Advertisement

ನಗರಸಭೆ ಸಾರ್ವತ್ರಿಕ ಚುನಾವಣೆಗೆ ಪತ್ರ

05:27 PM Nov 13, 2020 | Suhan S |

ನೆಲಮಂಗಲ: ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌ .ಪಿ.ಹೇಮಂತ್‌ ಕುಮಾರ್‌ ರಾಜೀನಾಮೆ ನೀಡುವ ಮೂಲಕ ಆ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಗರಸಭೆ ಸದಸ್ಯರ ನಡೆ ನಿಗೂಢವಾಗಿದೆ. ಇದ್ದನ್ನು ವಿಪಕ್ಷಗಳು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತವೆ ಎಂಬುದನ್ನುಕಾದು ನೋಡಬೇಕಿದೆ.

Advertisement

ಏನಿದು ಪ್ರಹಸನ: ನೆಲಮಂಗಲ ಪುರಸಭೆಯನ್ನುನಗರಸಭೆ ಆಗಿ ಮೇಲ್ದರ್ಜೆಗೇರಿಸುವ ಮೊದಲು ನಡೆದ ಚುನಾವಣೆಯಲ್ಲಿ 13 ಜೆಡಿಎಸ್‌, 7ಕಾಂಗ್ರೆಸ್‌, ಇಬ್ಬರು ಬಿಜೆಪಿ ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಸ್ಪಷ್ಟ ಬಹುಮತಹೊಂದಿದ್ದ ಜೆಡಿಎಸ್‌ ಸಂಭ್ರಮದಿಂದ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಂಡಿತ್ತು.

ಈ ನಡುವೆ, ಅರಿಶಿಣಕುಂಟೆ ಮತ್ತು ವಾಜರಹಳ್ಳಿ ಸಂಪೂರ್ಣ ಭಾಗ, ಬಸವನಹಳ್ಳಿ, ವಿಶ್ವೇಶ್ವರಪುರ ಗ್ರಾಪಂ ವ್ಯಾಪ್ತಿಯ ಆಯ್ದ ಗ್ರಾಮಗಳುಸೇರಿಸಿಕೊಂಡು ಪುರಸಭೆಯನ್ನು ನಗರಸಭೆ ಆಗಿ ಮೇಲ್ದರ್ಜೆಗೆ ಏರಿಸಲಾಯಿತು. ಬಳಿಕವಿಲೀನಗೊಂಡ ಪಂಚಾಯ್ತಿ ವ್ಯಾಪ್ತಿಗಳ ಮುಖಂಡರು, ನಡೆಸಿದ ಕಾನೂನು ಹೋರಾಟಗಳ ಬಳಿಕ, ಗ್ರಾಪಂ ವ್ಯಾಪ್ತಿಯ ಸದಸ್ಯರ ಆಯ್ಕೆ, ನಾಮನಿರ್ದೇಶಿತ ಸದಸ್ಯರ ಅಧಿಕಾರ ವ್ಯಾಪ್ತಿ,ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನದ ಹಕ್ಕುಗಳ ಕುರಿತು ಉಂಟಾದಗೊಂದಲಗಳಿಗೆ ತೆರೆ ಎಳೆಯಲು ನ.18ಕ್ಕೆ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ನ.12ರಂದು ನಡೆಯಬೇಕಿದ್ದ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಕೋರ್ಟ್‌ ತಡೆ ನೀಡಿದೆ. ಈ ಮಧ್ಯದಲ್ಲಿ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸ್‌ ಮೂರ್ತಿ ನ.9ರಂದು ನೆಲಮಂಗಲ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೂ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪಗೆ ಪತ್ರ ಬರೆದಿರುವುದು ಸ್ವಪಕ್ಷೀಯರಕೆಂಗಣ್ಣಿಗೆ ಗುರಿಯಾಗಿದೆ.

