Advertisement

ಇವತ್ತು ಏಕಾದಶಿ ವ್ರತ, ನಾಳೆ ಮಾತನಾಡೋಣ: ನಾಮಫಲಕ ತೋರಿಸಿದ ಎಚ್. ವಿಶ್ವನಾಥ್

03:05 PM Aug 29, 2020 | Mithun PG |

ಮೈಸೂರು. ಟಿಪ್ಪು ಸುಲ್ತಾನ್ ಪರ ಹೇಳಿಕೆ ನೀಡಿ ಸ್ವಪಕ್ಷದಿಂದಲೇ ಟೀಕೆಗೆ  ಗುರಿಯಾಗಿರುವ ಎಚ್ ವಿಶ್ವನಾಥ್ ಇಂದು ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

Advertisement

ಮಾತ್ರವಲ್ಲದೆ ಇವತ್ತು ಏಕಾದಶಿ ವ್ರತ, ನಾಳೆ ಮಾತನಾಡೋಣ ಎಂಬ ನಾಮಫಲಕ ತೋರಿಸಿದ್ದಾರೆ.

ಮೈಸೂರಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ ಎಚ್ ವಿಶ್ವನಾಥ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮಾತ್ರವಲ್ಲದೆ  ಏಕಾದಶಿಯ ಕಾರಣ ನೀಡಿ ನಿರ್ಗಮಿಸಿದ್ದಾರೆ.  ಹಳ್ಳಿಹಕ್ಕಿಯ ಈ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಟಿಪ್ಪು ಸುಲ್ತಾನ್ ಈ ನೆಲದ ಮಗ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿಕೆ ನೀಡಿರುವುದಕ್ಕೆ  ಸ್ವಪಕ್ಷದಿಮದಲೇ ಭಾರೀ ವಿರೋಧ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next