ಕುಂಬಳೆ: ಕಾಸರಗೋಡು ಜಿಲ್ಲೆಯ ಯುವಕರಿಗೆ ಸೈನ್ಯಕ್ಕೆ ಸೇರುವ ಸದಾವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಅವೇಕ ಕಾಸರಗೋಡು ಟ್ರಸ್ಟ್ ಮತ್ತು ಉಪ್ಪಳ ಶ್ರೀ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಆಶ್ರಯದಲ್ಲಿ ಡಿಫೆನ್ಸ್ ಪ್ರಿ ರಿಕ್ರೂಟೆ¾ಂಟ್ ಟೈÅನಿಂಗ್ ಶಿಬಿರದ ದಾಖಲಾತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ ಕೊಂಡೆವೂರಿನಲ್ಲಿ ನಡೆಯಿತು.
ಪರೀಕ್ಷೆಯಲ್ಲಿ ನೂರRಕಿಂತಲೂ ಅಧಿಕ ಉತ್ಸಾಹಿ ಯುವಕರು ಭಾಗವಹಿಸಿದರು.
ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿ, ದೇಶ ರಕ್ಷಣೆಯ ಕಾರ್ಯವನ್ನು ಮಾಡುವ ಧೈರ್ಯ ಪ್ರತಿಯೊಬ್ಬ ಯುವಕರಲ್ಲೂ ಜಾಗೃತವಾಗಬೇಕು. ಅಂತಹ ಶ್ರೇಷ್ಠ ಕೈಕಂರ್ಯವನ್ನು ನಡೆಸಲು ಯುವಕರು ಮುಂದೆ ಬರಬೇಕು. ತಾಯಿ ಭಾರತಿಯ ಸೇವೆಯ ಸದವಕಾಶವನ್ನು ಜಿಲ್ಲೆಯ ಯುವಜನತೆ ಪಡೆದುಕೊಳ್ಳಲು ಈ ತರಬೇತಿ ಸಂಪೂರ್ಣ ಸಹಕಾರಿಯಾಗಲಿ ಎಂದರು.
ಆವೇಕ್ ಕಾಸರಗೋಡು ಸಂಘಟನೆಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ನಾರಾಯಣ ಬೆಂಗಳೂರು, ಸುಧಾಮ ಗೋಸಾಡ, ಪಿ. ಸುರೇಶ್ ಕುಮಾರ್ ಶೆಟ್ಟಿ, ವಿವೇಕ್ ಕಾಸರಗೋಡು, ಸದಸ್ಯರಾದ ನಿಖೀಲ್, ನಿಖೀಲೇಶ್, ಹರೀಶ್ ಕುಮಾರ್, ಕೆ.ಜಿ. ಮನೋಹರ್, ದಿನೇಶ್ ಎಂ. ಭಾಗವಹಿಸಿದ್ದರು.
ಕಾರ್ಯದರ್ಶಿ ಕೆ. ಗುರುಪ್ರಸಾದ್ ಪ್ರಭು ಸ್ವಾಗತಿಸಿದರು. ಹರೀಶ್ ಕುಮಾರ್ ವಂದಿಸಿದರು.