Advertisement
ಇದು ಸುಮಾರು 8 ಲಕ್ಷ ಜನರ ಸಾವಿಗೆ ಕಾರಣವಾಗಿದೆ ಅಂದರೆ, ಸರಿಸುಮಾರು ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ ಎಂದರ್ಥ. ಜಾಗತಿಕಮಟ್ಟದಲ್ಲಿ ಪ್ರತೀ ಒಂದು ಲಕ್ಷ ಜನಸಂಖ್ಯೆಯಲ್ಲಿ 11.4 ಜನ (15/1 ಲಕ್ಷ ಪುರುಷರಲ್ಲಿ ಮತ್ತು 8/ಲಕ್ಷ ಮಹಿಳೆಯರಲ್ಲಿ) ಆತ್ಮಹತ್ಯೆಗೀಡಾಗುತ್ತಾರೆ. 15ರಿಂದ 24ನೇ ವಯಸ್ಸಿನಲ್ಲಿ ಸಂಭವಿಸುವ ಸಾವುಗಳಿಗೆ ಮುಖ್ಯ ಕಾರಣ ಆತ್ಮಹತ್ಯೆ. ಪ್ರಪಂಚದಾದ್ಯಂತ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಆತ್ಮಹತ್ಯೆ ಕಂಡುಬಂದಿದೆ. 2012ರಲ್ಲಿ ಪ್ರಪಂಚದ ಶೇ.76ರಷ್ಟು ಆತ್ಮಹತ್ಯೆಗಳು ಕೆಳಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ನಡೆದಿದ್ದವು ಮತ್ತು ಇವುಗಳಲ್ಲಿ ಶೇ. 39 ಆತ್ಮಹತ್ಯೆಗಳು ದಕ್ಷಿಣ ಏಶ್ಯಾದಲ್ಲಿ ನಡೆದಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಸುಮಾರು 25 ದೇಶಗಳಲ್ಲಿ ಆತ್ಮಹತ್ಯೆಯನ್ನು ಕಾನೂನಿನ ಪ್ರಕಾರ ಒಂದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇನ್ನು 20 ದೇಶಗಳಲ್ಲಿ
ಶರಿಯಾ ಕಾನೂನಿನ ಪ್ರಕಾರ ಇದಕ್ಕೆ ಜೈಲುವಾಸ ಶಿಕ್ಷೆಯಿದೆ.
Related Articles
Advertisement
ಆತ್ಮಹತ್ಯೆ ತಡೆಗಟ್ಟಲು ಕಷ್ಟಪಡಬೇಕಾಗುತ್ತದೆ ಹೌದು, ಆದರೆ ಇದರ ಧನಾತ್ಮಕ ಪರಿಣಾಮಗಳು ಅಪರಿಮಿತವಾಗಿದ್ದು, ಜತೆಗೆ ಉಳಿದುಕೊಳ್ಳುವಂತಹವುಗಳು ಹಾಗೂ ಇವುಗಳು ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಈ ಕೆಲಸದಿಂದಾಗಿ ಕೇವಲ ಒತ್ತಡದಲ್ಲಿರುವ ವ್ಯಕ್ತಿಗಲ್ಲದೇ, ಆತನನ್ನು ಪ್ರೀತಿಸುವ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಮತ್ತು ಆತ್ಮಹತ್ಯೆ ತಡೆಗಟ್ಟಿದ ವ್ಯಕ್ತಿ ಹಾಗೂ ಇಡೀ ಸಮಾಜದಲ್ಲಿ ಬದಲಾವಣೆ ಕಂಡುಬರುತ್ತದೆ.
