Advertisement
ಖಲೀಫಾ ಹಿಫ¤ರ್ ನೇತೃತ್ವದಲ್ಲಿ ಲಿಬಿಯನ್ ನ್ಯಾಶನಲ್ ಆರ್ಮಿ ದಂಗೆ ಎದ್ದಿದ್ದು, ರಾಜಧಾನಿ ಟ್ರಿಪೋಲಿ ವಶಕ್ಕೆ ಯತ್ನಿಸುತ್ತಿದೆ. ಸರಕಾರವನ್ನು ಉರುಳಿಸುವುದು ಅದರ ಉದ್ದೇಶ ಆಗಿದ್ದು ರಷ್ಯಾ, ಸೌದಿ ಅರೇಬಿಯಾ, ಯುಎಇಬೆಂಬಲವಿದೆ ಎನ್ನಲಾ ಗಿದೆ. ಫ್ರಾನ್ಸ್ ಕೂಡ ಬೆಂಬ ಲಿಸುತ್ತಿದೆ ಎನ್ನಲಾಗಿ
ದ್ದರೂ ಅದು ನಿರಾಕರಿ ಸಿದೆ. ಆದರೆ ಫ್ರಾನ್ಸ್ ಜತೆ ವಹಿವಾಟು ಕಡಿದುಕೊಳ್ಳುವ ಬಗ್ಗೆ ಲಿಬಿಯಾ ವಿದೇಶ ಸಚಿವ ಮಾತನಾಡಿದ್ದಾರೆ.
ಹಿಫ್ತಾರ್ ಜತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿರುವುದಾಗಿ ಹೇಳಲಾಗಿದೆ. ಲಿಬಿಯಾದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಅಮೆರಿಕ ಎಲ್ಲ ಪ್ರಯತ್ನವನ್ನೂ ನಡೆಸುತ್ತದೆ ಎಂದು ಶ್ವೇತಭವನದ ಪ್ರಕಟನೆಯಲ್ಲಿ ತಿಳಿಸಲಾಗಿದೆ. 500 ಭಾರತೀಯರು
ಲಿಬಿಯಾದಲ್ಲಿ ಸುಮಾರು 500 ಭಾರತೀಯರಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸದ್ಯ ವಿಮಾನ ಹಾರಾಟ ಲಭ್ಯವಿದ್ದು, ಈಗಲೇ ಭಾರತೀಯರು ಸ್ವದೇಶಕ್ಕೆ ಮರಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೂ ತಿಳಿಸಿ ಎಂದು ಸುಷ್ಮಾ ಹೇಳಿದ್ದಾರೆ.