Advertisement

ಬೇಡಿಕೆ ಈಡೇರಿಕೆಗೆ ಪತ್ರ ಚಳವಳಿ

04:17 PM Dec 15, 2019 | Suhan S |

ಲಕ್ಷ್ಮೇಶ್ವರ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರಹಾಗೂ ಶಿರಹಟ್ಟಿ ತಾಲೂಕು ಸಂಘದ ಶಿಕ್ಷಕರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ಪತ್ರ ಚಳವಳಿ ನಡೆಸಿ, ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಹೆಸರಿನಲ್ಲಿ ಬರೆದ ಪತ್ರಗಳನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕಿದರು.

Advertisement

ಎಲ್ಲ ಶಿಕ್ಷಕರಿಗೆ 2,500 ರೂಪಾಯಿ ಗ್ರಾಮೀಣ ಭತ್ಯೆ ನೀಡಬೇಕು. ವರ್ಗಾವಣೆ ಅಧಿನಿಯಮಗಳಲ್ಲಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರು ಸಲ್ಲಿಸಿದ 20 ಅಂಶಗಳನ್ನು ಪರಿಗಣಿಸಬೇಕು. ಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿ ಹಾಗೂ ರಾಜ್ಯಾದ್ಯಂತ ಕ್ಲಸ್ಟರ್‌ಗೆ ಒಂದು ಡಿಜಿಟಲ್‌ ಶಾಲೆ ಮಂಜೂರು ಮಾಡಬೇಕು. 82 ಸಾವಿರ ಪದವೀಧರ ಶಿಕ್ಷಕರನ್ನು ಪದೋನ್ನತಿಗೊಳಿಸಿ 6ನೇ ತರಗತಿಯಿಂದ 8ನೇ ತರಗತಿವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪದನಾಮ ಬದಲಾಯಿಸಿ ವೇತನ ಭಡ್ತಿ ನೀಡಬೇಕು. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ತಜ್ಞರ ಸಭೆ ಕರೆದು ಮರು ಜಾರಿಗೊಳಿಸಬೇಕು ಎಂಬ ಬೇಡಿಕೆ ಈಡೇರಿಸುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ.

ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಲಕ್ಷ್ಮೇಶ್ವರ : ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಆತಡಕರ, ಶಿರಹಟ್ಟಿ ಘಟಕದ ಅಧ್ಯಕ್ಷ ಬ .ಬಿ. ಕಳಸಾಪುರ, ಸರ್ಕಾರಿ ನೌಕರರ ಸಂಘದರಿ ತಾಲೂಕು ಘಟಕದ ಅಧ್ಯಕ್ಷ ಡಿ.ಎಚ್‌. ಪಾಟೀಲ, ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಎಲ್‌.ಎಚ್‌. ಮಠದ, ಅಂಗವಿಕಲರ ನೌಕರರ ಸಂಘದ ಅಧ್ಯಕ್ಷ ಆರ್‌.ಎಂ. ಶಿರಹಟ್ಟಿ, ಮಹಾಂತೇಶ ಬಡಿಗೇರ, ಆರ್‌.ಎ. ಕಮ್ಮಾರ, ಬಿ.ಎಂ. ಕುಂಬಾರ, ವೈ.ಎಚ್‌. ಮಾಚೇನಹಳ್ಳಿ, ಎಸ್‌ .ಬಿ. ಲಧ  ¾àಶ್ವರ, ಜೆ.ಆರ್‌. ಹುಲಕೋಟಿ,ಜಿ.ಎಸ್‌. ಗುಡಗೇರಿ, ಎಂ.ಎಸ್‌. ಹಿರೇಮಠ, ಆರ್‌.ಪಿ. ನೆಗಳೂರ, ಎಂ.ಎ. ನದಾಫ್‌, ಎಂ.ಡಿ. ವಾರದ, ಎಂ.ಜಿ. ಮಾಂಡ್ರೆ, ಸತೀಶ ಬೋಮಲೆ, ಎಲ್‌.ಎಚ್‌. ನಂದೆಣ್ಣವರ ಸೇರಿ ಹಲವಾರು ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next