ಆತ್ಮಹತ್ಯೆ ತಡೆಗಟ್ಟಲು ಜತೆಗೂಡಿ ಕೆಲಸ ಮಾಡುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಒಂದು ಆತ್ಮಹತ್ಯೆಯನ್ನು ತಡೆಗಟ್ಟುವುದರಲ್ಲಿ ಹಲವಾರು ಜನರ ಪ್ರಯತ್ನದ ಆವಶ್ಯಕತೆಯಿರುತ್ತದೆ: ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಸಮಾಜದವರು, ಶಿಕ್ಷಕರು, ಆರೋಗ್ಯ ಕ್ಷೇತ್ರದವರು, ಧಾರ್ಮಿಕಗುರುಗಳು, ರಾಜಕಾರಣಿಗಳು, ಸರಕಾರದವರು. ಆತ್ಮಹತ್ಯೆ ತಡೆಗಟ್ಟುವಲ್ಲಿ ಮಾಡುವ ಪ್ರಯತ್ನ ವ್ಯಕ್ತಿಯ, ಕುಟುಂಬದ, ಸಮಾಜದ ಸ್ತರದಲ್ಲಿ ಸಮ್ಮಿಶ್ರವಾಗಿ ಸಾಗಬೇಕು.ಆತ್ಮಹತ್ಯೆ ತಡೆಗಟ್ಟಲು ಪ್ರತಿಯೋರ್ವ ವ್ಯಕ್ತಿಯೂ ಸಹಾಯ ಮಾಡಬಹುದು. ಆತ್ಮಹತ್ಯೆಯ ನಡವಳಿಕೆಯು ಒಂದು ಜಾಗತಿಕ ಸಮಸ್ಯೆಯಾಗಿದ್ದು, ಇದಕ್ಕೆ ಯಾವುದೇ ಸೀಮೆಗಳಿಲ್ಲ, ಇದು ಯಾರನ್ನೂ ಕಾಡಬಹುದು. ಆತ್ಮಹತ್ಯೆಯ ನಡವಳಿಕೆಯಿರುವ ಜನರ ಅನುಭವಗಳು ಅತ್ಯಮೂಲ್ಯವಾದವುಗಳು, ಅವರ ಅನುಭವ ಹಾಗೂ ಹೋರಾಟಗಳನ್ನು ಹಂಚಿಕೊಳ್ಳುವುದರಿಂದ ಸುತ್ತಮುತ್ತಲಿನ ಎಲ್ಲರಿಗೂ ಉಪಯೋಗವಾಗುತ್ತದೆ. ಆತ್ಮಹತ್ಯೆಯ ಬಗ್ಗೆ ಅರಿವು ಮೂಡಿಸಲು, ಆತ್ಮಹತ್ಯೆಯನ್ನು ತಡೆಗಟ್ಟಲು “ಅಂತಾರಾಷ್ಟ್ರಿಯ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆ’ ಪ್ರತಿ ವರ್ಷ ಸೆಪ್ಟಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸುತ್ತದೆ. ಕಳೆದ ವರ್ಷದ ಧೈಯವಾಕ್ಯವನ್ನೇ, “ಆತ್ಮಹತ್ಯೆ ತಡೆಗಟ್ಟಲು ಜತೆಗೂಡಿ ಕೆಲಸ ಮಾಡುವುದು’ (ಗಟ್ಟkಜಿnಜ ಖಟಜಛಿಠಿಜಛಿr ಠಿಟ ಕrಛಿvಛಿnಠಿ ಖuಜಿcಜಿಛಛಿ) ಈ ವರ್ಷವೂ ಕೂಡ ಮುಂದುವರಿಸಲಾಗಿದೆ. ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಪ್ರತಿವರ್ಷ ಅಕ್ಟೋಬರ್ 10ರಂದು ಆಚರಿಸಲಾಗುತ್ತದೆ ಹಾಗೂ ಈ ವರ್ಷದ ಧ್ಯೇಯ ವಾಕ್ಯ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಇದೆ. ಈ ನಿಟ್ಟಿನಲ್ಲಿ ಪ್ರಪಂಚಾದ್ಯಂತ ಈ ದಿನದಂದು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಎಲ್ಲ ಸ್ತರಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ನೆನಪಿಡಿ
ಆತ್ಮಹತ್ಯೆಯನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಸಣ್ಣ ಪ್ರಯತ್ನಗಳು ಕೂಡ ಇತರರ ಜೀವನದಲ್ಲಿ ಬೃಹತ್ ಬದಲಾವಣೆಗಳನ್ನು ತರಬಲ್ಲವು. ಎಲ್ಲ ಪ್ರಶ್ನೆಗಳಿಗೆ ನಮ್ಮ-ನಿಮ್ಮ ಬಳಿ ಉತ್ತರಗಳಿರದಿರಬಹುದು, ಆದರೆ ಮಾಡುವ ಪ್ರಯತ್ನಗಳಿಗೆ ತಕ್ಕ ಫಲ ದೊರೆಯುತ್ತದೆ. ಡಾ| ರವೀಂದ್ರ ಮುನೋಳಿ,
ಸಹಪ್ರಾಧ್ಯಾಪಕ
ಮನೋರೋಗ ಚಿಕಿತ್ಸಾ ವಿಭಾಗ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