Advertisement
ಪ್ರಸಕ್ತ ಬೆಳ್ತಂಗಡಿ ನಗರದಲ್ಲಿರುವ ಸುಮಾರು 50 ವರ್ಷ ಹಳೆಯ ಕಟ್ಟಡ ದಲ್ಲಿ ಬಿರುಕುಬಿಟ್ಟ ಛಾವಣಿಯಲ್ಲೇ ಗ್ರಂಥಾಲಯ ಕಾರ್ಯಾಚರಿಸುತ್ತಿದೆ. ಸುಮಾರು 40 ಸಾವಿರಕ್ಕೂ ಅಧಿಕ ಪುಸ್ತಗಳ ಸಂರಕ್ಷಣೆ ಸವಾಲಾಗಿದೆ. ಇದೆಲ್ಲವನ್ನು ಮನಗಂಡು ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ 1 ಕೋ.ರೂ. ವಿಶೇಷ ಅನುದಾನದಡಿ ಕುತ್ಯಾರು ಸಮೀಪ ಸರಕಾರಿ ಪ.ಪೂ. ಕಾಲೇಜು ಸಮೀಪ 17 ಸೆಂಟ್ಸ್ ಸ್ಥಳವಕಾಶದಲ್ಲಿ ಎರಡು ಅಂತಸ್ತಿನ ಆಧುನಿಕ ಶೈಲಿಯ ಗ್ರಂಥಾಲಯ ರಚನೆಗೆ ನೀಲನಕಾಶೆ ಸಿದ್ಧಗೊಂಡಿದೆ.
ಒಟ್ಟು 9,000 ಚದರಡಿ ಸ್ಥಳದಲ್ಲಿ 3,988 ಚದರಡಿ ಕಟ್ಟಡದ ವಿನ್ಯಾಸವಿರಲಿದೆ. 2,025 ಚದರಡಿ ಕೆಳ ಅಂತಸ್ತು, 1,963 ಚದರಡಿ ಮೊದಲ ಅಂತಸ್ತು ಇರಲಿದೆ. ಕೆಳ ಅಂತಸ್ತಿನಲ್ಲಿ ಪುರುಷ, ಮಹಿಳೆ ಸಹಿತ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಗಾರ್ಡನಿಂಗ್, ಮಧ್ಯ ಓದಲು ಅನುಕೂಲವುಳ್ಳ ತ್ರಿಕೋನ ಆಕೃತಿಯ ಮಧ್ಯ ವೃತ್ತಾಕಾರದ ರಚನೆಯಲ್ಲಿ ಗಾಳಿಬೆಳಕು ಸದಾಕಾಲ ಇರುವಂತೆ ವಿನ್ಯಾಸ ರಚಿಸಲಾಗಿದೆ. ಗ್ರಂಥಾಲಯದಲ್ಲಿ ಗಾಳಿ-ಬೆಳಕು ಸಮ ರ್ಪಕವಾಗಿರಬೇಕು, ಪ್ರಶಾಂತ ವಾತಾ ವರಣದಿಂದ ಕೂಡಿರಬೇಕು. ಇದಕ್ಕಾಗಿ ಪೇಟೆಯ ಸಮೀಪ, ಓದುಗರಿಗೆ ಅನು ಕೂಲಕರ ವಾತಾವರಣದಲ್ಲಿ ಗ್ರಂಥಾ ಲಯ ನಿರ್ಮಿ ಸುವ ಉದ್ದೇಶವಿದೆ. ಹೀಗಾಗಿ ವಾಕಿಂಗ್ ಪ್ರಿಯರಿಗೆ ಅನು ಕೂಲ ವಾಗುವಂತೆ ಗ್ರಂಥಾಲಯ ಸುತ್ತ ವಾಕಿಂಗ್ ಟ್ರಾÂಕ್, 8ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಸಣ್ಣ ಪ್ಲೇ ಗ್ರೌಂಡ್ ಹೊಂದಲಿದೆ. ಇದನ್ನೂ ಓದಿ : ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರಂತೆ ಬಿಎಸ್ ಯಡಿಯೂರಪ್ಪ!
