Advertisement
ಮಕ್ಕಳ ಸ್ನೇಹಿ ಗ್ರಂಥಾಲಯ ಅಥವಾ ಓದುವ ಮೂಲೆ (ರೀಡಿಂಗ್ ಕಾರ್ನರ್) ಸ್ಥಾಪಿಸಲು ಒಂದು ಸ್ಥಳವನ್ನು ನಿಗದಿ ಪಡಿಸಬೇಕು. ಗ್ರಂಥಾಲಯದ ಅವಧಿ ಅಥವಾ ಯಾವುದೇ ಸಮಯದಲ್ಲಾಗಲಿ ಯಾವುದೇ ಅಡಚಣೆ ಇಲ್ಲದೆ ಸ್ವತಂತ್ರವಾಗಿ ಈ ಸ್ಥಳವನ್ನು ಮಕ್ಕಳು ಬಳಸುವಂತಿರಬೇಕು. ಇಲ್ಲಿ ಪುಸ್ತಕಗಳನ್ನು/ಓದುವ ಸಾಮಗ್ರಿಗಳನ್ನು ಕಪಾಟುಗಳಲ್ಲಿ ಮುಚ್ಚಿಡುವುದು ಅಥವಾ ಕೀಲಿ ಹಾಕಿಡುವುದು ಮಾಡಬಾರದು, ಪುಸ್ತಕಗಳನ್ನು ಮಕ್ಕಳ ಕೈಗೆಟಕುವಂತೆ ಇಡಬೇಕೆಂದು ಸರಕಾರ ಸೂಚಿಸಿದೆ.
ಪ್ರತೀ ತರಗತಿಗೆ ಕನಿಷ್ಠ ಪಕ್ಷ ವಾರಕ್ಕೊಂದು ಗ್ರಂಥಾಲಯದ ಅವಧಿ ಯನ್ನು ನಿಗದಿ ಪಡಿಸಬೇಕು. 1ರಿಂದ 3ನೇ ತರಗತಿ ಮಕ್ಕಳಿಗೆ ಶುಕ್ರವಾರ ಸಂಜೆ 3.10ರಿಂದ 3.40ರ ವರೆಗೆ, 4ನೇ ತರಗತಿಗೆ ಸೋಮವಾರ ಸಂಜೆ 3.50ರಿಂದ 4.30, 5ನೇ ತರಗತಿಗೆ ಸಂಜೆ 3.50ರಿಂದ 4.30ರ ವರೆಗೆ, 6ರಿಂದ 8ನೇ ತರಗತಿ ವರೆಗೆ ಗುರುವಾರ ಸಂಜೆ 3.50ರಿಂದ 4.30ರ ವರೆಗೆ ಮತ್ತು 9ರಿಂದ 10ನೇ ತರಗತಿ ಮಕ್ಕಳಿಗೆ ಮಂಗಳವಾರ 3.50ರಿಂದ 4.30ರ ವರೆಗೆ ಗ್ರಂಥಾಲಯ ಅವಧಿಯನ್ನು ನಿಗದಿ ಪಡಿಸಲಾಗಿದೆ.