Advertisement

ಗ್ರಾಹಕರಿಗೆ 1,600 ಕೋಟಿ ರೂ.ನೀಡಿದ ಎಲ್ಐಸಿ

12:24 PM Sep 07, 2019 | Suhan S |

ರಾಮನಗರ: ಬೆಂಗಳೂರು ನಗರ, ಕೋಲಾರ, ಚಾಮರಾಜನಗರ ಮತ್ತು ರಾಮನಗರ ಒಳಗೊಂಡ ಭಾರತೀಯ ಜೀವ ವಿಮಾ ನಿಗಮದ ಬೆಂಗಳೂರು ವಿಭಾಗ (2)ರಲ್ಲಿ 2018-19ನೇ ಸಾಲಿನಲ್ಲಿ 1600 ಕೋಟಿ ರೂ. ಗಳಷ್ಟು ಹಣವನ್ನು ಗ್ರಾಹಕರಿಗೆ ವಿತರಿಸಲಾಗಿದೆ ಎಂದು ಬೆಂಗಳೂರು ವಿಭಾಗ (2)ರ ಹಿರಿಯ ವಿಭಾಗಾಧಿಕಾರಿ ಜೆ.ಜಗದೀಶ್‌ ತಿಳಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಳೆದ ಸಾಲಿನಲ್ಲಿ 1.92 ಲಕ್ಷ ಪಾಲಿಸಿಗಳ ಅವಧಿ ಪೂರ್ಣ ಮತ್ತು ಮರಣ ಧಾವೆಗಳಲ್ಲಿ ಈ ಪ್ರಮಾಣದ ಮೊತ್ತವನ್ನು ಇತ್ಯರ್ಥ ಗೊಳಿಸಲಾಗಿದೆ.ಬೆಂಗಳೂರು ವಿಭಾಗ (2) 2019-20ನೇ ಸಾಲಿಗೆ 1 ಲಕ್ಷ 81 ಸಾವಿರ ಹೊಸ ಪಾಲಿಸಿ ಮಾಡಿಸುವ ಮತ್ತು ಒಟ್ಟಾರೆ 542 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸುವ ಗುರಿ ಹೊಂದಿದೆ ಎಂದರು.

ವಿಮಾ ಮಾರುಕಟ್ಟೆಯಲ್ಲಿ ಭಾರತ 3ನೇ ಸ್ಥಾನ: ವಿಶ್ವದಲ್ಲಿ ಅತಿ ಹೆಚ್ಚು ವಿಮಾ ಪಾಲಿಸಿದಾರರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತಕ್ಕೆ 3ನೇ ಸ್ಥಾನ ಇದೆ. ವಿಶ್ವದ್ಯಂತ 14 ದೇಶಗಳಲ್ಲಿ ನಮ್ಮ ಶಾಖೆಗಳು ಇವೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಾನ್ಯತೆ ಪಡೆದ 25ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ ಎಂದು ಹರ್ಷ ವ್ಯಕ್ತಪಡಿಸಿದರು.

31 ಲಕ್ಷ ಕೋಟಿ ಆಸ್ತಿ: 1956ರಲ್ಲಿ 5 ಕೋಟಿ ಬಂಡವಾಳದೊಂದಿಗೆ ಆರಂಭವಾದ ಎಲ್.ಐ.ಸಿ ಸಂಸ್ಥೆ ಈಗ 31 ಲಕ್ಷ ಕೋಟಿ ಆಸ್ತಿಯನ್ನು ಹೊಂದಿದೆ. 28 ಲಕ್ಷ ಕೋಟಿ ಲೈಫ್ ಫ‌ಂಡನ್ನು ಹೊಂದಿದೆ. 168 ಶಾಖೆಗಳೊಂದಿಗೆ ಆರಂಭವಾಗಿ ಈಗ ದೇಶದ ಉದ್ದಗಲಕ್ಕೂ 4851 ಕಚೇರಿಗಳು, 1 ಲಕ್ಷಕ್ಕೂ ಹೆಚ್ಚು ವಿಮಾ ಪ್ರತಿನಿಧಿಗಳು, 29 ಕೋಟಿಗೂ ಅಧಿಕ ಪಾಲಿಸಿಗಳು ಸೇವೆಯನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಶೇ.74.71 ಮಾರುಕಟ್ಟೆ ಪಾಲು: ಕಳೆದ ಸಾಲಿನ ಹಣಕಾಸು ವರ್ಷದಲ್ಲಿ 11ಲಕ್ಷ 42 ಸಾವಿರ ಕೋಟಿ ವಿಮಾ ಕಂತಿನ ಸಂಗ್ರಹಣೆ ಮಾಡಿ ಶೇ. 5.68 ಅಭಿವೃದ್ದಿಯನ್ನು ದಾಖಲಿಸಿದೆ. ದೇಶದ ಒಟ್ಟಾರೆ ವಿಮಾ ಪಾಲಿಸಿ ಮಾರುಕಟ್ಟೆಯಲ್ಲಿ ಎಲ್ಐಸಿಯ ಪಾಲು ಶೇ 74.71 ರಷ್ಟಿದೆ. ಪ್ರೀಮಿಯಂ ಮಾರು ಕಟ್ಟೆಯಲ್ಲಿ ಶೇ 66.24 ಪಾಲಿದೆ. 259 ಲಕ್ಷ ದಾವೆಗಳ ಮೂಲಕ 1.63 ಲಕ್ಷ ಕೋಟಿ ಮೊತ್ತವನ್ನು ಪಾವತಿಸಿ, ಅವಧಿ ಪೂರ್ಣ ದಾವೆಗಳಲ್ಲಿ ಶೇ 92.95, ಮರಣ ದಾವೆಗಳ್ಲಿ ಶೇ 98.27 ದಾವೆಗಳನ್ನು ಇತ್ಯರ್ಥ ಗೊಳಿಸಿದೆ ಎಂದು ವಿವರಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಪಿ.ಆರ್‌.ಶ್ರೀಕುಮಾರ್‌, ಗ್ರಾಹಕ ಸಂಬಂಧ ವ್ಯವಸ್ಥಾಪಕರಾದ ಆರ್‌.ಶಾಮಲತಾ, ಚನ್ನಪಟ್ಟಣ ಶಾಖೆಯ ಮುಖ್ಯ ವ್ಯವಸ್ಥಾಪಕ ರಾಘವೇಂದ್ರ ಹೆಬ್ಟಾರ್‌, ಬೆಂಗಳೂರು ವಿಭಾಗ 2 ವ್ಯವಸ್ಥಾಪಕ (ಇಡಿಎಂಎಸ್‌) ಎಂ.ಎಸ್‌.ಚಂದ್ರಶೇಖರ್‌, ಚನ್ನಪಟ್ಟಣ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರಾದ ರತ್ನಪ್ರಭಾ ಶಂಕರ್‌, ಸೂಕ್ಷವಿಮೆ ಉಪ ವ್ಯವಸ್ಥಾಪಕ ಎ.ಪಿ.ರವೀಂದ್ರ, ರಾಮನಗರ ಶಾಖಾ ವ್ಯವಸ್ಥಾಪಕ ಭಾನುಪ್ರಕಾಶ್‌, ಚನ್ನಪಟ್ಟಣ ಶಾಖೆಯ ಸಹಾಯಕ ಶಾಖಾ ವ್ಯವಸ್ಥಾಪಕ ಸಿ.ಕೆ.ಸುರೇಶ್‌, ಮಹಿಧರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next