Advertisement

ಗ್ರಂಥಾಲಯಕ್ಕಿಲ ಕರ; ಅಭಿವೃದ್ಧಿಗೆ ಗರ

01:55 PM Oct 29, 2019 | Team Udayavani |

ಲಿಂಗಸುಗೂರು: ಪಟ್ಟಣ ಹಾಗೂ ಗ್ರಾಮೀಣಭಾಗದ ಜನರಲ್ಲಿ ಅಕ್ಷರದ ಹಸಿವು ನೀಗಿಸುವ ಗ್ರಂಥಾಲಯಗಳಿಗೆ ಸ್ಥಳೀಯ ಸಂಸ್ಥೆಗಳು ಸೆಸ್‌ ನೀಡದ್ದರಿಂದ ಗ್ರಂಥಾಲಯಗಳು ಮೂಲ ಸೌಕರ್ಯ ಮತ್ತು ಅಭಿವೃದ್ಧಿಯಿಂದ ವಂಚಿತವಾಗಿವೆ.

Advertisement

ತಾಲೂಕಿನ 38 ಗ್ರಾಮ ಪಂಚಾಯಿತಿಗಳು, ಎರಡು ಪುರಸಭೆ, ಪಟ್ಟಣ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಗ್ರಂಥಾಲಯ ಗಳಿಗೆ ಸೆಸ್‌ ರೂಪದಲ್ಲಿ ಅಭಿವೃದ್ಧಿಗೆ ಹಣ ಪಾವತಿಸಬೇಕು. ಆದರೆ ಸ್ಥಳೀಯ ಸಂಸ್ಥೆಗಳು ಹಣ ನೀಡದೇ ತಮ್ಮ ಬೇಜವಾಬ್ದಾರಿ ಪ್ರರ್ದಶನ ಮಾಡುತ್ತಿರುವುದರಿಂದ ಗ್ರಂಥಾಲಯಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.

ತಾಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಗ್ರಂಥಾಲಯ, ಲಿಂಗಸುಗೂರು, ಹಟ್ಟಿ ಮತ್ತು ಮುದಗಲ್‌ನಲ್ಲಿ ಗ್ರಂಥಾಲಯ ಗಳಿವೆ. ಇದಲ್ಲದೆ ಅಲೆಮಾರಿ ಗ್ರಂಥಾಲಯ ಗಳಿವೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿ ಕುಟುಂಬ ಸ್ಥಳೀಯ ಸಂಸ್ಥೆಗೆ ಪಾವತಿಸುವ ತೆರಿಗೆಯಲ್ಲಿ ಶೇ.6ರಷ್ಟು ಗ್ರಂಥಾಲಯ ಕರ ಸಂಗ್ರಹ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಕಡ್ಡಾಯವಾಗಿ ಕರ ವಸೂಲಿ ಮಾಡುವ ಸ್ಥಳೀಯ ಸಂಸ್ಥೆಗಳು ಈ ಹಣವನ್ನು ಆಯಾ ಭಾಗದ ಗ್ರಂಥಾಲಯಗಳಿಗೆ ಪಾವತಿಸುವಲ್ಲಿ ನಿರ್ಲಕ್ಷ್ಯ ತಾಳಿವೆ. ಹೀಗಾಗಿ ಗ್ರಂಥಾಲಯಗಳು ನಿರ್ವಹಣೆಗೆ ಹಣವಿಲ್ಲದೇಪರದಾಡುವಂತಾಗಿದೆ.

ಸೆಸ್‌ ಬಾಕಿ: ಲಿಂಗಸುಗೂರು ಪುರಸಭೆ 10 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರೆ, ಮುದಗಲ್ಲ ಪುರಸಭೆ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿ ಲಕ್ಷಾಂತರ ರೂ.ಗಳ ಸೆಸ್‌ನ್ನು ಗ್ರಂಥಾಲಯಗಳಿಗೆ ಪಾವತಿಸಬೇಕಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಗ್ರಂಥಾಲಯಗಳಿಗೆ ಪ್ರಾರಂಭದಿಂದ ಈವರೆಗೂ ಗ್ರಂಥಾಲಯಗಳಿಗೆ ಒಂದು ರೂ. ಕೂಡಾ ನೀಡಿಲ್ಲ ಇದು ಪಿಡಿಒಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮ ಪಂಚಾಯಿತಿಗಳು ಸುಮಾರು 1 ಕೋಟಿ ರೂ.ವರೆಗೆ ಗ್ರಂಥಾಲಯ ಸೆಸ್‌ ಪಾವತಿಸಬೇಕಿದೆ.ಆದರೆ ಇದನ್ನು ನೀಡಲು ಯಾವ ಗ್ರಾಮ ಪಂಚಾಯಿತಿಯವರೂ ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ.

