Advertisement

ಬಿಜೆಪಿ ಕಚೇರಿಗಳಲ್ಲಿ ಲೈಬ್ರರಿ

09:08 AM Jun 22, 2019 | sudhir |

ಹೊಸದಿಲ್ಲಿ:ಭಾರತೀಯ ಜನತಾ ಪಕ್ಷಕ್ಕೆ ಸೈದ್ಧಾಂತಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್‌ ಶಾ ಮಹತ್ವದ ಯೋಜನೆ ಯೊಂದಕ್ಕೆ ಕೈಹಾಕಿದ್ದಾರೆ. ಪಕ್ಷದ ಪ್ರತಿ ಜಿಲ್ಲಾ ಕಚೇರಿಯಲ್ಲೂ ಲೈಬ್ರರಿ ಹಾಗೂ ದಾಖಲೆ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಇತಿಹಾಸದ ಜ್ಞಾನವನ್ನು ದೊರಕಿಸಲು ಇದು ಅತ್ಯಂತ ಮಹತ್ವದ ಕ್ರಮ ಎನ್ನಲಾಗಿದೆ.

Advertisement

ಬಿಜೆಪಿ ಕಚೇರಿ ಉದ್ಘಾಟಿಸಿದಾಗಲೇ ಲೈಬ್ರರಿಗಾಗಿ ಒಂದು ಮಳಿಗೆ ಮೀಸಲಿ ಡುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈ ಲೈಬ್ರರಿಯಲ್ಲಿ ಕೋಮುವಾದ, ಭಾರತೀಯ ಕಾಂಗ್ರೆಸ್‌ನ ಇತಿಹಾಸ, ಹಿಂದುತ್ವ ಹಾಗೂ ರಾಮ ಜನ್ಮಭೂಮಿ ವಿಭಾಗಗಳೂ ಇವೆ. ಬಿಜೆಪಿಯ ಈವರೆಗಿನ ಪ್ರಣಾಳಿಕೆಗಳು, ನಿಲುವಳಿಗಳನ್ನೂ ಇಲ್ಲಿ ದಾಖಲಿಸಲಾಗಿದೆ. ಹಲವು ಪುಸ್ತಕಗಳನ್ನು ಶಾ ಸ್ವಯಂ ಆಸ್ಥೆಯಿಂದ ಆಯ್ಕೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಯ ಡಿಜಿಟಲ್ ಲೈಬ್ರರಿ ಉದ್ಘಾಟನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next