ನವದೆಹಲಿ: ಸದ್ಯದಲ್ಲೇ ಎಲ್‌ಐಸಿ ಐಪಿಒ ಬಿಡುಗಡೆಯಾಗಲಿದ್ದು, ದೊಡ್ಡ ಮಟ್ಟದಲ್ಲಿ ವಿದೇಶಿ ಹೂಡಿಕೆದಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಫೆಮಾ)ಯ ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಮೆಗಾ ಐಪಿಒದಲ್ಲಿ ಶೇ.20ರಷ್ಟು ಸಾಗರೋತ್ತರ ಹೂಡಿಕೆಗೆ ಅವಕಾಶ ನೀಡುವ ಸಲುವಾಗಿ ಸರ್ಕಾರವು ಈಗಾಗಲೇ ಪರಿಷ್ಕೃತ ವಿದೇಶಿ ನೇರ ಬಂಡವಾಳ(ಎಫ್ ಡಿಐ) ನೀತಿಗೆ ಒಪ್ಪಿಗೆ ನೀಡಿದೆ.
ಅದು ಕಾರ್ಯಗತವಾಗಬೇಕೆಂದರೆ ಫೆಮಾ ಅಧಿಸೂಚನೆಯ ಅಗತ್ಯವಿದೆ. ಈಗ ಸರ್ಕಾರವು ಫೆಮಾ ನಿಯಮಕ್ಕೆ ತಿದ್ದುಪಡಿ ತಂದಿರುವ ಕಾರಣ, ಎಲ್‌ಐಸಿ ಐಪಿಒ ಬಿಡುಗಡೆ ಪ್ರಕ್ರಿಯೆ ಸಮೀಪದಲ್ಲೇ ಇದೆ ಎಂಬ ಸುಳಿವು ಸಿಕ್ಕಿದೆ.
ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರವೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೆಬಿಗೆ ಹೊಸದಾಗಿ ದಾಖಲೆಪತ್ರಗಳನ್ನು ಸಲ್ಲಿಸದೇ ಐಪಿಒ ಬಿಡುಗಡೆ ಮಾಡಲು ಕೇಂದ್ರಕ್ಕೆ ಮೇ 12ರವರೆಗೆ ಕಾಲಾವಕಾಶವಿದೆ.