Advertisement

ಇಂದಿನ ಯುವ ಪೀಳಿಗೆ ಸಂಶೋಧನೆಯಲ್ಲಿ ತೊಡಗಲಿ

01:00 PM May 30, 2017 | |

ಮೈಸೂರು: ದೇಶದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ತಿಳಿವಳಿಕೆ ಪಡೆಯಲು ಯುವಪೀಳಿಗೆ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕ ಪೊ›.ಅ.ಸುಂದರ ಹೇಳಿದರು.

Advertisement

ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ನಗರದ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಸೋಮವಾರ ಆಯೋಜಿಸಿದ್ದ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿ, ಪರಂಪರೆ ಅತ್ಯಮೂಲ್ಯ ಪ್ರಾಚೀನತೆ ಹೊಂದಿದ್ದರೂ, ನಮ್ಮ ಪುರಾತನ ಸಂಸ್ಕೃತಿ, ಆಡಳಿತ ಹಾಗೂ ಇನ್ನಿತರ ವಿಷಯದ ಕುರಿತು ಬೆಳಕು ಚೆಲ್ಲುವ ಆಧಾರಗಳ ಸಂಖ್ಯೆ ಅತ್ಯಂತ ವಿರಳವಾಗಿದೆ. ಅಲ್ಲದೆ ದೇಶದ ಇತಿಹಾಸ ಕುರಿತು ತಿಳಿವಳಿಕೆ ಪ್ರಮಾಣವೂ ಕಡಿಮೆ ಇರುವುದರಿಂದ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ತಿಳಿಸಿದರು.

ದೇಶದ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿವಳಿಕೆಯ ಪ್ರಮಾಣ ಕಡಿಮೆ ಇರಲು ನಮ್ಮಲ್ಲಿ ಸಂಶೋಧನೆ ಕೊರತೆಯೆ ಪ್ರಮುಖ ಕಾರಣವಾಗಿದೆ. ಇಂದಿಗೂ ದೇಶದ ಪ್ರಾಚೀನ ಇತಿಹಾಸದ ಬಗ್ಗೆ ಶೇ.80 ರಷ್ಟು ಅಧ್ಯಯನ ನಡೆದಿಲ್ಲ, ಅಲ್ಲದೆ ಸಂಶೋಧನೆ ನಡೆದಿರುವ ಶೇ.20ರಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಿಡಿಸಬೇಕಿದೆ.

ಪ್ರಸ್ತುತ ಸಂದರ್ಭದಲ್ಲಿ ರಾಜ ಮಹಾರಾಜರ ಬಗ್ಗೆ ಯುವಕರು ಶೇ.20 ಮಾತ್ರ ಸಂಶೋಧನೆ ಮಾಡುತ್ತಾರೆ. ಅದರಂತೆ ನಮ್ಮ ದೇಶದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಕುರಿತು ಸಂಶೋಧನೆಗಳು ನಡೆಯಬೇಕಿದ್ದು, ದೇಶದ ಅಭಿವೃದ್ಧಿ ಇಂದಿನ ಯುವಜನ ಮುಂದಿನ ಯುವಪೀಳಿಗೆಗೆ ಸಂಶೋಧನೆ ನಡೆಸಿ, ಅವುಗಳನ್ನು ಉಳಿಸಿ ಬೆಳೆಸಬೇಕು ಎಂದರು.

Advertisement

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಕ್ಷೆ ಡಾ.ವಿ. ಶೋಭಾ ಮಾತನಾಡಿ, ದೇಶ ಸುತ್ತು -ಕೋಶ ಓದು ಎನ್ನುವ ನುಡಿಮುತ್ತಿನಂತೆ ಇತೀಚಿನ ದಿನದಲ್ಲಿ ಯುವ ಜನತೆಯಲ್ಲಿ ದೇಶ ಸುತ್ತುವುದು ಹೆಚ್ಚಾಗುತ್ತಿದೆ. ಆದರೆ ಕೋಶ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಉತ್ತಮ ಸಂಶೋಧನಾ ಕೌಶಲ್ಯ ಮೈಗೂಡಿಸಿಕೊಳ್ಳಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಭಾರತೀಯ ಶಾಸನಶಾಸ್ತ್ರ ಭಾರತೀಯ ಸರ್ವೇಕ್ಷಣಾ ಇಲಾಖೆ ಪ್ರಭಾರ ನಿರ್ದೇಶಕ ಡಾ.ಕೆ.ಮುನಿರತ್ನಂ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ವಿ. ಕೃಷ್ಣಪ್ಪ, ರಾಜ್ಯ ಪತ್ರಗಾರ ಇಲಾಖೆ ಉಪನಿರ್ದೇಶಕಿ ಡಾ.ಎಸ್‌. ಅಂಬುಜಾಕ್ಷಿ, ವಿಭಾಗದ ಸಂಯೋಜಕ ಡಾ.ಜಿ.ಕರಿಯಪ್ಪ, ಸಹ ಸಂಯೋಜಕ ಡಾ. ಪ್ರ¸‌ು, ಪುರಾತತ್ವ ಇಲಾಖೆ ಉಪ ನಿರ್ದೇಶಕ ಗವಿಸಿದ್ದಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next