Advertisement

ಗ್ರಂಥಾಲಯಕ್ಕೆ ಬೇಕಿದೆ ಸ್ಪರ್ಧಾತ್ಮಕ ಹೊತ್ತಿಗೆ

01:16 PM Oct 18, 2019 | Suhan S |

ಕೊಪ್ಪಳ: ಸಾರ್ವಜನಿಕರಿಗೆ ಜ್ಞಾನದ ಬೆಳಕು ನೀಡುತ್ತಿರುವ ಗ್ರಂಥಾಲಯಗಳೇ ಇಂದು ನೂರೆಂಟು ಸಮಸ್ಯೆ ಎದುರಿಸುತ್ತಿವೆ. ಆಧುನಿಕತೆಗೆ ತಕ್ಕಂತೆ ಸರ್ಕಾರಗಳು ಗ್ರಂಥಾಲಯಗಳಿಗೆ ಹೈಟೆಕ್‌ ಟಚ್‌ ನೀಡಿ ಉನ್ನತೀರಕಿಸಬೇಕಿದೆ. ಇದಕ್ಕೆ ಕೊಪ್ಪಳದ ಜಿಲ್ಲಾ ಗ್ರಂಥಾಲಯವು ಎದುರು ನೋಡುತ್ತಿದೆ. ಸ್ಪರ್ಧಾತ್ಮ ಪರೀಕ್ಷೆಗೆ ತಕ್ಕಂತೆ ಪುಸ್ತಕಗಳ ಬೇಡಿಕೆಯೂ ಹೆಚ್ಚಿದೆ.

Advertisement

ಹೌದು. ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟು ಕೊಪ್ಪಳ ಜಿಲ್ಲೆಯಾಗಿ ಎರಡು ದಶಕ ಕಳೆದಿದೆ. ಆಗಲೇ ಜಿಲ್ಲಾ ಕೇಂದ್ರದಲ್ಲಿ ಗ್ರಂಥಾಲಯ ಆರಂಭವಾಗಿದೆ. ಆಗ ಗ್ರಂಥಾಲಯಕ್ಕೆ ಇದ್ದ ಓದುಗರ ಸಂಖ್ಯೆಗಿಂತ ಈಗಿನ ಓದುಗರ ಸಂಖ್ಯೆಯಲ್ಲಿ ಅಧಿ ಕವಾಗಿವಾಗಿದೆ. ಆದರೆ ಸರ್ಕಾರಗಳು ಜ್ಞಾನದ ಕೇಂದ್ರಗಳನ್ನು ಉನ್ನತೀಕರಿಸುವ ಗೋಜಿಗೆ ಹೋಗುತ್ತಿಲ್ಲ. ಜಿಲ್ಲಾ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿದ್ದು, 70-80 ಆಸನ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಗ್ರಂಥಾಲಯಕ್ಕೆ 800ರಿಂದ 1000 ಓದುಗರು ಆಗಮಿಸುತ್ತಿದ್ದು,

ಇರುವ ಕಟ್ಟಡ ಯಾವುದಕ್ಕೂ ಸಾಲುತ್ತಿಲ್ಲ. ಕೆಲವರು ಆಸನದಲ್ಲಿ ಕುಳಿತು ಓದುತ್ತಿದ್ದರೆ, ಹಲವರು ನಿಂತುಕೊಂಡೇ ಓದುವ ಸ್ಥಿತಿ ಜಿಲ್ಲಾ ಕೇಂದ್ರದಲ್ಲಿದೆ. ಗ್ರಂಥಾಲಯ ಒಂದೇ ಅಂತಸ್ಥಿನ ಮಹಡಿಯಾಗಿದ್ದು, ಮೇಲಂತಸ್ಥಿನ ಕೊಠಡಿಗಳನ್ನು ನಿರ್ಮಿಸಿದರೆ ಓದುಗರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಮಹಿಳಾ ವಿಭಾಗ, ವಿವಿಧ ಪುಸ್ತಕಗಳ ವಿಭಾಗ ಆರಂಭಿಸುವ ಜೊತೆಗೆ ಜನರಿಗೆ ಕುಳಿತು ಓದಲು ವ್ಯವಸ್ಥೆ ಮಾಡಬೇಕಿದೆ.

