ನವದೆಹಲಿ: ದೇಶದ ಬೃಹತ್ ವಿಮಾ ಕಂಪನಿ ಎಲ್‌ಐಸಿ, ಕಂತು ಕಟ್ಟದೇ ನಿಷ್ಕ್ರಿಯವಾಗಿರುವ ಪಾಲಿಸಿಗಳಿಗೆ ಮತ್ತೆ ಜೀವ ನೀಡಲು ಅಭಿಯಾನವನ್ನೇ ಆರಂಭಿಸಿದೆ. ಆ.17ರಿಂದ ಅ.21 ಈ ಅಭಿಯಾನ ನಡೆಯಲಿದೆ.
ಹೆಚ್ಚುವರಿ ಭದ್ರತೆ ನೀಡುವ ಯುಲಿಪ್ ಪಾಲಿಸಿಗಳನ್ನು ಹೊರತುಪಡಿಸಿ, ಉಳಿದೆಲ್ಲ ರೀತಿಯ ವಿಮೆಗಳನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶವಿದೆ.
ಅನಿವಾರ್ಯ ಕಾರಣಗಳಿಂದ ವಿಮಾಕಂತನ್ನು ಕಟ್ಟಲು ಸಾಧ್ಯವಾಗದೇ, ನಿಷ್ಕ್ರಿಯವಾಗಿದ್ದರೆ ಅದನ್ನು ಸಕ್ರಿಯಗೊಳಿಸಲು ಕೆಲವು ವಿನಾಯಿತಿಗಳನ್ನು ಎಲ್‌ಐಸಿ ಘೋಷಿಸಿದೆ.
ಮೊದಲ ಬಾರಿಗೆ ನೀವು ಕಂತುಕಟ್ಟದ ದಿನಾಂಕದಿಂದ ಇಲ್ಲಿಯವರೆಗಿನ ಅವಧಿ ಐದು ವರ್ಷದೊಳಗಿದ್ದರೆ, ಆ ಕಂತುಗಳನ್ನು ನೀವು ಮರುಪಾವತಿ ಮಾಡಲು ಅವಕಾಶವಿದೆ.
ಸಣ್ಣಮೊತ್ತದ ಪಾಲಿಸಿಗಳಾಗಿದ್ದರೆ ತಡವಾಗಿ ಕಂತು ಕಟ್ಟುತ್ತಿರುವುದಕ್ಕೆ ಶೇ.100 ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಸ್ವಲ್ಪ ದೊಡ್ಡ ಮೊತ್ತ ಕಂತುಗಳು ಬಾಕಿಯಿದ್ದರೆ ಬೇರೆಬೇರೆ ಶುಲ್ಕ ವಿನಾಯಿತಿ ಪ್ರಮಾಣವನ್ನು ಘೋಷಿಸಲಾಗಿದೆ.