ನವದೆಹಲಿ: ಐಶಾರಾಮಿ ಕಾರು ತಯಾರಿಕಾ ಸಂಸ್ಥೆ ಜಪಾನ್ ಮೂಲದ ಲೆಕ್ಸಸ್ ಎನ್ ಎಕ್ಸ್350h ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಇದರ ಬೆಲೆ (Ex showroom) 71.17 ಲಕ್ಷ ರೂಪಾಯಿ ಎಂದು ತಿಳಿಸಿದೆ.
ಇದನ್ನೂ ಓದಿ:Hanur; ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ನೀರುಪಾಲು
ನೂತನ ಲೆಕ್ಸಸ್ NX350h 2.5 ಲೀಟರ್, ನಾಲ್ಕು ಸಿಲಿಂಡರ್ ಎಂಜಿನ್ ಮತ್ತು ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಸಿವಿಟಿ ಜತೆಗೆ, ಎಂಜಿನ್ 240bhp ಮತ್ತು 270Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲೆಕ್ಸಸ್ ನಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು aerodynamics ಅಳವಡಿಸಲಾಗಿದೆ ಎಂದು ವಿವರಿಸಿದೆ.
ಲೆಕ್ಸಸ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ತನ್ಮಯ್ ಭಟ್ಟಾಚಾರ್ಯ ಅವರು, ಭಾರತದಲ್ಲಿ ಲೆಕ್ಸಸ್ ಎನ್ ಎಕ್ಸ್ 350h ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಲೆಕ್ಸಸ್ ಐಶಾರಾಮಿ ವೈಶಿಷ್ಟ್ಯತೆಯ ವಾಹನವಾಗಿದೆ. ಲೆಕ್ಸಸ್ ಒಳಗೆ ಜಿಯೋ ಲೇಯರ್ ಡೋರ್ ಟ್ರಿಮ್ ನೊಂದಿಗೆ ಮೊನೊಲಿತ್ ಪ್ಯಾಲೆಟ್ ಒಳಾಂಗಣ ಹೊಂದಿದೆ. ಇದು ಸುರಕ್ಷಾ ಫೀಚರ್ಸ್ ಅನ್ನು ಒಳಗೊಂಡಿದ್ದು, ಕಾರಿನಲ್ಲಿ ಇ-ಕಾಲ್, ಕಳ್ಳತನವಾದರೆ ವಾಹನ ಟ್ರ್ಯಾಕಿಂಗ್, ಡ್ರೈವರ್ ಅಲರ್ಟ್ ಮತ್ತು ಫೈಂಡ್ ಮೈ ಕಾರ್ ಬಳಸಬಹುದಾಗಿದೆ.
ಲೆಕ್ಸಸ್ ಎನ್ ಎಕ್ಸ್ 350ಎಚ್ ನಲ್ಲಿ ಸರ್ವೀಸ್ ಹಿಸ್ಟರಿ, ಸರ್ವೀಸ್ ಎಸ್ಟಿಮೇಟ್, ಸರ್ವೀಸ್ ರಿಮೈಂಡರ್, ಎಂಜಿನ್ ಸ್ಟಾರ್ಟ್, ಸ್ಟಾಪ್, ಡೋರ್ ಲಾಕ್, ಅನ್ ಲಾಕ್, ರಿಮೋಟ್ ಎಸಿ, ರಿಮೋಟ್ ಪವರ್ ವಿಂಡೋಸ್ ಫೀಚರ್ಸ್ ಒಳಗೊಂಡಿದೆ.