ಕೊಪ್ಪಳ: ಕೇಂದ್ರ ಸರ್ಕಾರವು 2ನೇ ಹಂತದಲ್ಲಿ ಕೊಪ್ಪಳ ಜಿಲ್ಲೆಗೆ ಘೋಷಣೆ ಮಾಡಿದ ಉಡಾನ್ ಯೋಜನೆ ಆರಂಭಕ್ಕೆ ತಾಲೂಕಿನ ಟಣಕನಕಲ್ ಬಳಿ 500 ಎಕರೆ ಭೂಮಿ ಸ್ವಾ ಧೀನ ಮಾಡಿಕೊಂಡು ವಿಮಾನಯಾನ ನಿಲ್ದಾಣ ಆರಂಭಿಸಬೇಕೆಂದು ಸಂಸದ ಸಂಗಣ್ಣ ಕರಡಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಗೆ ಉಡಾನ್ ಯೋಜನೆ ಘೋಷಣೆಯಾಗಿ 2 ವರ್ಷ ಕಳೆದಿದ್ದು, ವಿಮಾನ ನಿಲ್ದಾಣ ನೀಡಲು ಎಂಎಸ್ಪಿಎಲ್ (ಬಲ್ಡೋಟ್) ಕಂಪನಿ ಒಪ್ಪದ ಕಾರಣ ಜಿಲ್ಲೆಯಲ್ಲಿ ಈ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ.
ಈ ಕುರಿತು ಸಂಸದರು ಮತ್ತು ಜಿಲ್ಲಾಡಳಿತವಷ್ಟೇ ಅಲ್ಲದೇ ಸರ್ಕಾರದ ಹಂತದಲ್ಲೂ ಸಭೆಗಳು ನಡೆದಿದ್ದವು. ಸರ್ಕಾರದ ಮಟ್ಟದಲ್ಲೂ ಎಷ್ಟೇ ಒತ್ತಡ ಹಾಕಿದರೂ ಸಹ ಎಂಎಸ್ಪಿಎಲ್ ಕಂಪನಿ ವಿಮಾನ ನಿಲ್ದಾಣದ ಸ್ಥಳ ನೀಡಲು ಒಪ್ಪದ ಕಾರಣ ಇಂದಿಗೂ ಈ ಯೋಜನೆ ಕಾರ್ಯಗತವಾಗುತ್ತಿಲ್ಲ. ಇದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಉಡಾನ್ ಅತ್ಯಂತ ಮಹತ್ವದ ಯೋಜನೆ. ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಪ್ಪಳ ತಾಲೂಕಿನ ಟನಕನಕಲ್ ಗ್ರಾಮದಿಂದ ಹಟ್ಟಿ ಕ್ರಾಸ್ ಎಡ ಬದಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ 500 ಎಕರೆ ಭೂಮಿಯನ್ನು ಕರ್ನಾಟಕ ಅಭಿವೃದ್ಧಿ ನಿಗಮದಿಂದ ಭೂಸ್ವಾ ಧೀನ ಪಡೆಸಿಕೊಂಡು ವಿಮಾನ ಸೇವೆ ಪ್ರಾರಂಭಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದಾರೆ. ಸಿಎಂ ಸಂಸದರ ಪತ್ರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.