ಸ್ಪರ್ಧಾತ್ಮಕ ಪುಸ್ತಕಗಳಿಗೆ ಬೇಡಿಕೆ: ಐದು ವರ್ಷದ ಹಿಂದೆ ಸಾಹಿತ್ಯಾಸಕ್ತ, ಕಾದಂಬರಿ ಸೇರಿದಂತೆ ವಿವಿಧ ಗ್ರಂಥಗಳನ್ನು ಓದಲು ಹೆಚ್ಚು ಜನ ಆಗಮಿಸುತ್ತಿದ್ದರು. ಪ್ರಸ್ತುತ ಹಿರಿಯರಿಗಿಂತ ಯುವಕರು ಹೆಚ್ಚು ಆಗಮಿಸುತ್ತಿದ್ದಾರೆ. ಗ್ರಂಥಾಲಯಕ್ಕೆ ಕಾದರಂಬರಿ ಆಧಾರಿತ ಪುಸ್ತಕ ಹೆಚ್ಚು ಪೂರೈಕೆ ಮಾಡಲಾಗುತ್ತಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಂಥಾಲಯಕ್ಕೆ ಆಗಮಿಸುತ್ತಿದ್ದಾರೆ. ಅವರ ಆಸಕ್ತಿಗೆ ತಕ್ಕಂತೆ ಸ್ಪರ್ಧಾತ್ಮಕ ಪುಸ್ತಕಗಳ ಪೂರೈಸಬೇಕಿದೆ. ಆದರೆ ಪುಸ್ತಕಗಳ ಆಯ್ಕೆ ಸಮಿತಿ ರಾಜ್ಯ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆಸಲಿದ್ದು, ಆಯ್ದ ಪುಸ್ತಕ ಆಯ್ಕೆ ಮಾಡಿ ನೇರ ಗ್ರಂಥಾಲಯಕ್ಕೆ ಪೂರೈಸುತ್ತಿದೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ಯಾವುದೇ ಆಯ್ಕೆ ಇರುವುದಿಲ್ಲ. ರಾಜ್ಯ ಮಟ್ಟದಿಂದ ಬಂದ ಪುಸ್ತಕಗಳನ್ನು ಓದುಗರಿಗೆ ಪೂರೈಸಬೇಕಿದೆ. ಸರ್ಕಾರ ಇಂತಹ ಸೂಕ್ಷ್ಮ ವಿಚಾರ ಅರಿತು ಕೇಂದ್ರಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳ ಪೂರೈಕೆ ಮಾಡಬೇಕಿದೆ. ಅಲ್ಲದೇ, ಹಳೇಯ ಗ್ರಂಥಾಲಯಕ್ಕೆ ಇ-ಗ್ರಂಥಾಲಯದ ವ್ಯವಸ್ಥೆ ಜಾರಿ ಮಾಡಬೇಕಿದೆ.

ಜಿಲ್ಲಾ ಕೇಂದ್ರಕ್ಕೊಂದೇ ಗ್ರಂಥಾಲಯ: ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕೊಪ್ಪಳದಲ್ಲಿ ಕೇವಲ ಒಂದೇ ಗ್ರಂಥಾಲಯವಿದೆ. ಸ್ಥಳೀಯರು ಮಾತ್ರ ನಗರ ಪ್ರದೇಶಕ್ಕೆ ಪ್ರತ್ಯೇಕ ಗ್ರಂಥಾಲಯ ಆರಂಭಿಸಬೇಕು. ಅಲ್ಲದೇ ಜಿಲ್ಲಾ ಕೇಂದ್ರದ ವಿವಿಧ ಭಾಗಗಳಲ್ಲಿ ಶಾಖೆ ಆರಂಭಿಸಿ ಹಿರಿಯರಿಗೆ, ಯುವಕರಿಗೆ, ಮಹಿಳೆಯರಿಗೆ ಅನುವು ಮಾಡಿಕೊಡಬೇಕೆಂಬ ಒತ್ತಾಯ ಕೇಳಿ ಬಂದಿವೆ. ಶಾಖೆಗಳು ಆರಂಭವಾದರೆ ಹಿರಿಯರು ದೂರದ ಗ್ರಂಥಾಲಯಕ್ಕೆ ಬಂದು ಹೋಗುವ ಪ್ರಮೆಯ ತಪ್ಪಲಿದೆ.

Advertisement

ಖಾಲಿ ಜಾಗಕ್ಕಾಗಿ ನಡೆದಿದೆ ಹೋರಾಟ: ನಗರದ ಸಾಹಿತ್ಯ ಭವನದ ಪಕ್ಕದಲ್ಲೇ ಗ್ರಂಥಾಲಯ ಇತ್ತು. ಅದು ನಗರಸಭೆ ಮಳಿಗೆಗಳ ಮಧ್ಯೆ ಮರೆಯಾಗಿತ್ತು. ಪ್ರಸ್ತುತ ನಗರಸಭೆ ತನ್ನ ಹಳೆಯ ಮಳಿಗೆಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಆದರೆ ಸಾರ್ವಜನಿಕರು ಗ್ರಂಥಾಲಯದ ಮುಂಭಾಗದಲ್ಲಿ ಖಾಲಿ ಜಾಗವನ್ನು ಗ್ರಂಥಾಲಯಕ್ಕೆ ಮೀಸಲಿಟ್ಟರೆ ಭವಿಷ್ಯದ ದೃಷ್ಟಿಯಲ್ಲಿ ಅನುಕೂಲವಾಗಲಿದೆ. ಪುನಃ ಇಲ್ಲಿ ಕಟ್ಟಡ ಕಟ್ಟಿ ಗ್ರಂಥಾಲಯದ ವಾತಾವರಣ ಹಾಳು ಮಾಡುವುದು ಸರಿಯಲ್ಲ ಎನ್ನುವ ಭಾವನೆ ವ್ಯಕ್ತವಾಗಿದೆ. ಈ ಕುರಿತಂತೆ ಸಾಹಿತಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಗ್ರಂಥಾಲಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ, ಜನಪ್ರತಿನಿ ಧಿಗಳು ಈ ಬಗ್ಗೆ ಕಾಳಜಿ ವಹಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ. ಜೊತೆಗೆ ಯುವ ಪೀಳಿಗೆಗೆ ತಕ್ಕಂತೆ ವಿವಿಧ ಪುಸ್ತಕಗಳನ್ನು ಪೂರೈಸುವ ಕೆಲಸ ಮಾಡಬೇಕಿದೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next