Advertisement
ನಗರದ ಬಿಜೆಪಿ ಚುನಾವಣೆ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾ ಚಾರದ ವಿರುದ್ಧ ಪ್ರಧಾನಿ ಮೋದಿ ತೆಗೆದುಕೊಂಡ ಬಿಗಿ ನಿಲುವು ದೇಶವನ್ನು ಸುರಕ್ಷಿತವಾಗಿಟ್ಟಿದೆ. ಕಾಶ್ಮೀರ ಮತ್ತು ಛತ್ತೀಸ್‌ಗಢ ಹೊರತು ಪಡಿಸಿದರೆ ದೇಶದ ಬೇರೆಲ್ಲೂ ಭಯೋ ತ್ಪಾದಕರ/ನಕ್ಸಲರ ದಾಳಿ ನಡೆದಿಲ್ಲ. ಹೀಗಿರುವಾಗ ಕಾಂಗ್ರೆಸ್‌ನ ಪ್ರಣಾಳಿಕೆ ಭಯೋತ್ಪಾದನಾ ಚಟುವಟಿಕೆಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗಲಿದೆ ಎಂದರು.
ರಾಜ್ಯದಲ್ಲಿ ಐಟಿ ದಾಳಿ ನಡೆದಾಗ ಮೈತ್ರಿ ಕೂಟಗಳು ಒಟ್ಟಾಗಿ ಬೀದಿ ಗಿಳಿದು ಹೋರಾಟ ನಡೆಸಿದ್ದವು. ಐಟಿ ದಾಳಿಯನ್ನು ಭಯೋತ್ಪಾದಕ ದಾಳಿ ಯಂತೆ ಬಿಂಬಿಸಲಾಯಿತು. ರಾಜ್ಯದ 5 ಪ್ರಮುಖ ಕಾಮಗಾರಿಗಳ ಕಂಪ್ಲೀ ಷನ್ ಸರ್ಟಿಫಿಕೇಟ್ ಬಾರದೆ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಈ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ ಎಂದು ಎಚ್ಚರಿಸಿದರು. ರಾಹುಲ್ ಗಾಂಧಿ ಅವರ ಪೌರತ್ವ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು. ರಾಹುಲ್ ಭಾರತೀಯನೋ ಅಲ್ಲವೇ ಎಂಬ ಕುರಿತು ಜನರಿಗೆ ತಿಳಿಸಲು ಇಷ್ಟು ಕಾಲಾವಕಾಶ ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Related Articles
Advertisement
ಸಚಿವೆ ಜಯಮಾಲಾ ಅವರು ನನ್ನ ನಾಲಗೆಯನ್ನು ಚಪ್ಪಲಿಗೆ ಹೋಲಿಸಿದ್ದರು ಆದರೆ ಸಂಸ್ಕಾರವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರ ಬಗ್ಗೆ ಯಾಕೆ ಅವರು ದನಿ ಎತ್ತುತ್ತಿಲ್ಲ. ಜಯಮಾಲಾ ಅವರು ನನ್ನ ನಾಲಗೆಗೆ ಬಜೆ ಮುಟ್ಟಿಸಲು ಹೇಳಿದ್ದಾರೆ. ಆದರೆ ನನ್ನ ನಾಲಗೆ ಸರಿಯಾಗಿಯೇ ಇದೆ.
ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ. ಪತ್ರದಲ್ಲಿ ಬರೆದ ವಿಶ್ವೇಶ್ವರಯ್ಯ, ಬಸವೇಶ್ವರ ಅವರ ಹೆಸರನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ ರಾಹುಲ್ ಗಾಂಧಿ ಅವರಿಗೆ ಬಜೆ ಮುಟ್ಟಿಸಲು ಕಳುಹಿಸಿಕೊಡಲಿ ಎಂದರು.
ಮೋದಿ ಅಲ್ಪಸಂಖ್ಯಾಕರನ್ನು ಅವಗಣಿಸುತ್ತಿದ್ದಾರೆ ಎಂಬುದಾಗಿ ಕಾಂಗ್ರೆಸ್ನಾಯಕರು ಹೇಳುತ್ತಾರೆ. ಆದರೆ ಕೇಂದ್ರ ಸರಕಾರದ ಉತ್ತಮ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಹಿಟ್ಲರ್ ಮನಃಸ್ಥಿತಿ ಇದೆ. ಅದರಿಂದಾಗಿ ಕಳೆದ 60 ವರ್ಷಗಳಿಂದ ದೇಶ ಅಭಿವೃದ್ಧಿಯಾಗದೆ ಉಳಿದಿದೆ ಎಂದರು. ವ್ಯಕ್ತಿ ಪೂಜೆಯಲ್ಲ; ವ್ಯಕ್ತಿತ್ವದ ಪೂಜೆ
ಮೋದಿ ಹೆಸರಲ್ಲಿ ಮತ ಕೇಳುವುದು ಅಪಾಯ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹೇಳಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಭಾಷಣದಲ್ಲಿ ಕಲ್ಲಡ್ಕ ಭಟ್ ಅವರು ಮೋದಿ ಅವರ ಕಾರ್ಯವೈಖರಿ ಬಗ್ಗೆ ಹೊಗಳಿದ್ದಾರೆ. ಬಿಜೆಪಿ ಯಾವತ್ತೂ ವ್ಯಕ್ತಿ ಪೂಜೆ ಮಾಡಿಲ್ಲ. ವ್ಯಕ್ತಿತ್ವದ ಪೂಜೆ ಮಾಡುತ್ತದೆ. ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಬಾರಿ ಮತ್ತೆ ಮೋದಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. ಶಾಸಕರಾದ ವೇದವ್ಯಾಸ್ ಕಾಮತ್, ಡಾ| ವೈ. ಭರತ್ ಶೆಟ್ಟಿ, ನಿತಿನ್ ಕುಮಾರ್, ಕಿಶೋರ್, ಸಂಜಯ್ ಪ್ರಭು ಉಪಸ್ಥಿತರಿದ್ದರು.