ಅನ್ಯ ಕೆಲಸಕ್ಕೆ ಬಳಕೆ: ಸಾರ್ವಜನಿಕರಿಂದ ಶೇ. ಗ್ರಂಥಾಲಯ ಕರ ಸಂಗ್ರಹಿಸುವ ಸ್ಥಳೀಯ ಸಂಸ್ಥೆಗಳು ಇದನ್ನು ಗ್ರಂಥಾಲಯಗಳಿಗೆ ಹಸ್ತಾಂತರಿಸುತ್ತಿಲ್ಲ. ಈ ಕರವನ್ನು ಸ್ಥಳೀಯ ಸಂಸ್ಥೆಗಳು ಬೇರೆ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಗ್ರಂಥಾಲಯ ಕರವನ್ನು ಅನ್ಯ ಕೆಲಸಕ್ಕೆ ಬಳಸಬಾರದು ಎಂಬ ಸ್ಪಷ್ಟ ನಿಯಮವಿದ್ದರೂ, ಇದನ್ನು ಸ್ಥಳೀಯ ಸಂಸ್ಥೆಗಳು ಪಾಲಿಸುತ್ತಿಲ್ಲ. ಬೇರೆ ಕೆಲಸಗಳಿಗೆ ಬಳಕೆ ಮಾಡುತ್ತಿವೆ. ಹೀಗಾಗಿ ಗ್ರಾಮೀಣ ಗ್ರಂಥಾಲಯಗಳಲ್ಲಿ ಹೊಸ ಪುಸಕ್ತಗಳ ಖರೀದಿ ಇಲ್ಲದೇ ಗ್ರಾಮೀಣ ವಿದ್ಯಾರ್ಥಿಗಳು, ಓದುಗರು ಪರದಾಡುವಂತಾಗಿದೆ.

Advertisement

ಹೆಣಗಾಟ: ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ನೌಕರರ ವೇತನ ಹೊರತುಪಡಿಸಿ ಇನ್ನಾವುದೇ ಅನುದಾನ ಬರುತ್ತಿಲ್ಲ. ಇತ್ತ ಸ್ಥಳೀಯ ಸಂಸ್ಥೆಗಳು ಸೆಸ್‌ ನೀಡುತ್ತಿಲ್ಲ ಇದರಿಂದ ಸ್ಥಳೀಯ ಸಂಸ್ಥೆಗಳ ಹಣದ ಮೇಲೆ ಅವಲಂಬಿತವಾಗಿರುವ ಗ್ರಂಥಾಲಯಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪೀಠೊಪಕರಣ, ಹೊಸ ಪುಸ್ತಕಗಳ ಕೊರತೆ,

ವಿದ್ಯುತ್‌ ಬಿಲ್‌, ದಿನಪತ್ರಿಕೆಗಳ ಬಿಲ್‌, ಕುಡಿಯುವ ನೀರು, ಪರಿಚಾರಕರ ವೇತನ ನೀಡುವುದಕ್ಕೆ ಹೆಣಗಾಡುವಂತಾಗಿದೆ. ಸೆಸ್‌ ನೀಡುವಂತೆ ಪುರಸಭೆ ಹಾಗೂ ಗ್ರಾಪಂ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಇನ್ನು ವೇತನ ನೀಡದೇ ಇರುವದರಿಂದ ಕೆಲವು ಗ್ರಂಥಾಲಯಗಳಲ್ಲಿ ದಿನಗೂಲಿ ಆಧಾರದ ಮೇಲೆ ನೇಮಕವಾಗಿದ್ದ ಪರಿಚಾರಕರು ಕೆಲಸ ಬಿಟ್ಟು ಹೋಗಿದ್ದಾರೆ. ಇದರಿಂದ ಗ್ರಂಥಪಾಲಕರೇ ಎಲ್ಲ ಕೆಲಸವನ್ನು ಮಾಡಬೇಕಾಗಿದೆ.

 

-ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next