Advertisement
ಕಾವೇರಿ ನದಿ ನೀರಿನ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಕಾವೇರಿ ವಿಷಯದಲ್ಲಿ ಬಹಳ ವರ್ಷಗಳ ನಂತರ ಒಳ್ಳೆಯ ತೀರ್ಪು ಬಂದಿದೆ. ಮಂಡ್ಯ ಭಾಗದ ರೈತರೂ ಹೆಚ್ಚು
ಖುಷಿಯಾಗಿದ್ದಾರೆ. ಸೋಮವಾರ ಪತ್ನಿ ಜತೆ ಕಾವೇರಿಗೆ ಬಾಗಿನ ಅರ್ಪಿಸುತ್ತೇನೆ ಎಂದರು.
ನೀರಾವರಿ ಪ್ರದೇಶ ಹೆಚ್ಚಳ ಮಾಡಿದರೆ ಸಾಲದು. ಅದಕ್ಕೆ ಅಗತ್ಯ ನೀರು ಮತ್ತು ನಿರ್ವಹಣೆ ಮಾಡುವುದರ ಬಗ್ಗೆಯೂ ಗಮನ ಹರಿಸಬೇಕು. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿ ಸಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ನಾವೆಲ್ಲರೂ ಸ್ನೇಹಿತರೇ, ನದಿ ಜೋಡಣೆ ಮಾಡಿದರೆ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.
Related Articles
ಯಾರೂ ಮಾತನಾಡಲೇ ಇಲ್ಲ. ಅದನ್ನು ಬಿಟ್ಟು ಅಂಬರೀಶ್ ಎಲ್ಲಿ ಡ್ಯಾನ್ಸ್ ಮಾಡಿದ ಎನ್ನುವುದನ್ನೇ ಹೆಚ್ಚು ಪ್ರಚಾರ ಮಾಡ್ತೀರಾ
ಎಂದು ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
Advertisement
ಮುಂಬರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಅಂಬರೀಶ್ ಪುನರುಚ್ಚರಿಸಿದರು.
15 ವರ್ಷದಿಂದ ಸಿಎಂ ಅಭ್ಯರ್ಥಿ:ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಎಲ್ಲರೂ ಪ್ರಯತ್ನಿಸುತ್ತೇವೆ. ನಾನು ಹದಿನೈದು ವರ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ. ಆಸೆ ಪಟ್ಟರೆ ನಿರಾಸೆಯಾಗುತ್ತದೆ. ಅದಕ್ಕಿಂತ ಆಸೆ ಪಡದೇ ಇರುವುದು ಒಳ್ಳೆಯದು. ಹಾಗಂತ ಸಿಎಂ ಸ್ಥಾನ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಚಟಾಕಿ ಹಾರಿಸಿದರು.