Advertisement

ಪಾರ್ಕಿಂಗ್‌ಗೆ ಸೂಕ್ತ ಜಾಗ ಇಲ್ಲದ ಕಟ್ಟಡಗಳ ಕುರಿತು ಪಾಲಿಕೆಗೆ ಪತ್ರ

11:44 AM May 12, 2019 | Team Udayavani |

ಧಾರವಾಡ: ಇಲ್ಲಿಯ ಸುಭಾಸ ರಸ್ತೆ, ಟಿಕಾರೆ ರಸ್ತೆ, ವಿಜಯಾ ರಸ್ತೆಗಳಲ್ಲಿ ಈಗಾಗಲೇ ಪೊಲೀಸರು ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿ, ಪಾರ್ಕಿಂಗ್‌ ವಲಯಗಳನ್ನು ಸೃಷ್ಟಿಸಿದ್ದು, ಇದಲ್ಲದೇ ಬೀದಿ ಬದಿಯ ವ್ಯಾಪಾರಸ್ಥರಿಗೂ ಅನುಕೂಲ ಮಾಡಿಕೊಡಲಾಗಿದೆ.

Advertisement

ನಗರ ಹಳೆಯ ಡಿಎಸ್‌ಪಿ ಕಚೇರಿ ಸರ್ಕಲ್ನಿಂದ ಹಳಿಯಾಳ ನಾಕಾ ವರೆಗಿನ ರಸ್ತೆಗಳ ಇಕ್ಕೆಲಗಳಲ್ಲಿನ ಜಾಗೆಯನ್ನು ಇನ್ಸ್‌ಪೆಕ್ಟರ್‌ ಎಂ.ಆರ್‌. ಚನ್ನಣ್ಣವರ ಶನಿವಾರ ಪರಿಶೀಲಿಸಿದರು. ಪ್ರಮುಖವಾಗಿ ವಾಣಿಜ್ಯ ಸಂಕೀರ್ಣಗಳಿಗೆ ಆಗಮಿಸುವ ಜನರಿಗೆ ಬೃಹತ್‌ ಕಟ್ಟಡಗಳಲ್ಲಿನ ವಾಹನ ಪಾರ್ಕಿಂಗ್‌ಗೆ ಮೀಸಲಿರಿಸಿದ ಜಾಗೆ, ರಸ್ತೆಯ ಎರಡೂ ಬದಿಗಳಲ್ಲಿನ ಜಾಗೆಯನ್ನು ಅವರು ಪರಿಶೀಲಿಸಿದರು. ವಾಹನಗಳ ಪಾರ್ಕಿಂಗ್‌ಗೆ ಜಾಗೆ ಇಲ್ಲದ ವಾಣಿಜ್ಯ ಕಟ್ಟಡಗಳ ಬಗ್ಗೆ ಮಹಾನಗರ ಪಾಲಿಕೆಗೂ ಪತ್ರ ಬರೆಯಲಾಗುವುದು. ನಂತರವೂ ಬದಲಾವಣೆ ಆಗದಿದ್ದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಚನ್ನಣ್ಣವರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next