Advertisement

ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಎಲ್‌ಐಸಿ ನೌಕರರಿಂದ ಪ್ರತಿಭಟನೆ

09:49 AM Feb 05, 2020 | sudhir |

ಬೆಂಗಳೂರು: ಎಲ್‌ಐಸಿ (ಭಾರತೀಯ ಜೀವವಿಮಾ ನಿಗಮ)ಸಂಸ್ಥೆಯನ್ನು ಷೇರುಪೇಟೆಗೆ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜೆಸಿ ರಸ್ತೆಯಲ್ಲಿರುವ ಎಲ್‌ಐಸಿಯ ವಿಭಾಗೀಯ ಕಚೇರಿ-1ರ ಮುಂದೆ ಎಲ್‌ಐಸಿಯ ನೌಕರರು, ಜೀವವಿಮಾ ಪ್ರತಿನಿಧಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖೀಲ ಭಾರತ ವಿಮಾ ನೌಕರರ ಸಂಘದ ಬೆಂ.ವಿಭಾಗದ ಪ್ರಧಾನ ಕಾರ್ಯದರ್ಶಿ ಗೀತಾ ಎಸ್‌.ಕೆ ಅವರು, ವಿಮಾ ಉದ್ದಿಮೆ ಸರ್ಕಾರಿ ಸ್ವಾಮ್ಯದಲ್ಲಿ ಇರಬೇಕು. ಖಾಸಗಿಯವರಿಗೆ ಇದರಿಂದ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.

ಎಲ್‌ಐಸಿ ಕಳೆದ 62 ವರ್ಷಗಳಿಂದ ದೇಶದ ಯಶಸ್ವಿ ಉದ್ಯಮಗಳಲ್ಲಿ ಒಂದಾಗಿದೆ. ಎಲ್‌ಐಸಿಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿತ್ತು.ಆದರೆ, ಎಲ್‌ಐಸಿ 2,660ಕೋಟಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಿದೆ. ಜನರ ಹಣವನ್ನು ಜನರ ಕಲ್ಯಾಣಕ್ಕೇ ಬಳಸಬೇಕು.

ಕೇಂದ್ರ ಸರ್ಕಾರ ಎಲ್‌ಐಸಿಯಲ್ಲಿನ ಕೇಂದ್ರದ ಪಾಲನ್ನು ಐಪಿಒ (ಆರಂಭಿಕ ಸಾರ್ವಜನಿಕ ನೀಡಿಕೆ) ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿದೆ. ಈಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಈ ಮಸೂದೆ ಅಂಗೀಕರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next