Advertisement

ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ!

02:49 PM Oct 29, 2019 | Suhan S |

ಕೂಡ್ಲಿಗಿ: 1968ರಲ್ಲಿ ಪ್ರಾರಂಭವಾದ ತಾಲೂಕು ಗ್ರಂಥಾಲಯ ಇಲ್ಲಿವರೆಗೂ ಸ್ವಂತ ಕಟ್ಟಡ ಹೊಂದಿಲ್ಲ. ಬಾಡಿಗೆಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು ಮೂಲಭೂತ ಸೌಕರ್ಯಗಳ ಕೊರತೆಯಿಂದ ದಿನೆದಿನೇ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ.

Advertisement

ಪ್ರವಾಸಿ ಮಂದಿರದ ಹತ್ತಿರವಿರುವ ಸಣ್ಣ ನೀರಾವರಿ ಇಲಾಖೆಯ ಪಕ್ಕದಲ್ಲಿಯೇ ಬಾಡಿಗೆ ಮನೆಯಲ್ಲಿ ಗ್ರಂಥಾಲಯವಿದ್ದು ಜನರಿಗೆಮಾಹಿತಿಯಿಲ್ಲ. ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಈಗಾಗಲೇ 2 ಬಾರಿ ಪತ್ರ ಬರೆದಿದ್ದರೂ ಇದೂವರೆಗೂ ಇಲ್ಲಿಯ ಗ್ರಂಥಾಲಯಕ್ಕೆ ಸ್ವಂತ ನಿವೇಶನ ನೀಡಿಲ್ಲ.

ಆದರೆ ಗ್ರಂಥಾಲಯಕ್ಕೆ ಬರಬೇಕಾದ ಶೇ. 6 ಸೆಸ್‌ ಹಣವನ್ನು ನೀಡುತ್ತಿದ್ದು ಇದರಿಂದ ಗ್ರಂಥಾಲಯದಲ್ಲಿ ಎಲ್ಲ ರೀತಿಯ ದಿನಪತ್ರಿಕೆಗಳು, ವಾರಪತ್ರಿಕೆಗಳು, ಪುಸ್ತಕಗಳು ಬರುತ್ತಿವೆ. ಆದರೆ ಪುಸ್ತಕಗಳನ್ನು, ಪತ್ರಿಕೆಗಳನ್ನು ಇಡಲು ರ್ಯಾಕ್‌ ವ್ಯವಸ್ಥೆ ಇಲ್ಲಿಲ್ಲ. ಜಾಗದ ಕೊರತೆಯಿಂದಾಗಿ ಎಲ್ಲ ಪುಸ್ತಕಗಳನ್ನು ಚೀಲಗಳಲ್ಲಿ ಕಟ್ಟಿಡಲಾಗುತ್ತಿದೆ.

ಗ್ರಂಥಾಲಯಕ್ಕೆ 825 ಸದಸ್ಯರಿದ್ದು 101 ರೂಪಾಯಿ ಕಟ್ಟಿ ಸದಸ್ಯತ್ವ ಪಡೆದಿಕೊಂಡಿದ್ದಾರೆ. ಸ್ಥಳಾವಕಾಶದ ಕೊರತೆಯಿಂದಾಗಿ ಹೆಚ್ಚಿನ ಓದುಗರ ಬರುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾದ ಪುಸ್ತಕಗಳ ಕೊರತೆಯಿದೆ. ಕನಿಷ್ಠ 3 ಸಿಬ್ಬಂದಿ ಅವಶ್ಯಕತೆಯಿದ್ದು ಒಬ್ಬ ಗ್ರಂಥಪಾಲಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಶೌಚಾಲಯ ವ್ಯವಸ್ಥೆಯಿಲ್ಲ.

ಗ್ರಂಥಾಲಯದಲ್ಲಿ 25 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು ಜಾಗದ ಕೊರತೆಯಿಂದ ರ್ಯಾಕ್‌ ವ್ಯವಸ್ಥೆಯಿಲ್ಲದೇ ಚೀಲದಲ್ಲಿ ಕಟ್ಟಿಡಲಾಗುತ್ತಿದೆ. ಪಟ್ಟಣದ ಮಧ್ಯಭಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾದರೆ ಗ್ರಂಥಾಲಯ ಅಭಿವೃದ್ಧಿಗೂ ಹಾಗೂ ಓದುಗರಿಗೂ ಹತ್ತಿರವಾಗುತ್ತದೆ. ಎಸ್‌. ಸುರೇಶ್‌, ಗ್ರಂಥಾಲಯ ಅಧಿಕಾರಿ

Advertisement

 

-ಕೆ.ನಾಗರಾಜ

Advertisement

Udayavani is now on Telegram. Click here to join our channel and stay updated with the latest news.

Next