Advertisement

ದೋಟಿಹಾಳ: ನಿಗಮದಿಂದ ಸ್ಥಾಪನೆ ಮಾಡಿದ ಗ್ರಂಥಾಲಯಗಳಿಗೆ ಅನುದಾನದ ಕೊರತೆ

08:36 PM Jul 24, 2022 | Team Udayavani |

ದೋಟಿಹಾಳ: ರಾಜ್ಯ ಸರ್ಕಾರ ಕರ್ನಾಟಕ ತಾಂಡಗಳ ಅಭಿವೃದ್ಧಿ ನಿಗಮದಿಂದ ಮಂಡಳಿಯ ಮೂಲಕ ಬಂಜಾರ ಸಮುದಾಯದ ಮಕ್ಕಳಿಗಾಗಿ ಶೈಕ್ಷಣಿಕ ಅಭಿವೃದ್ದಿಗಾಗಿ ಈ ಗ್ರಂಥಾಲಯವನ್ನು ಸ್ಥಾಪಿಸಲಾದ ತಾಲೂಕಿನ ಐದು ಗ್ರಂಥಾಲಯಗಳು ಇದು ಅನುದಾನ ಇಲ್ಲದೆ ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ.

Advertisement

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ತಾಲೂಕಿನ ಕೆ.ಬೋದೂರ, ಕಳಮಳ್ಳಿ, ತೋನಸಿಹಾಳ, ಮೇಣಸಗೇರಿ ಮತ್ತು ನಡವಲಕೊಪ್ಪ ತಾಂಡಗಳಲ್ಲಿ ಶಾಸಕರು ಮತ್ತು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ನಿರ್ದೇಶಕರು ಈ ಗ್ರಂಥಾಲಯಗಳನ್ನು ಉಧ್ಟಾಟಿಸಿ, ತಾಂಡಾದ ವಿದ್ಯಾವಂತ ಯುವಕರು ಈ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಬೇಕು. ಗ್ರಂಥಾಲಯಗಳಲ್ಲಿ ದಿನಪತ್ರಿಕೆ, ಕಾದಂಬರಿ, ಪುಸ್ತಕ, ಸ್ವರ್ಧಾತ್ಮಕ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಬೆಳಸಿಕೊಳ್ಳವ ಉದ್ದೇಶದಿಂದ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದಿಂದ ಬಂಜಾರ ಸಮುದಾಯದ ಮಕ್ಕಳಿಗಾಗಿ ಶೈಕ್ಷಣಿಕ ಅಭಿವೃದ್ದಿಗಾಗಿ ಈ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಸಮುದಾಯದ ಮಕ್ಕಳು ಇದರಿಂದ ಜ್ಞಾನ ಹೆಚ್ಚಿಸಿಕೊಳ್ಳು ಅನುಕೂಲವಾಗುತ್ತೀವೆ ಎಂದು ಹೇಳಿದರು. ಆದರೇ ಇಂದು ಈ ಗ್ರಂಥಾಲಯಗಳಿಗೆ ಅನುದಾನ ಇಲ್ಲದೆ ಸೊರಗುತ್ತಿವೆ.

ಆರಂಭ ದಿನಗಳಲ್ಲಿ ಇವುಗಳನ್ನು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು  ದಿನಪತ್ರಿಕೆ ಹಾಗೂ ವಾರಪತ್ರಿಕೆ ಬಿಲ್‌ನ ಅನುದಾನವನ್ನು ನೀಡಲಾಯಿತು. ನಂತರ ಸುಮಾರು 6-7 ತಿಂಗಳಿನಿಂದ ಅನುದಾನ ಬಿಡುಗಡೆ ಮಾಡಿಲ್ಲ, ಹೀಗಾಗಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಗ್ರಂಥಾಲಯದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗು ವೇತನ ನೀಡದೆ ಇರುವದರಿಂದ ಇಂದು ಇವುಗಳು ಮುಚ್ಚುವ ಸ್ಥಿತಿ ಬಂದಿವೆ. ಇದರ ಬಗ್ಗೆ ಕೂಡಲೇ ಜಿಲ್ಲಾ ಆಡಳಿತ ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸಮುದಾಯದ ಯುವಕರ ಕಳಕಳಿಯಾಗಿದೆ.

