Advertisement
ಸ್ಥಳಾಂತರಿ ವಾಚನಾಲಯ: ನಗರದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದಕ್ಕೆ ಎಲ್ಲ ಕಡೆಗೂ ಸ್ಥಳಾಂತರವಾಗುತ್ತಲೆ ಇದೆ. ಮೊದಲು ಪುರಸಭೆ ವತಿಯಿಂದ ನಡೆಯುತ್ತಿದ್ದ ಗ್ರಂಥಾಲಯ ಪ್ರತ್ಯೇಕಗೊಂಡು 1978ರಲ್ಲಿ ಕೇಂದ್ರ ಗ್ರಂಥಾಲಯ ಅಧಿಧೀನಕ್ಕೆ ಬಂದ ಬಳಿಕ ಪುರಸಭೆಯ ಸಿಬ್ಬಂದಿಯಿಂದ ಪೇಠೆ ಭಾಗದ ಹನುಮಾನ್ ದೇವಸ್ಥಾನದ ಬಳಿಯ ಮಹಡಿ ಮೇಲಿನ ಕಟ್ಟಡದಲ್ಲಿತ್ತು. ನಂತರ ಬಹು ವರ್ಷದವರೆಗೆ ನಗರದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿತ್ತು. ಅಲ್ಲಿಂದ ಪುರಸಭೆಯ ಮುಖ್ಯ ಕಟ್ಟಡದ ಹಿಂಭಾಗದಲ್ಲಿ ಸ್ಥಳಾಂತರಗೊಂಡಿತು. ಹೀಗೆ ಸ್ವಂತ ಕಟ್ಟಡವಿಲ್ಲದೆ ಅಲ್ಲಲ್ಲಿ ಸ್ಥಳಾಂತರಗೊಂಡು ಈಗ ಪುರಸಭೆ ಆವರಣದಲ್ಲಿನ ಹೊಸ ಕಟ್ಟಡದ ಸುಮಾರು 20×40 ಅಡಿ ಅಳತೆಯ ಒಂದು ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆಲ ಮುಖಂಡರ ಪರಿಶ್ರಮದಿಂದ ನಗರದ ಒಂದು ಸ್ಥಳದಲ್ಲಿ ಗ್ರಂಥಾಲಯಕ್ಕೆ ನಿಗದಿಗೊಳಿಸಿ ಕಟ್ಟಡ ಪ್ರಾರಂಭಿಸಲಾಗಿತ್ತು.
Related Articles
Advertisement
ಸೌಲಭ್ಯ ಕೊರತೆ: ಸಾಕಷ್ಟು ಜನವಸತಿ ಇರುವ ಪ್ರದೇಶದ ಕೇಂದ್ರ ಸ್ಥಳದಲ್ಲಿ ಗ್ರಂಥಾಲಯವಿದ್ದರೆ ಮಹಿಳೆಯರು, ವೃದ್ಧರು ಸೇರಿದಂತೆ ನಗರದ ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಮೂತ್ರಾಲಯ, ಶೌಚಾಲಯ, ಕುಡಿಯುವ ನೀರಿನ, ಆಸನಗಳ, ಬೆಳಕು-ಗಾಳಿಯ ವ್ಯವಸ್ಥೆ ಅತ್ಯವಶ್ಯಕ. ಪುಸ್ತಕಗಳ ವಿಭಾಗ, ಪತ್ರಿಕೆಗಳ ವಿಭಾಗ, ಎಳೆಯರ ವಿಭಾಗ ಹೀಗೆ ವಿಭಾಗವಾರು ಕೊಠಡಿಗಳೊಂದಿಗೆ ಗ್ರಂಥಾಲಯ ಇರಬೇಕು. ಮಧ್ಯಾಹ್ನ ದಲ್ಲಿಯೂ ಗ್ರಂಥಾಲಯ ತೆರೆದಿರಬೇಕು.
ಈ ಗ್ರಂಥಾಲಯದಲ್ಲಿ ಪುಸ್ತಕಗಳ ಬೀರುಗಳ (ಕಪಾಟು) ಕೊರತೆ ಯಿಂದ ಲಿಂಟಲ್ ರ್ಯಾಕರ್ ಮೇಲೆಯೆ ಪುಸ್ತಕ ಗಳನ್ನಿಡಬೇಕಾಗಿದೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.ಮಧ್ಯಾಹ್ನದಲ್ಲೂ ಕಾರ್ಯ ನಿರ್ವಹಿಸಿದರೆ ಆ ಸಮಯದಲ್ಲಿ ಬರುವ ಓದುಗರಿಗೆ ಅನುಕೂಲವಾಗುತ್ತದೆ. ನಿಯಮಗಳ ಸೂಚನಾಫಲಕ ಹಾಗೂ ಸಿಸಿ ಕಾಮೆರಾಗಳ ಅಳವಡಿಕೆಯಾಗಬೇಕು. ಕೇವಲ 15-20 ಜನ ಓದುಗರು ಕೂಡ್ರಿಸಲು ಆಸನಗಳಿವೆ. ಪ್ರತ್ಯೇಕ ಶೌಚಾಲಯಗಳು ಅವಶ್ಯಕ.
ಗ್ರಂಥಾಲಯವನ್ನು ಜನರು ಜೀವನಾಡಿಗಳಾಗಿ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮೂರ ಗ್ರಂಥಾಲಯಕ್ಕೆ ಸ್ವಂತ ಜಾಗೆ-ಕಟ್ಟಡವಿಲ್ಲದ್ದಕ್ಕೆ ಅದು ಸ್ಥಳಾಂತರಗೊಳ್ಳುವ ಸಾಧ್ಯತೆಯಿತ್ತು. ನಮ್ಮಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಅಂಚೆ ಕಚೇರಿ ಹಿಂಭಾಗದಲ್ಲಿ 40×60 ಅಡಿ ನಿವೇಶನ ಗುರುತಿಸಿ, ಅವರ ಹೆಸರಿಗೆ ಮಾಡಲಾಯಿತು. ಆದರೆ ಕಟ್ಟಡ ಮಾಡುವಷ್ಟರಲ್ಲಿ ಕೆಲವರು ತಕರಾರು ಮಾಡಿದ್ದಕ್ಕೆ ಅನುದಾನ ಬಳಸಿ ಪುರಸಭೆ ಆವರಣದಲ್ಲಿ ಹೊಸ ಕೊಠಡಿ ನಿರ್ಮಿಸಿ ಗ್ರಂಥಾಲಯ ಬಳಕೆಗೆ ಕೊಡಲಾಯಿತು. ಗ್ರಂಥಾಲಯಕ್ಕಾಗಿ ನಿಗದಿಪಡಿಸಿದ ಸ್ಥಳದಲ್ಲೇ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲು ಪ್ರತಿಯೊಬ್ಬರು ಉತ್ಸುಕರಾಗಬೇಕಾಗಿದೆ. – ಬಸವರಾಜ ಬಾಳಿಕಾಯಿ, ಪುರಸಭೆ ಮಾಜಿ ಅಧ್ಯಕ್ಷ
-ಬಿ.ಟಿ. ಪತ್ತಾರ