್ತೂಲ್‌ಗಳನ್ನು ವಾಪಸ್ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.