Advertisement

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

03:39 PM Dec 06, 2023 | Team Udayavani |

ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಇಂದಿನ ಜನಾಂಗ ಪ್ರವಾಸಿ ತಾಣಗಳ ಬಗೆಗೆ ಒಲವು ತೋರಿಸುತ್ತಿರುವುದು ಸಂತೋಷದಾಯಕ ವಿಚಾರ. ಆಧುನಿಕತೆಯ ಭರದಲ್ಲಿ ಜನರು ತಾವು ನೆಚ್ಚಿದ ಸ್ಥಳಗಳನ್ನು ಹಾಳುಗೆಡವಿ ಬರುತ್ತಿರುವುದು ನಿಜಕ್ಕೂ ನಾಚಿಕೆಗೇಡು.

Advertisement

ಸಾಮಾನ್ಯವಾಗಿ ಎಲ್ಲ ಪ್ರವಾಸಿ ತಾಣಗಳಲ್ಲೂ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಆ ಬಗೆಗೆ ಜಾಗೃತಿ ಮೂಡಿಸುವ ಸೂಚನಾಫಲಕಗಳಿದ್ದರೂ, ಯಾತ್ರಿಕರು ತಾವು ಬಳಸಿದ ಪ್ಲಾಸ್ಟಿಕ್‌ ಕಸಗಳನ್ನು ಎಲ್ಲೆಂದರಲ್ಲಿ ಎಸೆದು ಬಿಡುತ್ತಾರೆ. ತತ್ಪರಿಣಾಮವಾಗಿ ಪ್ರಯಾಣಿಗರು ಹೆಚ್ಚಾದಂತೆ ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ಗಳ ಚಿತ್ತಾರವೇ ಆಕರ್ಷಣೆಯಾಗಿ ಬಿಡುತ್ತಿವೆ!

ಏನೂ ಅರಿಯದ ಮೂಕ ಪ್ರಾಣಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆ ಬಗೆಗೆ ಕಾಳಜಿ ವಹಿಸದಿದ್ದರೆ ಮುಂದೊಂದು ದಿನ ನಮ್ಮ ನಡುವೆಯೇ ಪ್ಲಾಸ್ಟಿಕ್‌ ರಾಶಿ ನೋಡಿ ಬರಲು ಹೋಗೋಣ ಎನ್ನುವ ಮಾತು ಬಂದರೂ ಅಚ್ಚರಿಯಿಲ್ಲ!

ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ತಾಣಗಳ ಬಗೆಗೆ ಹೇಗೆ ಮಾಹಿತಿ ಹಂಚಿಕೆಯಾಗುತ್ತದೆಯೋ ಹಾಗೆಯೇ ದುರ್ಬಳಕೆಯಾಗುತ್ತಿರುವುದು ವಿಷಾದನೀಯ. ಮೊನ್ನೆ ಮೊನ್ನೆ ಸಾಮಾಜಿಕ ಜಾಲತಾಣಗಳಲ್ಲಿ, ಸಮೂಹ ಮಾಧ್ಯಮಗಳಲ್ಲಿ ಹಂಚುವ ಮಾಹಿತಿಯಿಂದಾಗಿ ಪ್ರವಾಸಿ ಸ್ಥಳಗಳ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ಎನ್ನುವುದರ ಬಗೆಗೆ ವಿವರಿಸಿದ ಗೋವಾದ ದೂದ್‌ ಸಾಗರ್‌ಜಲಪಾತದ ವೀಡಿಯೋ ಉಲ್ಲೇಖನೀಯ.

Advertisement

ಈ ಜಲಪಾತದ ವೀಕ್ಷಕರು ಪರಿಸರದಲ್ಲಿ ಅಸಹ್ಯವಾಗಿ ನಡೆದುಕೊಂಡ ಬಗ್ಗೆ ನಮ್ಮ ಸುತ್ತಮುತ್ತಲಿರುವ ಭಾಗಗಳಲ್ಲೂ ನಡೆಯುತ್ತಲಿರುತ್ತದೆ. ಇಂದಿನ ಜನಾಂಗ ಪರಿಸರಕ್ಕೆ ಮಾರಕವಾಗಿ ಬದುಕದೆ ಪ್ರೇರಕವಾಗಿ ಬದುಕಲು ಕಲಿಯುವುದು ಅನಿರ್ವಾಯವಾಗಿದೆ.

ಸಮಾಜದಲ್ಲಿ ಜನರಿಗೆ ಪ್ರವಾಸಿ ತಾಣಗಳ ಬಗೆಗೆ ಎಂದು ಅತೀವ ಆಸಕ್ತಿಯುಂಟಾಯಿತೋ ಅಂದಿನಿಂದಲೇ  ಪ್ರಕೃತಿಯಲ್ಲಿ ಸ್ವಾಭಾವಿಕವಾದ ಸೌಂದರ್ಯ ಮಾಯವಾಗಿ ಬಿಟ್ಟಿವೆ. ಹೊಸ ಹೊಸ ಅನ್ವೇಷಣೆಗಳನ್ನು ಮಾಡಿ, ಪರಿಸರವನ್ನು ಪ್ರಯೋಗಾಲವನ್ನಾಗಿಸಿಬಿಟ್ಟಿದ್ದಾರೆ.

ಪ್ರವಾಸೋದ್ಯಮವು ದಂಧೆಯಾಗಿ ಬಿಟ್ಟಿದೆ. ಇದೆಲ್ಲವನ್ನು ಬದಿಗಿಟ್ಟು, ಪ್ರಕೃತಿಯ ಉಳಿವಿಗಾಗಿ ತುಡಿಯುವ ಅಂತಃಕರಣವನ್ನು ಅಳವಡಿಸಿಕೊಂಡರೆ,  ಮುಂದಿನ ಪೀಳಿಗೆಗೂ ಅತ್ಯುತ್ತಮ ಬಳುವಳಿಯನ್ನು ನೀಡಿದಂತಾಗುತ್ತದೆ ಅಲ್ಲವೇ?

ಪಂಚಮಿ ಬಾಕಿಲಪದವು

ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next