ಧಾರವಾಡ: ಶಾಸಕನಾಗಿ ನನ್ನ ಕೆಲಸವನ್ನು ಚೆನ್ನಾಗಿ ಬಲ್ಲ ನೀವು, ಸಂಸದನಾಗಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ನಯವಂಚಕರನ್ನು ಈ ಸಾರಿ ಮನೆಗೆ ಕಳಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದ ಪ್ರಹ್ಲಾದ ಜೋಶಿ ಏನೂ ಕೆಲಸ ಮಾಡದಿದ್ದರೂ ಅಧಿಕಾರ ಪಡೆದರು. ಈ ವೇಳೆ ನೀಡಿದ ಒಂದೇ ಒಂದು ಭರವಸೆ ಈಡೇರಿಸಲಿಲ್ಲ ಎಂದರು.
ಸಂಸದರ ಆದರ್ಶ ಗ್ರಾಮವನ್ನೇ ಮಾದರಿ ಮಾಡದ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಏನು ಉದ್ಧಾರ ಮಾಡುತ್ತಾರೆ? ಜೋಶಿಗೆ ಮೂರು ಬಾರಿ ಅವಕಾಶ ಕೊಟ್ಟು ನೋಡಿದಿರಿ. ಏನೂ ಪ್ರಯೋಜನ ಆಗಿಲ್ಲ ಎಂದು ನೀವೇ ಹೇಳುತ್ತಿರುವಿರಿ. ದಯವಿಟ್ಟು ಈ ಸಾರಿ ನನಗೆ ಒಂದು ಅವಕಾಶ ಕೊಟ್ಟು, ಬದಲಾವಣೆ ಗಮನಿಸಿ ಎಂದು ಮನವಿ ಮಾಡಿದರು.
ನಗರದಲ್ಲೂ ಮತಯಾಚನೆ: ಶುಕ್ರವಾರ ಬೆಳಗ್ಗೆ ಧಾರವಾಡದ ಕೋಳಿಕೇರಿ, ಹೆಬ್ಬಳ್ಳಿ ಅಗಸಿ ಹಾಗೂ ಮದಿಹಾಳದಲ್ಲಿ ವಿನಯ್ ಮತಯಾಚನೆ ಮಾಡಿದರು. ಸಂಸದನಾಗಿ ಕೆಲಸ ಮಾಡಲು ನನಗೆ ಒಂದು ಅವಕಾಶ ಕೊಟ್ಟು ನೋಡಿ ಎಂದು ಭಾವುಕರಾದರು. ದೀಪಕ ಚಿಂಚೋರೆ, ಯಾಸೀಬ್ ಹಾವೇರಿಪೇಟ ಇನ್ನಿತರರಿದ್ದರು.
ನವಲಗುಂದ: ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಏ. 20ರಂದು ಸಾಯಂಕಾಲ 6 ಗಂಟೆಗೆ ಇಲ್ಲಿನ ಮಾಡಲ್ ಹೈಸ್ಕೂಲ್ ಆವರಣಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ, ಮಾಜಿ ಶಾಸಕ ಡಾ| ಆರ್.ಬಿ. ಶಿರಿಯಣ್ಣವರ, ಯುವ ಮುಖಂಡ ವಿನೋದ ಅಸೂಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಯಾರೇ ಬಂದರೂ ನನ್ನ ಗೆಲುವನ್ನು ತಡೆಗಟ್ಟಲು ಸಾಧ್ಯವಿಲ್ಲ. ಎರಡು ಲಕ್ಷ ಮತಗಳಿಂದ ಆರಿಸಿ ಬರುವುದು ಶತಸಿದ್ಧ. ಲಿಂಗಾಯತ ಮತದಾರರು ಈ ಸಾರಿ ನನ್ನನ್ನು ಬೆಂಬಲಿಸುತ್ತಿರುವುದನ್ನು ತಿಳಿದು ಕಂಗಾಲಾಗಿರುವ ಜೋಶಿ, ಅಮಿತ್ ಶಾ ಅವರ ಕಡೆಯಿಂದ ಲಿಂಗಾಯತ ಲೀಡರ್‌ಗಳಿಗೆ ಫೋನ್ ಮಾಡಿಸಿ ಒತ್ತಡ ಹೇರುತ್ತಿದ್ದಾರೆ.
ವಿನಯ ಕುಲಕರ್ಣಿ,ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ
Advertisement
ಗರಗ, ತಡಕೋಡ, ಕೊಟಬಾಗಿ, ಪುಡಕಲಕಟ್ಟಿ, ಕರಡಿಗುಡ್ಡ, ತಿಮ್ಮಾಪುರ, ಮರೇವಾಡ, ಅಮ್ಮಿನಬಾವಿಯಲ್ಲಿ ಶುಕ್ರವಾರ ಮತಯಾಚಿಸಿ ಅವರು ಮಾತನಾಡಿದರು. ಕೆಲ ಕಾರಣಗಳಿಂದ ನನ್ನ ಮೇಲೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವರು ಮುನಿಸಿಕೊಂಡಿದ್ದರು. ಅವರೆಲ್ಲರೂ ಮತ್ತೆ ನನ್ನ ಕೈ ಹಿಡಿದಿದ್ದಾರೆ. ನಾನು ಅವರೊಂದಿಗೆ ಎಂದೂ ಮನಸ್ತಾಪ ಮಾಡಿಕೊಂಡಿಲ್ಲ. ಈ ಸಾರಿ ಅವರೆಲ್ಲ ನನ್ನನ್ನು ಸಂಸದನಾಗಿ ಮಾಡಿ ನಿಮ್ಮ ಸೇವೆ ಮಾಡಿಸಲು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ತರದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
Related Articles
Advertisement
ಪ್ರಚಾರಕ್ಕಿಂದು ನವಲಗುಂದಕ್ಕೆ ಸಿದ್ದರಾಮಯ್ಯನವಲಗುಂದ: ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಏ. 20ರಂದು ಸಾಯಂಕಾಲ 6 ಗಂಟೆಗೆ ಇಲ್ಲಿನ ಮಾಡಲ್ ಹೈಸ್ಕೂಲ್ ಆವರಣಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ, ಮಾಜಿ ಶಾಸಕ ಡಾ| ಆರ್.ಬಿ. ಶಿರಿಯಣ್ಣವರ, ಯುವ ಮುಖಂಡ ವಿನೋದ ಅಸೂಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಯಾರೇ ಬಂದರೂ ನನ್ನ ಗೆಲುವನ್ನು ತಡೆಗಟ್ಟಲು ಸಾಧ್ಯವಿಲ್ಲ. ಎರಡು ಲಕ್ಷ ಮತಗಳಿಂದ ಆರಿಸಿ ಬರುವುದು ಶತಸಿದ್ಧ. ಲಿಂಗಾಯತ ಮತದಾರರು ಈ ಸಾರಿ ನನ್ನನ್ನು ಬೆಂಬಲಿಸುತ್ತಿರುವುದನ್ನು ತಿಳಿದು ಕಂಗಾಲಾಗಿರುವ ಜೋಶಿ, ಅಮಿತ್ ಶಾ ಅವರ ಕಡೆಯಿಂದ ಲಿಂಗಾಯತ ಲೀಡರ್‌ಗಳಿಗೆ ಫೋನ್ ಮಾಡಿಸಿ ಒತ್ತಡ ಹೇರುತ್ತಿದ್ದಾರೆ.
ವಿನಯ ಕುಲಕರ್ಣಿ,ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