Advertisement
ದಿಲ್ಲಿ ಕರ್ನಾಟಕದ ಸಂಘದ ವಿಚಾರ ಸಂಕಿರಣ ಸಭಾ ಭವನದಲ್ಲಿ ಇತ್ತೀಚೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ಟ್ರಸ್ಟ್ ದಿಲ್ಲಿ ಘಟಕ ಹಾಗೂ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ದಿಲ್ಲಿ ತುಳುಸಿರಿ, ಗೋಕರ್ಣ ಮಂಡಳ, ದಿಲ್ಲಿ ಬಿಲ್ಲವ ಅಸೋಸಿಯೇಶನ್ ಇವುಗಳ ಸಹಯೋಗದೊಂದಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ದಿಲ್ಲಿ ಘಟಕದ ಟ್ರಸ್ಟಿ ಕೆ.ಎನ್. ಭಟ್ ಮಾತನಾಡಿ, ಯಕ್ಷಗಾನರಂಗದಲ್ಲಿ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರ ಸಾಧನೆ ಮಹತ್ತರವಾದುದು. ಈ ಸಾಧನೆಯನ್ನು ಸಂಘ -ಸಂಸ್ಥೆಗಳು ಮಾತ್ರವಲ್ಲದೆ ಸರಕಾರವು ಗುರುತಿಸಿ ಗೌರವಿಸಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ ಎಂದು ಹೇಳಿದರು.
Related Articles
Advertisement
ದಿಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯಅಧ್ಯಕ್ಷ ಸರವು ಕೃಷ್ಣ ಭಟ್, ಬಂಟ್ಸ್ ಕಲ್ಚರಲ್ ಅಸೋಸಿಯೇಶನ್ ಖಜಾಂಚಿ ಕೆ.ಎಸ್.ಜಿ. ಶೆಟ್ಟಿ, ದಿಲ್ಲಿ ತುಳುಸಿರಿಯ ಅಧ್ಯಕ್ಷ ಕೆ.ಆರ್. ರಾಮಮೂರ್ತಿ, ಗೋಕರ್ಣ ಮಂಡಳದ ಮಾಜಿ ಅಧ್ಯಕ್ಷ ನಾರಾಯಣ ಭಟ್ ಉಪಸ್ಥಿತರಿದ್ದರು. ದಿಲ್ಲಿ ತುಳುಸಿರಿಯ ಕಾರ್ಯದರ್ಶಿ ಪ್ರದೀಪ್ ಕೆ. ಅವರು ಸ್ವಾಗತಿಸಿ, ನಿರೂಪಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ದಿಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಪೃಥ್ವಿ ಕಾರಿಂಜೆ ವಂದಿಸಿದರು.
ತಾಳಮದ್ದಳೆ ಸಮಾರಂಭದ ಬಳಿಕ ನಡೆದ ರಣವೀಳ್ಯ ಯಕ್ಷಗಾನ ತಾಳಮದ್ದಳೆಯಲ್ಲಿ ಕೌರವನಾಗಿ ಕೆ. ಗೋವಿಂದ ಭಟ್, ಕೃಷ್ಣನಾಗಿ ಉಜಿರೆ ಅಶೋಕ್ ಭಟ್, ವಿಧುರನಾಗಿ ಮುಮ್ಮೇಳದಲ್ಲಿ ರಂಜಿತಾ ಎಲ್ಲೂರು, ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಪಿ.ಜಿ. ಜಗನ್ನಿವಾಸ, ಯೋಗಿಶ್ ಆಚಾರ್ಯ ಭಾಗವಹಿಸಿದ್ದರು.