ತಾಂಡಗಳಲ್ಲಿ ಗ್ರಂಥಾಲಯ ಸ್ಥಾಪನೆಯಾದ ಮೇಲೆ ಶಾಲಾ ಮಕ್ಕಳು, ಯುವಕರು ಬೆಳಿಗ್ಗೆ ಮತ್ತು ಸಾಯಂಕಾಲ ಗ್ರಂಥಾಲಯಗಳಲ್ಲಿ ಕುಳಿತು ಪಾಠ ಅಭ್ಯಾಸ ಮಾಡುವುದು ಮತ್ತು ಗ್ರಂಥಾಲಯದಲ್ಲಿ ಇರುವ ದಿನಪತ್ರಿಕೆ, ಪುಸ್ತಕಗಳನ್ನು ಓದುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಆದರೆ ಈಗ ದಿನಪತ್ರಿಕೆ, ವಾರಪತ್ರಿಕೆಗೆ ಹಣ ನೀಡದ ಕಾರಣ ನಮ್ಮ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗುತ್ತಿದೆ ಎಂದು ತಾಂಡದ ವಿದ್ಯಾರ್ಥಿಗಳು ತಿಳಿಸಿದರು.

ತಾಲೂಕಿನ 5 ಗ್ರಂಥಾಲಯಗಳಿಗೆ ಆರಂಭದಲ್ಲಿ ದಿನಪತ್ರಿಕೆ, ವಾರಪತ್ರಿಕೆಯ ಬಿಲ್ ಮತ್ತು ಸಿಬ್ಬಂದಿಗಳ ವೇತನ ನೀಡಿದ್ದಾರೆ. ಆದರೆ ನಂತರ 6-7 ತಿಂಗಳಿನಿAದ ಯಾವುದೇ ಹಣ ನೀಡದೆ ಇರುವುದರಿಂದ ಪೇಪರ್ ಬಿಲ್ ಕಟ್ಟುವುದರ ಜೊತೆಗೆ ನಮ್ಮ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಕೆ.ಬೋದೂರ ತಾಂಡದ ಗ್ರಂಥಾಲಯ ಸಿಬ್ಬಂದಿ ಅಮರೇಶ್ ರಾಥೋಡ್ ಅವರು ಹೇಳಿದ್ದಾರೆ.

Advertisement

ತಾಲೂಕಿನ ಐದು ತಾಂಡಗಳ ಗ್ರಂಥಾಲಯಗಳ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಈಗಾಗಲೇ ಮೂರ್ನಾಲ್ಕು ಬಾರಿ ಗಮನಕ್ಕೆ ತರಲಾಗಿದೆ. ಅವರು ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿದಾರೆ.
– ಯಂಕಪ್ಪ ಚವ್ಹಾಣ. ಮಾಜಿ ತಾಪಂ ಸದಸ್ಯ.

ಕುಷ್ಟಗಿ ತಾಲೂಕಿನಲ್ಲಿ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದಿಂದ ಸ್ಥಾಪನೆ ಮಾಡಿದ ಐದು ಗ್ರಂಥಾಲಯಕ್ಕೆ ಹಣ ನೀಡಲಾಗಿದೆ. ಯಾವು ಕಾರಣಕ್ಕೆ ಅಲ್ಲಿ ತೊಂದರೆಯಾಗಿದೆ ಎಂಬುದನ್ನು ತಿಳಿದುಕೊಂಡು ಕೂಡಲೇ ಸರಿಪಡಿಸುವ ಕೆಲಸ ಮಾಡುತ್ತೇವೆ.
– ಭರತ್ ನಾಯ್ಕ. ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ನಿರ್ದೇಶಕ .

Advertisement

Udayavani is now on Telegram. Click here to join our channel and stay updated with the latest news.

Next