Related Articles
ನೂತನ ಗ್ರಂಥಾಲಯದಲ್ಲಿ 1 ಲಕ್ಷ ಪುಸ್ತಕ ಹೊಂದಿಸುವಂತಹ ವಿನ್ಯಾಸ ಮಾಡ ಲಾಗು ತ್ತದೆ. ಒಂದು ವೇಳೆ ಪುಸ್ತಕಗಳು ಇಲ್ಲದಿದ್ದಲ್ಲಿ ಆನ್‌ಲೈನ್‌ನಲ್ಲಿ ಪಡೆಯುವಂತೆ 25 ಕಂಪ್ಯೂಟರ್‌ಗಳಿರುವ ಡಿಜಿಟಲ್ ಗ್ರಂಥಾ ಲಯ ಸ್ಥಾಪನೆಗಾಗಿಯೂ ಯೋಜನೆ ರೂಪಿಸಲಾಗಿದೆ. ದಿನಪತ್ರಿಕೆ, ವಾರಪತ್ರಿಕೆ ಓದುಗರಿಗಾಗಿ ಕೆಳ ಅಂತಸ್ತಿನಲ್ಲಿ 100 ಆಸನ ವ್ಯವಸ್ಥೆ ಸೇರಿ 2 ಅಂತಸ್ತಿನಲ್ಲಿ 350 ಮಂದಿ ಕುಳಿತುಕೊಳ್ಳುವ, 25 ವರ್ಷಗಳ ದೂರದೃಷ್ಟಿಯುಳ್ಳ ನವೀನ ವಿನ್ಯಾಸದಡಿ ಗ್ರಂಥಾಲಯ ಬಳಕೆಗೆ ಯೋಗ್ಯವಾಗಲಿದೆ.
Advertisement
ಏಕರೂಪದ ಬೆಳಕಿನ ವ್ಯವಸ್ಥೆವಿದ್ಯುತ್ ಇಲ್ಲದಿದ್ದರೂ ಒಂದೇ ರೀತಿ ಎಲ್ಲೆಡೆ ಬೆಳಕು ಬೀಳುವಂತೆ ಮಣ್ಣಿನ ಇಟ್ಟಿಗೆಗಳಿಂದ ಎರಡನೇ ಅಂತಸ್ತಿನ ಗೋಡೆ ರಚನೆಯಾಗಲಿದೆ. ಮೇಲ್ಭಾಗದಲ್ಲಿ ಗ್ಲಾಸ್ ಮಾದರಿ ಮುಚ್ಚಳಿಕೆ ಇರಲಿದ್ದು (uniform intensity of light) ಎಲ್ಲೆಡೆ ಏಕರೂಪದ ಬೆಳಕು ಹರಡುವಂತೆ ವಿನ್ಯಾಸವಿರಲಿದೆ. ಹೊರಬದಿ ತ್ರಿಕೋನ ಆಕೃತಿಯುಳ್ಳ ಮೂರು ಪಾರ್ಶ್ವದಲ್ಲಿ ಗಾರ್ಡನ್ ವ್ಯವಸ್ಥೆ ಇರಲಿದೆ. ತಲಾ 4 ಆಸನದಂತೆ ಹೊರಭಾಗದಲ್ಲೂ ಕುಳಿತು ಓದುವ ವಾತಾವರಣ ಗ್ರಂಥಾಲಯದಲ್ಲಿದೆ. ಜಿಲ್ಲೆಯಲ್ಲೇ ವಿಶೇಷ ಗ್ರಂಥಾಲಯವೊಂದು ಪುಸ್ತಕ ಪ್ರಿಯರಿಗೆ ಲೋಕಾರ್ಪಣೆಗೊಳ್ಳಲಿದೆ. ಉತ್ತಮ ವಾತಾವರಣ
ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಅತ್ಯುತ್ತಮ ವಿನ್ಯಾಸವುಳ್ಳ ಗ್ರಂಥಾಲಯ ರಚನೆಯಾಗಲಿದೆ. 9,000 ಚದರಡಿಯಲ್ಲಿ 300 ಚದರಡಿ ಪ್ರಕೃತಿ ಮಡಿಲಲ್ಲಿ ಓದುವಂಥ ವಾತಾವರಣ ನಿರ್ಮಿಸಲಾಗುವುದು. 2 ವಾರಗಳ ಒಳಗಾಗಿ ಶಿಲಾನ್ಯಾಸ ಕಾಮಗಾರಿ ಹಮ್ಮಿಕೊಳ್ಳಲಾಗುವುದು.
-ಹರೀಶ್ ಪೂಂಜ, ಶಾಸಕರು