Advertisement

ಸುಲಲಿತ ಸಂಪರ್ಕ: ಎಲ್‌ಐಸಿಯಿಂದ ಆನಂದ ಆ್ಯಪ್‌

11:50 AM Aug 26, 2021 | Team Udayavani |

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ಯ “ಆನಂದ ಮೊಬೈಲ್‌ ಆ್ಯಪ್‌’ ಅನ್ನು ಸಂಸ್ಥೆಯ ಅಧ್ಯಕ್ಷ ಎಂ.ಆರ್‌. ಕುಮಾರ್‌ ಬುಧವಾರ ಲೋಕಾರ್ಪಣೆಗೊಳಿಸಿದ್ದಾರೆ.

Advertisement

ಇದನ್ನು ಓದಿ:ಮೊಘಲರು ದುಷ್ಟರಲ್ಲ…ನಿಜವಾಗಿ ಈ ದೇಶ ಕಟ್ಟಿದ್ದು ಮೊಘಲರು: ನಿರ್ದೇಶಕ ಕಬೀರ್ ಖಾನ್

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಹೊಸ ಆ್ಯಪ್‌ ಮೂಲಕ ಡಿಜಿಟಲ್‌ ವ್ಯವಸ್ಥೆಯ ಮೂಲಕವೇ “ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ಪ್ರಕ್ರಿಯೆ ನಡೆಸಲು ಇದರಿಂದ ಅನುಕೂಲ ವಾಗಲಿದೆ. ಎಲ್‌ಐಸಿಯ ಅಧಿಕಾರಿಗಳು ಮತ್ತು ಗ್ರಾಹಕರ ನಡುವೆ ಸುಲಲಿತವಾಗಿ ಸಂಪರ್ಕ ಸಾಧಿಸಿ, ವಹಿವಾಟು ನಡೆಸಲು, ಆಧಾರ್‌ ಆಧಾರಿತ ಇ-ದೃಢೀಕರಣ ಪ್ರಕ್ರಿಯೆ ನಡೆಸಲೂ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲ್‌ಐಸಿ ಅಧ್ಯಕ್ಷ ಕುಮಾರ್‌ “ಹೊಸ ಆ್ಯಪ್‌ ಅನ್ನು ಲೋಕಾರ್ಪಣೆಗೊಳಿಸಿದ್ದು ಸಂಸ್ಥೆಯ ಇತಿಹಾಸದಲ್ಲಿ ಪ್ರಮುಖ ಅಂಶ. ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ಆದರೆ ವಿಮೆಯ ಅಗತ್ಯ ಮತ್ತು ಎಲ್‌ಐಸಿ ಅಂಥ ಪರಿಸ್ಥಿತಿಗಳಿಗೆ ಹೊಂದಿಕೊಂಡು ವಹಿವಾಟು ನಡೆಸಲಿದೆ’ ಎಂದರು.

ಹೊಸ ಆ್ಯಪ್‌ನಿಂದಾಗಿ ಜೀವ ವಿಮಾ ಏಜೆಂಟ್‌ಗಳು ಮತ್ತು ಅಧಿಕೃತ ಮಧ್ಯವರ್ತಿ ಗಳಿಗೆ ಸುಲಭವಾಗಿ ಗ್ರಾಹಕರಿಗೆ ವಿಮೆ ಮಾಡಿಸಲು ಮತ್ತು ಅದರ ಅಪ್‌ಡೇಟ್‌ ಅನ್ನು ನೀಡಲು ಸುಲಭವಾಗಲಿದೆ. ಇದೇ ಸಂದರ್ಭದಲ್ಲಿ ಏಜೆಂಟ್‌ ಗಳಿಗೆ ಮತ್ತು ಇತರರಿಗೆ ಆ್ಯಪ್‌ ಅನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಬಗ್ಗೆ ಇ-ತರಬೇತಿ ವಿಡಿಯೋವನ್ನೂ ಬಿಡುಗಡೆ ಮಾಡಲಾಯಿತು. ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್‌ ಕುಮಾರ್‌ ಗುಪ್ತಾ, ರಾಜ್‌ ಕುಮಾರ್‌, ಸಿದ್ಧಾರ್ಥ ಮೊಹಾಂತಿ, ಮಿನಿ ಐಪೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next