Advertisement

ಇದ್ದೂ ಇಲ್ಲದಂತಾದ ಗ್ರಂಥಾಲಯ

05:43 PM Nov 15, 2019 | Team Udayavani |

ರೋಣ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಂತ ಕಟ್ಟಡದಲ್ಲಿ 40 ವರ್ಷಗಳಿಂದ ನಡೆಯುತ್ತಿರುವ ಗ್ರಂಥಾಲಯಕ್ಕೆ ಗ್ರಂಥಾಲಯ ಸಹಾಯಕರಿಲ್ಲದೆ ಓದುಗರಿಗೆ ಸಕಾಲಕ್ಕೆ ದೊರೆಯದೆ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರಿಗೆ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ.

Advertisement

ಪುಸ್ತಕಗಳ ಭಂಡಾರವಿದೆ: ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಹೊಸದಾಗಿ ಸಾವಿರಾರು ಪುಸ್ತಕಗಳು ಬಂದಿವೆ. ಅವುಗಳನ್ನು ದಾಖಲಿಸಿಕೊಂಡು ಓದುಗರಿಗೆ ಕೊಡಬೇಕಾದ ಗ್ರಂಥಾಲಯ ಸಹಾಯಕರಿಲ್ಲದೆ, ಸರ್ಕಾರದಿಂದ ಬಂದಿರುವ ಪುಸ್ತಕಗಳು ಅನಾಥವಾಗಿವೆ. ಇತ್ತ ಓದುಗರಿಗೆ ತಮಗೆ ಓದಬೇಕೆನಿಸುವ ಪುಸ್ತಕಗಳನ್ನು ಕೊಂಡೊಯ್ಯಲ್ಲ ಸಾಧ್ಯವಾಗದೆ ನಿರಾಸೆಯಿಂದ ಮನೆಗೆ ಹಿಂದಿರುಗುತ್ತಿದ್ದಾರೆ.

2002ರಲ್ಲೇ ಸ್ವಂತ ಕಟ್ಟಡ: ನಗರ ಗ್ರಂಥಾಲಯಕ್ಕೆ 2002ರಲ್ಲಿ ಅಂದಿನ ಶಾಸಕ ಜಿ.ಎಸ್‌.ಪಾಟೀಲ ಹಾಗೂ ಸಂಸದ ಆರ್‌.ಎಸ್‌.ಪಾಟೀಲರ ಅನುದಾನದಲ್ಲಿ ಒಂದು ಮಹಡಿ ಹೊಂದಿರುವ ಸುವ್ಯಸ್ಥಿತ ಕಟ್ಟಡವನ್ನು ಭೂ ಸೇನಾ ನಿಗಮದಿಂದ ನಿರ್ಮಿಸಲಾಗಿದೆ. ಸುಂದರ ವಾತಾವರಣ, ಶಾಂತ ಪ್ರದೇಶ, ಉತ್ತಮ ಗಾಳಿ, ಬೆಳಕು, ಆಸನಗಳ ವ್ಯವಸ್ಥೆ ಇದ್ದರೂ ಸೂಕ್ತ ನಿರ್ವಹಣೆಯಿಲ್ಲದೇ ಗ್ರಂಥಾಲಯ ನರಳುತ್ತಿದೆ. ಬೆಳಗ್ಗೆ 8 ಗಂಟೆಗೆ ಗ್ರಂಥಾಲಯ ಆರಂಭಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಓದುಗರನ್ನು ಹೊಂದಿರುವ ಗ್ರಂಥಾಲಯಕ್ಕೆ ಒಬ್ಬ ಕಾಯಂ ಗ್ರಂಥಪಾಲಕ ಇಲ್ಲದೆ ಇರುವುದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಹಳೆ ಸದಸ್ಯರಿಗೆ ಪುಸ್ತಕ: ಈ ಹಿಂದೆ ಹಣ ಪಾವತಿಸಿ ಸದಸ್ಯರಾಗಿರುವ ಓದುಗರಿಗೆ ಮಾತ್ರ ಪುಸ್ತಕಗಳು ದೊರೆಯುತ್ತಿವೆ. ಗ್ರಂಥಪಾಲಕರು ಇಲ್ಲದೆ ಇರುವುದರಿಂದ ಹೊಸದಾಗಿ ಸದಸ್ಯತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಳೆ ಸದಸ್ಯರಿಗೆ ಇಲ್ಲಿರುವ ಸಿಪಾಯಿ ಸೀತವ್ವನೇ ಪುಸ್ತಕ ಕೊಡುತ್ತಾರೆ. ಹೊಸದಾಗಿ ಇಲ್ಲಿನ ಪುಸ್ತಕ ಪಡೆದು ಓದಬೇಕು ಎನ್ನುವ ಓದುಗರಿಗೆ ಪುಸ್ತಕಗಳ ಭಾಗ್ಯವಿಲ್ಲದಂತಾಗಿದೆ.

ಮುಳಗುಂದ ಗ್ರಂಥಾಲಯದ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರೋಣ ಗ್ರಂಥಾಲಯದ ಜವಾಬ್ದಾರಿ ಇನ್ನು ವಹಿಸಿಕೊಂಡಿಲ್ಲ. ಆದ್ದರಿಂದ ಅಲ್ಲಿರುವ ಪುಸ್ತಕಗಳ ಮಾಹಿತಿ ಸಮಗ್ರವಾಗಿ ತಿಳಿದುಕೊಂಡಿಲ್ಲ. ಜವಾಬ್ದಾರಿ ವಹಿಸಿಕೊಂಡು ಅಲ್ಲಿರುವ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸುತ್ತೇನೆ. ಎಚ್‌.ಆರ್‌.ಬಿಳಿಕೇರಿ, ಪ್ರಭಾರಿ ಗ್ರಂಥಾಲಯ ಸಹಾಯಕರು.

Advertisement

 

-ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next