ಮುಂಬೈ: ಭಾರತೀಯ ಜೀವವಿಮಾ ನಿಗಮ(ಎಲ್‌ಐಸಿ)ದ ಷೇರುಗಳ ಮಾರಾಟ ಪ್ರಕ್ರಿಯೆ ಪ್ರಸಕ್ತ ವಿತ್ತೀಯ ವರ್ಷದ ಕೊನೆಯ ತ್ತೈಮಾಸಿಕದಲ್ಲಿ ನಡೆಯಲಿದ್ದು, ಕೇಂದ್ರ ಸರಕಾರವು ಎಲ್‌ಐಸಿಯ ನಿಯಮಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ಚಿಂತನೆ ನಡೆಸಿದೆ. ಅದರಂತೆ, ಎಲ್‌ಐಸಿಯ ಲಾಭಾಂಶ ಅಥವಾ ಉಳಿತಾಯದ ಮೊತ್ತವನ್ನು ಇನ್ನು ಮುಂದೆ ಖಾಸಗಿ ಕಂಪನಿಗಳ ಮಾದರಿಯಲ್ಲಿ ವಿತರಣೆ ಮಾಡುವುದು ಸರಕಾರದ ಉದ್ದೇಶವಾಗಿದೆ.
ಇದನ್ನೂ ಓದಿ:‘ಮದ್ಯದಂಗಡಿ ಮುಚ್ಚದಿದ್ದರೆ ಹುಡುಗಿಯರನ್ನು ಶಾಲೆಗೆ ಕಳುಹಿಸುವುದಿಲ್ಲ’: ಗ್ರಾಮಸ್ಥರ ಅಭಿಯಾನ
ಈ ಲಾಭಾಂಶ ಹಂಚಿಕೆ ನೀತಿಯಿಂದಾಗಿ, ಎಲ್‌ಐಸಿಯ ಷೇರು ಖರೀದಿಸುವವರಿಗೆ ಲಾಭವಾದರೆ, ಪ್ರಸ್ತುತ ಪಾಲಿಸಿದಾರರು ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸಬೇಕಾಗುತ್ತದೆ. ಪ್ರಸ್ತುತ ವಿಶೇಷ ಕಾನೂನಿನಡಿ ನಿರ್ವಹಿಸಲ್ಪಡುತ್ತಿರುವ ಎಲ್ ಐಸಿ, ತನ್ನ ಹೆಚ್ಚುವರಿ ಅಥವಾ ಉಳಿತಾಯದ ಮೊತ್ತದ
ಶೇ.5ರಷ್ಟನ್ನು ಷೇರುದಾರರ ನಿಧಿಗೆ ವರ್ಗಾಯಿಸುತ್ತದೆ.
ಉಳಿದ ಶೇ.95ರಷ್ಟು ಮೊತ್ತವು ಪಾಲಿಸಿದಾರರ ನಿಧಿಗೆ ಹೋಗುತ್ತದೆ. ಆ ಮೊತ್ತವನ್ನು ಅರ್ಹ ಜೀವವಿಮಾ ಪಾಲಿಸಿಗಳಿಗೆ ಬೋನಸ್ ವಿತರಿಸಲು ಬಳಸಲಾಗುತ್ತದೆ. ಅಂದರೆ, ಹೆಚ್ಚುವರಿ ಮೊತ್ತದ ಹಂಚಿಕೆಯ ಅನುಪಾತವು 95:10 ಆಗಿದೆ. ಆದರೆ, ವಿಮಾ ಕಾಯ್ದೆಯನ್ವಯ ನಿರ್ವಹಿಸಲ್ಪಡುವ ಇತರೆ ಖಾಸಗಿ ಜೀವ ವಿಮಾ ಕಂಪನಿಗಳಿಗೆ ಈ ಅನುಪಾತವು90:10 ಆಗಿದೆ.
ಖಾಸಗಿ ಕಂಪನಿಗಳ ಮಾದರಿಯಲ್ಲೇ ಉಳಿತಾಯದ ಹಂಚಿಕೆಯಾದರೆ ಹೂಡಿಕೆದಾರರು ಷೇರು ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ ಎನ್ನುವುದು ಸರಕಾರದ ಯೋಚನೆಯಾಗಿದೆ. ಆದರೆ, ಈ ಲಾಭಾಂಶ ಹಂಚಿಕೆ ನಿಯಮವು ಅವಧಿ ವಿಮೆ, ಖಾತ್ರಿ ಮರುಪಾವತಿ ಪಾಲಿಸಿಗಳು, ಯುನಿಟ್ ಲಿಂಕ್ಡ್ ಯೋಜನೆ ಗಳ ಪಾಲಿಸಿದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.