Advertisement
ಮೂಡಬಿದಿರೆ ಸಮಾಜ ಮಂದಿರದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಭಿಮಾನಿ ಬಳಗದವರು ಗುರುವಾರ ಏರ್ಪಡಿಸಿದ್ದ ‘ಚಿಟ್ಟಾಣಿಗೆ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಉದ್ಭವ ಕಲಾವಿದ, ಒಂಟಿ ಸಲಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, 66 ವರ್ಷಗಳ ಕಾಲ ನಿರಂತರ ರಂಗದಲ್ಲಿ ದಣಿವರಿಯದೆ ಕೆಲಸ ಮಾಡಿದ ಚಿಟ್ಟಾಣಿ ಉದ್ಭವ ಕಲಾವಿದ. ಈ ಯಕ್ಷರಂಗದ ಸಮಗ್ರ ದಶಾವತಾರಿ,ಒಂಟಿ ಸಲಗದ ಹಾಗೆ ಬೆಳೆದವರು ಎಂದು ಉದ್ಗರಿಸಿ, ಅವರಿಗೆ ಲಭಿಸಿದ ಪದ್ಮಶ್ರೀ ಅನಕ್ಷರಸ್ಥರಾಗಿದ್ದೂ ಯಕ್ಷರಂಗಕ್ಕೆ ಎಂಥ ಮನ್ನಣೆ ತಂದುಕೊಡಬಹುದೆಂಬುದಕ್ಕೆ ಸಾಕ್ಷಿ’ ಎಂದು ಹೇಳಿದರು. ಸಂಘಟಕ ಪ್ರವೀಣ್‌ಚಂದ್ರ ಜೈನ್ ಸ್ವಾಗತಿಸಿ, ಚಿಟ್ಟಾಣಿ ಪ್ರತಿಷ್ಠಾನಕ್ಕೆ ರೂ. 10,000 ಕೊಡುಗೆ ನೀಡಿದರು.ಪ್ರಭಾತ್ ಕುಮಾರ್ ಬಿ. ನಿರೂಪಿಸಿ, ನೆಲ್ಲಿಮಾರು ಸದಾಶಿವ ರಾವ್ ವಂದಿಸಿದರು. ‘ಗದಾಯುದ್ಧ’ ತಾಳಮದ್ದಲೆ ಸಂಯೋಜಿಸಲಾಗಿತ್ತು. ಕಲಾಕೇಂದ್ರ ನಿರ್ಮಾಣಕ್ಕೆ ಕೈಜೋಡಿಸಿ
ಅಪ್ಪಯ್ಯನನ್ನು ಅನುಕರಣೆ ಮಾಡಿಲ್ಲ. ಆದರೆ ಅವರು ರಂಗದಲ್ಲಿ ಕ್ರಿಯೆ ಪ್ರತಿಕ್ರಿಯೆ ಕಲಿಸಿದ್ರು. ಯಾವ ಕಾರಣಕ್ಕೂ ಇನ್ನೊಬ್ಬ ಚಿಟ್ಟಾಣಿ ಮೂಡಿಬರಲು ಸಾಧ್ಯವಿಲ್ಲ. ಕೆರೆಮನೆ ಶಿವರಾಮ ಹೆಗಡೆ ಅವರ ಈಶ್ವರ ಕೊಟ್ಟ ವರ ಫಲಿಸಿ ಭಸ್ಮಾಸುರ ಅಲ್ಲಲ್ಲ ಚಿಟ್ಟಾಣಿ ಮೆರೆದರು. ಒಂದು ದಿನವೂ ಕೈಕಾಲು ನೋವು ಎಂದು ಹೇಳಲಿಲ್ಲ. ಯಕ್ಷದೇವತೆ ಅವರೊಟ್ಟಿಗಿತ್ತು. ಚಿಟ್ಟಾಣಿ ಪ್ರತಿಷ್ಠಾನದ ಮೂಲಕ ಮೂಡಿಬರಲಿರುವ ಕಲಾಕೇಂದ್ರ ನಿರ್ಮಾಣ, ನಿರ್ವಹಣೆಯಲ್ಲಿ ಕಲಾಭಿಮಾನಿಗಳು ಕೈ ಜೋಡಿಸಬೇಕಾಗಿದೆ.
– ಸುಬ್ರಹ್ಮಣ್ಯ ಚಿಟ್ಟಾಣಿ