ಗೊಂದಲ: ನೂತನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅಧ್ಯಕ್ಷ ಸ್ಥಾನ ಬಹುತೇಕ ಜೆಡಿಎಸ್‌ ಪಕ್ಷಕ್ಕೆ ಒಲಿಯುವ ಸಾಧ್ಯತೆ ಇದೆ. ಇದರ ಬೆನ್ನಲ್ಲೆ, ಜೆಡಿಎಸ್‌ ಶಾಸಕರು ಸಿಎಂಗೆ ಪತ್ರಬರೆದಿರುವುದು ತಾಲೂಕಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಷ್ಟೇಅಲ್ಲ, ಜೆಡಿಎಸ್‌ ತಾಲೂಕು ಅಧ್ಯಕ್ಷರ ರಾಜೀನಾಮೆಗೂ ಕಾರಣವಾಗಿದೆ ಎನ್ನಲಾಗಿದೆ.

Advertisement

ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಜೆಡಿಎಸ್‌ ನಗರಸಭೆ ಅಧ್ಯಕ್ಷ ಗಾದಿಗೆ ಏರಲು ರಾಜಕೀಯವಾಗಿ ಮತ್ತುಕಾನೂನು ಮೂಲಕ ಸಾಕಷ್ಟು ಹೋರಾಟ ಮಾಡಲಾಗುತ್ತಿದೆ. ಜೆಡಿಎಸ್‌ ನೂತನ ನಗರಸಭೆ ಅಧಿಕಾರ ಹಿಡಿಯುವುದನ್ನುಕಂಡು ಹೆಮ್ಮೆ ಪಡಬೇಕಿದ್ದ ಶಾಸಕರು, ತಮ್ಮ ಗೆಲುವಿಗೆ ಶ್ರಮಿಸಿದ ಪಕ್ಷದ ಚುನಾಯಿತ ಸದಸ್ಯರ ಹಿತಕಾಯುವ ಬದಲಿಗೆ, ಸಾರ್ವತ್ರಿಕ ಚುನಾವಣೆಗೆ ಸಿಎಂಗೆ ಪತ್ರ ಬರೆದಿರುವ ನಡೆಖಂಡನೀಯ. ಹೇಮಂತ್‌ಕುಮಾರ್‌, ಅಧ್ಯಕ್ಷ, ತಾಲೂಕು ಜೆಡಿಎಸ್‌.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎನ್‌.ಪಿ.ಹೇಮಂತ್‌ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ,ಯಾವಕಾರಣಕ್ಕೆ ಮನಸ್ಥಾಪ ಮಾಡಿಕೊಂಡಿದ್ದಾರೆಂಬುದೂ ನನಗೆ ಗೊತ್ತಿಲ್ಲ. ಡಾ.ಕೆ.ಶ್ರೀನಿವಾಸ್‌ಮೂರ್ತಿ, ಶಾಸಕ

ಮುಖಂಡರ ಸಹಕಾರದಲ್ಲಿ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷಸ್ಥಾನ ಜೆಡಿಎಸ್‌ ತೆಕ್ಕೆಗೆ ಸೇರುವುದು  ಖಚಿತವಾಗಿತ್ತು. ಈ ನಡುವೆ ಪಕ್ಷದ ಶಾಸಕರೇ ಸಾರ್ವತ್ರಿಕ ಚುನಾವಣೆನಡೆಸುವಂತೆ ಪತ್ರ ಬರೆದಿರುವುದು ಬೇಸರದ ಸಂಗತಿ. ಪಕ್ಷದ ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್‌ ಅವರಿಗೆರಾಜೀನಾಮೆ ನೀಡಬಾರದು ಎಂದು ತಿಳಿಸಲಾಗಿದೆ.ಯಾರೂ ಪಕ್ಷ ಬಿಡುವ ಮಾತಿಲ್ಲ. ಬಿಎಂಎಲ್‌ಕಾಂತರಾಜು, ವಿಧಾನಪರಿಷತ್‌ ಸದಸ್ಯ

 

ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next